ಹೈದರಾಬಾದ್ ವಿರುದ್ಧ ಹೀನಾಯ ಸೋಲು; RCB ಫ್ಯಾನ್ಸ್​ಗೆ ಮತ್ತೊಂದು ಶಾಕಿಂಗ್ ಸುದ್ದಿ!

author-image
Veena Gangani
Updated On
ಹೈದರಾಬಾದ್ ವಿರುದ್ಧ ಹೀನಾಯ ಸೋಲು; RCB ಫ್ಯಾನ್ಸ್​ಗೆ ಮತ್ತೊಂದು ಶಾಕಿಂಗ್ ಸುದ್ದಿ!
Advertisment
  • RCB ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಶಾಕ್
  • ಸನ್‌ ರೈಸರ್ಸ್‌ ಆರ್ಭಟಕ್ಕೆ ಸೋಲು ಕಂಡ ಆರ್‌ಸಿಬಿ ತಂಡ
  • ಇಶಾನ್ ಕಿಶನ್ ಬ್ಯಾಟಿಂಗ್ ಮೇಲೆ RCBಗೆ 232 ರನ್‌ಗಳ ಗುರಿ

ಐಪಿಎಲ್ 2025ರ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಆರ್‌ಸಿಬಿಗೆ 232 ರನ್‌ಗಳ ಗುರಿಯನ್ನ ನೀಡಿತು.

ಇದನ್ನೂ ಓದಿ: ತಂದೆಯ ‘ಸುಪಾರಿ’ ಆರೋಪಕ್ಕೆ ಸಖತ್ ಟಾಂಗ್ ಕೊಟ್ಟ ಚೈತ್ರಾ ಕುಂದಾಪುರ.. ಏನಂದ್ರು?

publive-image

ಇಶಾನ್ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 94 ರನ್ ಗಳಿಸಿದರು. ಈ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಉತ್ತಮ ಆರಂಭ ಸಿಕ್ಕಿತ್ತಾದ್ರೂ, ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ರೆಡ್ ಆರ್ಮಿಗೆ ಈ ಬೃಹತ್ ಮೊತ್ತವನ್ನ ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಇಡೀ ತಂಡಕ್ಕೆ ಪೂರ್ಣ 20 ಓವರ್​ಗಳನ್ನ ಆಡಲು ಸಾಧ್ಯವಾಗದೆ 19.5 ಓವರ್​ಗಳಲ್ಲಿ 189 ರನ್​ಗಳಿಗೆ ಆಲೌಟ್ ಆಯಿತು. ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ 3ನೇ ಸ್ಥಾನಕ್ಕೆ ಕುಸಿದಿದೆ. 12 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 17 ಅಂಕ ಗಳಿಸಿರುವ ಪಂಜಾಬ್‌ ಕಿಂಗ್ಸ್‌ 2ನೇ ಸ್ಥಾನಕ್ಕೆ ಜಿಗಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment