/newsfirstlive-kannada/media/post_attachments/wp-content/uploads/2025/03/Ranya-roa-Gold-Case-6.jpg)
ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಖಿನ್ನತೆ ಒಳಗಾಗಿದ್ದಾರಂತೆ. ಸೆಲ್ನಲ್ಲಿ ಇತರೆ ಸಹ ಕೈದಿಗಳಿಗೆ ನಟಿಯನ್ನು ಹಿಯಾಳಿಸುತ್ತ. ಟಾರ್ಚರ್ ಕೊಡ್ತಿದ್ರಂತೆ. ಇದರಿಂದ ಎಚ್ಚೆತ್ತ ಜೈಲು ಸಿಬ್ಬಂದಿ ರನ್ಯಾ ಜೊತೆ ಇದ್ದ ಸಹಾ ವಿಚಾರಣಾಧೀನ ಕೈದಿಗಳನ್ನು ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!
ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟು, ಪಟಾಕಿಯಲ್ಲಿ ನಟ ಗಣೇಶ್ಗೆ ಗೋಲ್ಡನ್ ಗರ್ಲ್ ಆಗಿ ಪ್ರೇಕ್ಷಕರ ಮನಗೆದ್ದಿದ್ದ, ನಟಿ ರನ್ಯಾ ರಾವ್. ಸದ್ಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಜಾಮೀನು ಸಿಗದೇ ಪಂಜರದ ಗಿಳಿಯಂತೆ ಒದ್ದಾಡುತ್ತಿರುವ ದುಬೈ ಬಂಗಾರಿ ರನ್ಯಾ ಸದ್ಯ ಜೈಲಲ್ಲಿ ಖಿನ್ನತೆಗೆ ಜಾರಿದ್ದಾರೆ ಎಂದು ತಿಳಿದು ಬಂದಿದೆ.
ಚಿನ್ನದ ಕಳ್ಳ ಸಾಗಾಣೆ ಕೇಸ್ನಲ್ಲಿ ನಟಿ ರನ್ಯಾ ರಾವ್ ಜೈಲು ಸೇರಿ ತಿಂಗಳುಗಳೇ ಉರುಳಿವೆ. ದುಬೈ ಬಂಗಾರಿಯ ಹಿಂದೆ ಬಿದ್ದಿರುವ ಐ.ಟಿ ಇ.ಡಿ ಅಧಿಕಾರಿಗಳು ತನಿಖೆ ನಡೆಸ್ತಿದ್ದಾರೆ. ಮೊದ ಮೊದಲು ಜೈಲು ಹೊಂದಾಣಿಕೆ ಆಗದೆ ಸೋತು ಸೋರಗಿ ಹೋಗಿದ್ದ ನಟಿ. ಜೈಲಿನಲ್ಲಿ ಮಹಿಳಾ ವಿಚಾರಣಾಧೀನಾ ಕೈದಿಗಳ ಬಳಿ ನಾನು ತಪ್ಪು ಮಾಡಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸಲಾಗಿದೆ ಎಂದು ರನ್ಯಾ ರಾವ್ ಹೇಳಿಕೊಳ್ತಿದ್ಲಂತೆ. ಆದ್ರೆ ನಟಿ ಮಾತಿಗೆ ಸೊಪ್ಪು ಹಾಕದೇ ಸಹ ವಿಚಾರಣಾಧೀನ ಕೈದಿಗಳು ನಟಿಯನ್ನು ಹಿಯಾಳಿಸಿ, ವ್ಯಂಗ್ಯ ಮಾಡ್ತಿದ್ರಂತೆ. ಇದರಿಂದ ರನ್ಯಾ ರಾವ್ ಜೈಲಿನಲ್ಲಿ ಖಿನ್ನತೆಗೆ ಒಳಗಾಗಿದ್ರು ಎಂದು ತಿಳಿದು ಬಂದಿದೆ.
ಈ ವಿಷ್ಯ ತಿಳಿದು ಅಲರ್ಟ್ ಆದ ಜೈಲು ಅಧಿಕಾರಿಗಳು ನಟಿಯನ್ನು ವ್ಯಂಗ್ಯ ಮಾಡ್ತಿದ್ದ ಸಹ ವಿಚಾರಣಾಧೀನ ಕೈದಿಗಳನ್ನು ಬೇರೆ ಬೇರೆ ಬ್ಯಾರಕ್ಗೆ ಜೈಲು ಅಧಿಕಾರಿಗಳು ಶಿಫ್ಟ್ ಮಾಡಿದ್ದಾರೆ. ಸದ್ಯ ಖಿನ್ನತೆಯಿಂದ ಹೊರ ಬರಲು ರನ್ಯಾ ರಾವ್ ಪುಸ್ತಕಗಳ ಮೊರೆ ಹೋಗಿದ್ದಾರೆ. ಜೈಲಿನ ಲೈಬ್ರರಿಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಳ ಮಾಡಿಕೊಂಡು, ಪುಸ್ತಕ ಓದುವ ಮೂಲಕ ಕಾಲ ದೂಡುತ್ತಿದ್ದಾರಂತೆ. ಬೆಳ್ಳಿ ತೆರೆಯ ಬೆಲೆ ಮಿಂಚ ಬೇಕಿದ್ದ ಬಂಗಾರದ ಬೆಡಗಿ ಸದ್ಯ ಕಬ್ಬಿಣದ ಪಂಜರದಲ್ಲಿ ಸೆರೆಯಾಗಿ ಹೊರ ಬರಲು ಪರದಾಡುತ್ತಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ