/newsfirstlive-kannada/media/post_attachments/wp-content/uploads/2025/05/Mangalore-Rain-Rescue-1.jpg)
ಮಂಗಳೂರು ಹೊರವಲಯದ ಮೊಂಟೆಪದವಿ ಗುಡ್ಡ ಕುಸಿತ ಕರುಣಾಜನಕ ದೃಶ್ಯಗಳ ಸರಮಾಲೆಯಾಗಿದೆ. ನಿನ್ನೆ ಧಾರಾಕಾರ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಮೂವರು ಬಲಿಯಾಗಿದ್ದರು. ಇದೀಗ ಅದೃಷ್ಟವಶಾತ್ ಪಾರಾದ ಮಹಿಳೆಯ 2 ಕಾಲು ಕಟ್ ಮಾಡುವ ಪರಿಸ್ಥಿತಿ ಎದುರಾಗಿದೆ.
ನಿನ್ನೆ ನಿರಂತರ 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದರು ಒಂದೇ ಮನೆಯಲ್ಲಿದ್ದ 5 ಮಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿತ್ತು. ಉಳಿದಂತೆ ಅಜ್ಜಿ ಪ್ರೇಮಾ, ಚಿಕ್ಕ ಮಕ್ಕಳಾದ ಆರ್ಯನ್-ಆರುಷ್ ಪ್ರಾಣ ಬಿಟ್ಟಿದ್ದರು.
ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟ ಇಬ್ಬರು ಮಕ್ಕಳು ಹಾಗೂ ಅಜ್ಜಿಗೆ ಕಣ್ಣೀರ ವಿದಾಯ ಹೇಳಲಾಗಿದೆ. ಅಂತ್ಯಕ್ರಿಯೆಯ ದುಃಖದಲ್ಲಿರೋ ಮಕ್ಕಳ ತಾಯಿಗೆ ಮತ್ತೊಂದು ಆಘಾತ ಎದುರಾಗಿದೆ.
/newsfirstlive-kannada/media/post_attachments/wp-content/uploads/2025/05/Mangalore-Rain-Rescue-2.jpg)
ಮನೆಯಲ್ಲಿ ನಿತ್ರಾಣಗೊಂಡಿದ್ದ ಮಹಿಳೆ ಅಶ್ವಿನಿಯವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅಶ್ವಿನಿ ಅವರು ಈಗ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಸ್ವಾಧೀನ ಕಳೆದುಕೊಂಡಿದ್ರಿಂದ ಗಾಯಾಳು ಅಶ್ವಿನಿಗೆ ಶಸ್ತ್ರಚಿಕಿತ್ಸೆ ಮಾಡಿ ಎರಡೂ ಕಾಲುಗಳನ್ನು ತೆಗೆಯಲಾಗಿದೆ.
ಇದನ್ನೂ ಓದಿ: ಹೇಮಾವತಿ ನೀರಿಗಾಗಿ ತುಮಕೂರು ರೈತರ ಹೋರಾಟ ಯಾಕೆ? ಏನಿದರ ಇತಿಹಾಸ? ಅಸಲಿಗೆ ಆಗಿದ್ದೇನು?
1 ಕಾಲಿನ ಪಾದದ ಭಾಗ, ಮತ್ತೊಂದು ಪೂರ್ತಿ ಕಾಲು ಕಟ್ ಮಾಡಲಾಗಿದೆ. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿಗೆ 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us