/newsfirstlive-kannada/media/post_attachments/wp-content/uploads/2024/06/Darshan-Arrest-Case-8.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ಚಪಾತಿ ತಿನ್ನುತ್ತಿದ್ದಾರೆ. ಇದೇ ಜೈಲೂಟ ದರ್ಶನ್ ಅವರಿಗೆ ಅತಿ ದೊಡ್ಡ ಚಾಲೆಂಜಿಂಗ್ ಆಗುತ್ತಿದೆ. ಒಗ್ಗದ ಜೈಲೂಟವನ್ನು ತಿನ್ನಲೇಬೇಕಾದ ಪರಿಸ್ಥಿತಿಯಲ್ಲಿ ದರ್ಶನ್ ಅವರಿದ್ದಾರೆ. ನಿನ್ನೆ ಭಾನುವಾರ ಜೈಲಿನಲ್ಲಿ ನಾನ್ ವೆಜ್ ಊಟ ಮಾಡಿದ್ದರೂ ದರ್ಶನ್ ಅವರು ಊಟ ಮಾಡಲು ತಿರಸ್ಕರಿಸಿದ್ದಾರೆ. ಸದಾ ನಾನ್ ವೆಜ್ ಪ್ರಿಯರಾಗಿದ್ದ ದರ್ಶನ್ ಅವರು ಈಗ ನಾನ್ ವೆಜ್ ಕಡೆ ಕೂಡ ಮುಖಮಾಡಿಲ್ಲ ಎನ್ನಲಾಗಿದೆ.
ದರ್ಶನ್ ಅವರು ಮೆಜೆಸ್ಟಿಕ್ ಚಿತ್ರಕ್ಕೂ ಮುಂಚಿನಿಂದಲು ಕನ್ನಡ ಸಿನಿ ರಂಗದಲ್ಲಿದ್ದಾರೆ. ಸರಿ ಸುಮಾರು 25 ವರ್ಷಗಳಿಂದ ದರ್ಶನ್ ಅವರು ಸ್ಯಾಂಡಲ್ವುಡ್ನಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎಂದೇ ಖ್ಯಾತಿ ಪಡೆದಿದ್ದಾರೆ.
ಮೆಜೆಸ್ಟಿಕ್, ಕರಿಯ, ಸಾರಥಿ, ಭೂಪತಿ, ರಾಬರ್ಟ್, ಕಾಟೇರ ಸಿನಿಮಾದಲ್ಲಿ ದರ್ಶನ್ ಅವರಿಗೆ ಆ್ಯಕ್ಟಿಂಗ್ ಮತ್ತು ಕಟ್ಟು ಮಸ್ತಾದ ದೇಹವೇ ಪ್ಲಸ್ ಪಾಯಿಂಟ್ ಆಗಿದೆ. ಇಷ್ಟು ವರ್ಷ ದರ್ಶನ್ ಅವರು ತಮ್ಮ ಬಾಡಿ ಫಿಟ್‌ನೆಸ್, ಡಯೆಟ್ಗೆ ಹೆಚ್ಚು ಒತ್ತು ನೀಡಿದ್ದರು.
ಜೈಲೂಟದಿಂದ ಫಿಟ್‌ನೆಸ್ ಅಸಾಧ್ಯ!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ದರ್ಶನ್ ಅವರಿಗೆ ಈಗ ಜೈಲೂಟವೇ ದೊಡ್ಡ ಸವಾಲಾಗಿದೆ. ಯಾಕಂದ್ರೆ ಸಿನಿಮಾ ಕ್ಷೇತ್ರದಲ್ಲಿ ಯಾವಾಗಲೂ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿರಬೇಕು. ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಅವರಿಗೆ ಸದ್ಯ ಸಿಗುತ್ತಿರುವ ಊಟದಿಂದ ಇದೆಲ್ಲಾ ಸಾಧ್ಯವೇ ಇಲ್ಲ.
ಆರೋಪಿ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಯಂತೆ ಇರಬೇಕು. ಇಲ್ಲಿ ಡಯೆಟ್ ಫುಡ್ ಇರಲ್ಲ. ದೊಡ್ಡ, ದೊಡ್ಡ ಸ್ಟಾರ್‌ಗಳಂತೆ ಪ್ರತಿದಿನ ಜಿಮ್ ಮಾಡೋದಕ್ಕೂ ಸಾಧ್ಯವಿಲ್ಲ. ಇದರಿಂದ ಜೈಲು ಸೇರಿರುವ ಕಾರಣ ದರ್ಶನ್ ಅವರ ದೇಹ ರಚನೆಯಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿದೆ.
ಬಿಡುಗಡೆ ಆದ ಮೇಲೂ ಆಪತ್ತು!
ಜೈಲಿನಲ್ಲಿರುವ ದರ್ಶನ್ ಅವರಿಗೆ ಬಾಡಿ ಫಿಟ್ನೆಸ್ಗೆ ಬೇಕಾದ ಆಹಾರ ಸಿಗುತ್ತಿಲ್ಲ. ಇದರಿಂದ ದರ್ಶನ್ ತೂಕದಲ್ಲಿ ವ್ಯತ್ಯಾಸ ಆಗಲಿದೆ. ಇದರಿಂದ ಬಾಡಿ ಫಿಟ್‌ನೆಸ್ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ ಜೈಲಿನಿಂದ ಬಂದ ಬಳಿಕವೂ ದರ್ಶನ್ ಮೊದಲಿನಂತೆ ಫಿಟ್ & ಫೈನ್ ಆಗಿರೋದು ಕಷ್ಟವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ