/newsfirstlive-kannada/media/post_attachments/wp-content/uploads/2024/12/Devdutt-Padikkal-RCB-News.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಕ್ತಾಯಗೊಂಡಿದೆ. ಈ ಬಾರಿ ಹರಾಜಿನಲ್ಲಿ ಆರ್ಸಿಬಿ ಬರೋಬ್ಬರಿ 19 ಆಟಗಾರರನ್ನು ಖರೀದಿ ಮಾಡಿದೆ. ಆರ್ಸಿಬಿ ಈ ಮೂಲಕ ಮುಂದಿನ ಸೀಸನ್ಗೆ 22 ಆಟಗಾರರ ಬಲಿಷ್ಠ ತಂಡ ರೂಪಿಸಿದೆ.
ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿ, ಯಶ್ ದಯಾಳ್ ಹಾಗೂ ರಜತ್ ಪಾಟಿದಾರ್ ರೀಟೈನ್ ಮಾಡಿಕೊಂಡಿತ್ತು. ಈಗ ನಡೆದ ಮೆಗಾ ಹರಾಜಿನಲ್ಲೂ 19 ಆಟಗಾರರನ್ನು ಖರೀದಿ ಮಾಡಿತು. ಅಚ್ಚರಿ ಎಂದರೆ ಆರ್ಸಿಬಿ ಯಾವುದೇ ಕ್ಯಾಪ್ಟನ್ ಆಗೋ ಸಾಮರ್ಥ್ಯ ಇರೋ ಆಟಗಾರನನ್ನು ಬಿಡ್ ಮಾಡದಿರುವುದು. ಹಾಗಾಗಿ ಕೊಹ್ಲಿಯೇ ಮುಂದಿನ ಕ್ಯಾಪ್ಟನ್ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಆರ್ಸಿಬಿಗೆ ರೀ ಎಂಟ್ರಿ ಕೊಟ್ಟ ಸ್ಟಾರ್ ಆಟಗಾರನಿಗೆ ಶಾಕಿಂಗ್ ನ್ಯೂಸ್ ಒಂದಿದೆ.
ಪಡಿಕ್ಕಲ್ಗೆ ಸಿಗಲ್ಲ ಅವಕಾಶ
ಸ್ಟಾರ್ ಕನ್ನಡಿಗ ದೇವದತ್ ಪಡಿಕ್ಕಲ್ ಆರ್ಸಿಬಿಗೆ ರೀ ಎಂಟ್ರಿ ನೀಡಿದ್ದಾರೆ. ಇವರನ್ನು RCB 2 ಕೋಟಿಗೆ ಖರೀದಿಸಿದೆ. ಆದರೆ ಅವರಿಗೆ ಆಡುವ ಅವಕಾಶ ತುಂಬಾ ಕಡಿಮೆ ಎಂಬುದೇ ಅಚ್ಚರಿ. ಇದಕ್ಕೆ ಕಾರಣ ಅವರ ಕಳಪೆ ಫಾರ್ಮ್. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನೀಡಿದ ಪ್ರದರ್ಶನ ಅಷ್ಟಕಷ್ಟೇ. RCB ಮಿಡಲ್ ಆರ್ಡರ್ ಬ್ಯಾಟರ್ ಆಗಿ ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ದಂಡು ಇದೆ. ಇಂತಹ ಪರಿಸ್ಥಿತಿಯಲ್ಲಿ ಪಡಿಕ್ಕಲ್ಗೆ ಅವಕಾಶ ಸಿಗೋದು ಕಷ್ಟ.
80ಕ್ಕೂ ಹೆಚ್ಚು ಕೋಟಿಯೊಂದಿಗೆ ಹರಾಜಿಗೆ ಬಂದ ಆರ್ಸಿಬಿ ಮೊದಲ ದಿನವೇ ಬರೋಬ್ಬರಿ 50 ಕೋಟಿ ಖರ್ಚು ಮಾಡಿತ್ತು. 2ನೇ ದಿನ ಉಳಿದ 30 ಕೋಟಿಯನ್ನು ಆಟಗಾರರ ಮೇಲೆ ಸುರಿಯಿತು. ಈ ಪೈಕಿ ಆರ್ಸಿಬಿ ಜೋಶ್ ಹೇಜಲ್ವುಡ್ಗೆ 12.50 ಕೋಟಿ, ಫಿಲ್ ಸಾಲ್ಟ್ಗೆ 11.50 ಕೋಟಿ ರೂ., ಜಿತೇಶ್ ಶರ್ಮಾಗೆ 11.00 ಕೋಟಿ ರೂ., ಭುವನೇಶ್ವರ್ ಕುಮಾರ್ಗೆ 10.75 ಕೋಟಿ ರೂ., ಲಿಯಾಮ್ ಲಿವಿಂಗ್ಸ್ಟೋನ್ಗೆ ಸುಮಾರು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಕೊನೆಯ ದಿನ ದೇವದತ್ ಪಡಿಕ್ಕಲ್ ಅವರನ್ನು ಆರ್ಸಿಬಿ 2 ಕೋಟಿಗೆ ಖರೀದಿ ಮಾಡಿದೆ.
ಇದನ್ನೂ ಓದಿ:ಬೆಸ್ಟ್ ಪ್ಲೇಯಿಂಗ್ ಎಲೆವೆನ್; ತಂಡದಿಂದ ಕೊಹ್ಲಿ, ರೋಹಿತ್ ಔಟ್; ಬುಮ್ರಾಗೆ ಕ್ಯಾಪ್ಟನ್ಸಿ ಪಟ್ಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ