/newsfirstlive-kannada/media/post_attachments/wp-content/uploads/2025/02/Cooking-Oils.jpg)
ಬೆಂಗಳೂರು: ದಿನನಿತ್ಯ ಬೆಲೆ ಏರಿಕೆಗೆ ತತ್ತರಿಸಿ ಹೋಗಿರುವ ಜನಸಾಮಾನ್ಯರು, ಗೃಹಿಣಿಯರಿಗೆ ಮತ್ತೊಂದು ಶಾಕ್ ಬಂದಿದೆ. ಬಸ್, ಮೆಟ್ರೋ ಟಿಕೆಟ್ ದರ ಏರಿಕೆಯ ಬೆನ್ನಲ್ಲೇ ಇದೀಗ ಅಡುಗೆ ಎಣ್ಣೆಯ ಸರದಿ.
ರಾಜ್ಯದಲ್ಲಿ ಸದ್ದಿಲ್ಲದೇ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಕಳೆದ ಒಂದು ತಿಂಗಳಿಂದ ರೂಪಾಯಿ ಲೆಕ್ಕದಲ್ಲಿ ಏರಿಕೆಯಾಗ್ತಿರುವ ಖಾದ್ಯ ತೈಲ ಕೆ.ಜಿಗೆ ಬರೋಬ್ಬರಿ 10-20 ರೂಪಾಯಿ ಹೆಚ್ಚಳವಾಗಿದೆ. ತೆಂಗಿನ ಎಣ್ಣೆಗೂ ಬೇಡಿಕೆ ಹೆಚ್ಚಾಗಿದ್ದು, ಕೆ.ಜಿಗೆ 50 ರೂಪಾಯಿಯಷ್ಟು ಏರಿಕೆ ಕಂಡಿದೆ.
/newsfirstlive-kannada/media/post_attachments/wp-content/uploads/2025/02/Indian-Cooking-Oils.jpg)
ಜನ ಸಾಮಾನ್ಯರು ಬಳಸುವ ಸನ್ ಫ್ಲವರ್, ಫಾಮ್ ಆಯಿಲ್, ಕಡಲೆ ಎಣ್ಣೆ, ಅರಳೆಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ ಒಂದು ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10 ರೂಪಾಯಿ ಏರಿಕೆ ಆಗಿದೆ.
ಎಣ್ಣೆ ದರ ಏರಿಕೆಗೆ ಕಾರಣವೇನು?
ಸೂರ್ಯಕಾಂತಿ ಎಣ್ಣೆಯ ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಸನ್ ಫ್ಲವರ್ ಎಣ್ಣೆ ರೇಟ್ ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ತೆಂಗಿನಕಾಯಿ ಎಳನೀರಿಗೆ ಹೆಚ್ಚು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೆಂಗಿನಎಣ್ಣೆಗೆ ತೆಂಗಿನಕಾಯಿ ಸಿಗುತ್ತಿಲ್ಲ. ಹೀಗಾಗಿ ಒಂದು ಕೆ.ಜಿ ತೆಂಗಿನೆಣ್ಣೆ ಬೆಲೆಯಲ್ಲಿ 50 ರೂಪಾಯಿ ಹೆಚ್ಚಳ ಆಗಿದೆ.
ಇದನ್ನೂ ಓದಿ: ಭಾರತದಲ್ಲಿಯೇ ಇರುವ ಈ ಜಾಗಗಳಲ್ಲಿ ಭಾರತೀಯರಿಗೆ ಪ್ರವೇಶ ಇಲ್ಲ.. ವಿದೇಶಿಯರಿಗೆ ಮಾತ್ರ ಇಲ್ಲಿ ಮಣೆ!
ಅಡುಗೆ ಎಣ್ಣೆ ಎಷ್ಟಿತ್ತು? ಎಷ್ಟಾಗಿದೆ? (1 ಕೆಜಿ ಲೆಕ್ಕ)
ಸನ್ ಫ್ಲವರ್
ಹಳೇ ದರ - 133
ಹೊಸ ದರ - 143
ಗೋಲ್ಡ್ ವಿನ್ನರ್
ಹಳೇ ದರ - 136
ಹೊಸ ದರ - 146
ರುಚಿ ಗೋಲ್ಡ್
ಹಳೇ ದರ - 98
ಹೊಸ ದರ - 133
ಜೆಮಿನಿ
ಹಳೇ ದರ - 140
ಹೊಸ ದರ - 155
ಇಮಾಮಿ
ಹಳೇ ದರ - 135
ಹೊಸ ದರ - 145
ಫ್ರೀಡಂ
ಹಳೇ ದರ - 130
ಹೊಸ ದರ - 144
ದಾರಾ
ಹಳೇ ದರ - 140
ಹೊಸ ದರ - 150
ತೆಂಗಿನ ಎಣ್ಣೆ (1ಕೆಜಿ ಲೆಕ್ಕ)
ಪ್ಯಾರಾಚುಟ್
ಹಳೇ ದರ - 380
ಹೊಸ ದರ -425
KPL
ಹಳೇ ದರ - 310
ಹೊಸ ದರ - 326
VVP
ಹಳೇ ದರ - 220
ಹೊಸ ದರ - 250
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us