/newsfirstlive-kannada/media/post_attachments/wp-content/uploads/2025/06/puttakanna.jpg)
ಪುಟ್ಟಕ್ಕನ ಮಕ್ಕಳು ಕತೆ ಮತ್ತೆ ಟೇಕ್ ಆಫ್ ಆಗಿದೆ. ಮುಕ್ತಾಯ ಆಗುತ್ತಾ ಅಂತ ಅಂದುಕೊಂಡಿದ್ದ ಸ್ಟೋರಿಗೆ ಹೊಸ ಹುರುಪು ತಗೊಂಡು ಬಂದಿದೆ. ಇದೇ ಸಂದರ್ಭದಲ್ಲಿ ಸಾವಿರದ ಸಂಚಿಕೆ ಪೂರೈಸಿದೆ ಧಾರಾವಾಹಿ. ಅಶ್ವಿನಿ ನಕ್ಷತ್ರ, ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿ ಕೊಡೆಗೆ ನೀಡಿರೋ ಆರೂರು ಜಗದೀಶ್ ಅವರ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಪುಟ್ಟಕ್ಕನ ಮಕ್ಕಳು ಕೂಡ ದಾಖಲೆಯ ಮೈಲಿಗಲ್ಲು ಸಾಧಿಸಿದೆ.
ಇದನ್ನೂ ಓದಿ:ಯಾರಿಗುಂಟು ಯಾರಿಗಿಲ್ಲ.. ಒಂದೇ ಸೀರಿಯಲ್ನಲ್ಲಿ ತಾಯಿ, ಮಗ, ಮಗಳು ಜಬರ್ದಸ್ತ್ ನಟನೆ
ಪಾತ್ರ ವರ್ಗದಲ್ಲಿ ಉಮಾಶ್ರೀ, ವಿದ್ಯಾಶ್ರೀ, ಸಂಜನಾ ಬುರ್ಲಿ, ಮಂಜು ಭಾಷಿನಿ, ಶ್ವೇತಾ, ಸಾರಿಕಾ, ಅಕ್ಷರಾ, ಸುಮಾ, ಧನುಷ್, ರಮೇಶ್ ಪಂಡಿತ್ ಸೇರಿದಂತೆ ಪ್ರತಿಯೋಬ್ಬ ಕಲಾವಿದರ ವೀಕ್ಷಕರ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪುಟ್ಟಕ್ಕನ ಮಕ್ಕಳು ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಎಕ್ಸ್ಪೆಕ್ಟೆಶನ್ ಇದೆ. ಟಾಪ್ ಲಿಸ್ಟ್ನಲ್ಲಿದ್ದ ಸೀರಿಯಲ್ಗೆ ಡಿಸಿ ಸ್ನೇಹಾ ಸಾವು ಹೊಡೆತ ಕೊಟ್ಟಿತು. ಸ್ನೇಹಾ ಪಾತ್ರ ಮಾಡ್ತಿದ್ದ ಸಂಜನಾ ಬುರ್ಲಿ ಅವರು ವಿದ್ಯಾಭ್ಯಾಸದ ಕಾರಣದಿಂದ ಪುಟ್ಟಕ್ಕನಿಂದ ಹೊರಬಂದ ನಂತರ ಟಿಆರ್ಪಿ ಕಡಿಮೆ ಆಯ್ತು. ಈ ನಡುವೆ ಸಮಯ ಬದಲಾವಣೆ ಹೊಡೆತ ಎದುರಿಸಬೇಕಾಯ್ತು ಧಾರಾವಾಹಿ.
ಈ ನಡುವೆ ಸಾಕಷ್ಟು ಪಾತ್ರಗಳು ಬಂದು ಹೊದ್ವು. ಸ್ನೇಹ ಪಾತ್ರ ಎರಡು ಬಾರಿ ರಿಪ್ಲೇಸ್ ಆಯ್ತು, ಇನ್ನೇನು ಪುಟ್ಟಕ್ಕನ ಕಥೆ ಮುಗಿತು ಅನ್ನೋವಾಗಲೇ ಸಾವಾಲುಗಳಿಗೆ ಸೆಡ್ಡು ಹೊಡೆದು ಸಾವಿರದ ಒಡತಿಯಾಗಿದ್ದಾಳೆ. ಪುಟ್ಟಕ್ಕನ ಮಕ್ಕಳು ಮುಕ್ತಾಯ ಆಗುತ್ತಾ? ಎಂಬ ಪ್ರಶ್ನೆಗೆ ಉತ್ತರ ಹೌದು. ಈ ಹಿಂದೆ ನ್ಯೂಸ್ ಫಸ್ಟ್ ಜೊತೆ ಮಾತ್ನಾಡಿದ್ದ ಆರೂರು ಜಗದೀಶ್ ಅವರು, ಸಾವಿರ ಸಂಚಿಕೆವರೆಗೂ ಸ್ಟೋರಿ ಮುಂದುವರೆಸುತ್ತೇವೆ. ಇದೇ ಸಂದರ್ಭದಲ್ಲೇ ಧಾರಾವಾಹಿಯನ್ನ ಮುಕ್ತಾಯ ಮಾಡುತ್ತೇವೆ ಅಂತ ಹೇಳಿದ್ದರು.
ಇದಕ್ಕೆ ಪುಷ್ಟಿ ಕೊಡುವಂತೆ, ಪುಟ್ಟಕ್ಕನ ಮನೆ ಇರೋ ಸೆಟ್ ಭೂಮಿಕಾ ಹೌಸ್ ಓನರ್ ಖಾಸಗಿ ಚಾನಲ್ ಒಂದಕ್ಕೆ ಸಂದರ್ಶನ ನೀಡಿದ್ರು. ಪುಟ್ಟಕ್ಕನ ಮಕ್ಕಳು ಇನ್ನು ಕೆಲವೇ ದಿನಗಳ ಮಾತ್ರ ಪ್ರಸಾರ ಆಗಲಿದೆ ಎಂದಿದ್ರು. ಇವರ ಊರ ಮುಖಂಡರ ಪಾತ್ರದಲ್ಲಿ ಪುಟ್ಟಕ್ಕನ ಮಕ್ಕಳಲ್ಲಿ ಆ್ಯಕ್ಟ್ ಕೂಡ ಮಾಡಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಅಪ್ಡೇಟ್ ಕೊಡ್ತೀವಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ