/newsfirstlive-kannada/media/post_attachments/wp-content/uploads/2025/01/SURYA-KUMAR-YADAV.jpg)
ಐಪಿಎಲ್​ನ ಕ್ಯಾಪ್ಟನ್​ ಫೆಂಟಾಸ್ಟಿಕ್​ ಶ್ರೇಯಸ್​​​ ಅಯ್ಯರ್​​ಗೆ ಶುಭಕಾಲ ಶುರುವಾದಂತಿದೆ. ಟೀಮ್​ ಇಂಡಿಯಾಗೆ ಬೇಡವಾಗಿದ್ದ ಶ್ರೇಯಸ್​​ ಅಯ್ಯರ್​​ಗೆ ಇದೀಗ ಬಂಪರ್​ ಲಾಟರಿ ಹೊಡೆಯೋ ದಿನ ಹತ್ತಿರವಾಗಿದೆ. ರೋಹಿತ್​ ಶರ್ಮಾ, ಸೂರ್ಯಕುಮಾರ್​ಗೆ ಶಾಕ್​ ಕೊಡಲು ಮುಂದಾಗಿರೋ ಬಿಸಿಸಿಐ, ಶ್ರೇಯಸ್​​ ಅಯ್ಯರ್​ ಪಟ್ಟ ಕಟ್ಟೋಕೆ ಸಿದ್ಧವಾಗಿದೆ.
ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಜೋರಾಗಿ ನಡೀತಿದೆ. ಟಿ20 ಫಾರ್ಮೆಟ್​ ಬಳಿಕ ಟೆಸ್ಟ್​ ಮಾದರಿಗೆ ಸೀನಿಯರ್​​ಗಳು ಗುಡ್​ ಬೈ ಹೇಳಿದ್ದಾಯ್ತು. ಸೀನಿಯರ್​​ಗಳ ನಿರ್ಗಮನದ ಬಳಿಕ ಹೊಸ ಆಟಗಾರರು ತಂಡಕ್ಕೆ ಎಂಟ್ರಿ ಕೊಟ್ಟಿದ್ದಾಯ್ತು. ನೂತನ ನಾಯಕನ ನೇಮಕವೂ ಆಯ್ತು. ಇದೀಗ ವೈಟ್​​ಬಾಲ್​ ಫಾರ್ಮೆಟ್​ನತ್ತ ಬಿಸಿಸಿಐ ಬಾಸ್​​ಗಳ ಚಿತ್ತ ಹರಿದಿದೆ.
ಇದನ್ನೂ ಓದಿ: ನೀರಿಲ್ಲದೆ ನರಳುವ ಮೊದಲ ನಗರ.. 2030ಕ್ಕೆ ಸಂಪೂರ್ಣ ಒಣಗಿ ಹೋಗುವ ರಾಜಧಾನಿ ಇದೇ!
/newsfirstlive-kannada/media/post_attachments/wp-content/uploads/2025/02/SURYA_KUMAR-2.jpg)
ವೈಟ್​​ಬಾಲ್​ ಫಾರ್ಮೆಟ್​ಗೆ ಶ್ರೇಯಸ್​ ಸಾರಥಿ?
ಪಂಜಾಬ್​ ಕಿಂಗ್ಸ್​​ ತಂಡವನ್ನ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಶ್ರೇಯಸ್ ಅಯ್ಯರ್​ ಈ ಸೀಸನ್​ನಲ್ಲಿ​ ಮುನ್ನಡೆಸಿದ್ರು. ಶ್ರೇಯಸ್​​ ಅಯ್ಯರ್​ ತಂಡವನ್ನ ಮುನ್ನಡೆಸಿದ ರೀತಿ ದಿಗ್ಗಜರು, ಕ್ರಿಕೆಟ್​ ಎಕ್ಸ್​​ಪರ್ಟ್ಸ್​​ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಐಪಿಎಲ್​ನಲ್ಲಿ, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ನಾಯಕನಾಗಿ ಸಕ್ಸಸ್​​ ಕಂಡಿರೋ ಕ್ಯಾಪ್ಟನ್​ ಫೆಂಟಾಸ್ಟಿಕ್​ ಶ್ರೇಯಸ್​ ಅಯ್ಯರ್​​ ಇದೀಗ ಟೀಮ್​ ಇಂಡಿಯಾದ ಮುಂದಿನ ನಾಯಕನ ರೇಸ್​​ಗೆ ರಾಯಲ್​​ ಎಂಟ್ರಿ ಕೊಟ್ಟಿದ್ದಾರೆ. ಏಕದಿನ, ಟಿ20 ಫಾರ್ಮೆಟ್​​ನ ನಾಯಕತ್ವ ಶ್ರೇಯಸ್​​ಗೆ ಒಲಿಯೋ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದು: ಕಾಲ್ತುಳಿತದಲ್ಲಿ RCB ಅಭಿಮಾನಿ ನಿಧನ.. ಮೊಮ್ಮಗನ ಅಗಲಿಕೆ ನೋವಿನಲ್ಲಿದ್ದ ಅಜ್ಜಿಯೂ ಕೊನೆಯುಸಿರು
/newsfirstlive-kannada/media/post_attachments/wp-content/uploads/2025/01/SURYA-KUMAR-YADAV.jpg)
ಏಕದಿನ ನಾಯಕನ ರೇಸ್​​ಗೆ ಮುಂಬೈಕರ್​​​ ಎಂಟ್ರಿ
ಟೆಸ್ಟ್​, ಟಿ20ಗೆ ಗುಡ್​​ ಬೈ ಹೇಳಿರುವ ರೋಹಿತ್​ ಶರ್ಮಾ ಸದ್ಯ ಏಕದಿನ ಫಾರ್ಮೆಟ್​ಗೆ ಮಾತ್ರ ಸೀಮಿತವಾಗಿದ್ದಾರೆ. ಫಾರ್ಮ್​ ಸಮಸ್ಯೆ, ಫಿಟ್​ನೆಸ್​​ ಸಮಸ್ಯೆಯನ್ನ ಎದುರಿಸ್ತಾ ಇರೋದ್ರಿಂದ ರೋಹಿತ್​ ನಾಯಕನಾಗಿ ಮುಂದುವರೆಯೋದಿರಲಿ, ತಂಡದಲ್ಲಿ ಉಳಿದುಕೊಳ್ಳೋದೆ ಅನುಮಾನವಾಗಿದೆ. 2027ರ ಏಕದಿನ ವಿಶ್ವಕಪ್​ವರೆಗೆ ರೋಹಿತ್​ ಶರ್ಮಾನೇ ಮೆನ್​ ಇನ್​ ಬ್ಲೂ ಪಡೆಯ ಸಾರಥಿ ಎಂಬ ಮಾತು ಚಾಲ್ತಿಯಲ್ಲಿದ್ರೂ, ಸದ್ದಿಲ್ಲದೇ ಉತ್ತರಾಧಿಕಾರಿಯ ಹುಡುಕಾಟ ನಡೀತಿದೆ. ಮುಂದಿನ ನಾಯಕನ ಸ್ಥಾನಕ್ಕೆ ಮುಂಬೈಕರ್​ ಶ್ರೇಯಸ್​ ಅಯ್ಯರ್​ ಹೆಸರು ಚರ್ಚೆಯಲ್ಲಿದೆ.
ರೋಹಿತ್​ ಬಳಿಕ ಶ್ರೇಯಸ್​​ ಅಯ್ಯರ್​ಗೆ ಚುಕ್ಕಾಣಿ?
ಶ್ರೇಯಸ್​​ ಅಯ್ಯರ್​ ಏಕದಿನ ಫಾರ್ಮೆಟ್​ಗೆ ಮಾತ್ರ ಸೀಮಿತವಾಗಿದ್ದಾರೆ. 4ನೇ ಕ್ರಮಾಂಕದಲ್ಲಿ ಕನ್ಸಿಸ್ಟೆಂಟ್​ ಆಟದ ಮೂಲಕ ಮಿಂಚಿರೋ ಶ್ರೇಯಸ್​​, ಚಾಂಪಿಯನ್ಸ್​ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ರು. ಬ್ಯಾಟಿಂಗ್​​ ಜೊತೆ ಜೊತೆಗೆ ಇದೀಗ ನಾಯಕನಾಗಿಯೂ ಶೈನ್​ ಆಗಿದ್ದಾರೆ. ಪಂಜಾಬ್​ ಕಿಂಗ್ಸ್​ ತಂಡವನ್ನ ಈ ಸೀಸನ್​ ಐಪಿಎಲ್​ನಲ್ಲಿ ಮುನ್ನಡೆಸಿದ ಪರಿ ಶ್ರೇಯಸ್​ ಹೆಸರನ್ನ ಮುಂದಿನ ನಾಯಕನ ರೇಸ್​​ನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ. ಬಿಸಿಸಿಐ, ಸೆಲೆಕ್ಷನ್​ ಕಮಿಟಿ, ಟೀಮ್​ ಮ್ಯಾನೇಜ್​ಮೆಂಟ್​ ವಲಯದಲ್ಲೂ ಶ್ರೇಯಸ್​​ ಪರವಾದ ಅಲೆ ಎದ್ದಿದೆ.
ಸೂರ್ಯಕುಮಾರ್​ ಯಾದವ್​ಗೆ ಕಾದಿದ್ಯಾ ಶಾಕ್​?
ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ ಫೈನಲ್​ಗೆ ಕೊಂಡೊಯ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಹೊಂದಿರೋ ಶ್ರೇಯಸ್​​ ಅಯ್ಯರ್​, 2024ರಲ್ಲಿ ಕೆಕೆಆರ್​​​ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಇದೀಗ ಈ ಸೀಸನ್​ನಲ್ಲಿ ಪಂಜಾಬ್​ನ ಫೈನಲ್​ವರೆಗೆ ಮುನ್ನಡೆಸಿ ಶ್ರೇಯಸ್​​, ಟಿ20 ಕ್ರಿಕೆಟ್​ನ ಬೆಸ್ಟ್​ ಕ್ಯಾಪ್ಟನ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್​ ಮಾಡಿದ್ದಾರೆ. ಶ್ರೇಯಸ್​​ ಶೈನಿಂಗ್​ ಪರ್ಫಾಮೆನ್ಸ್, ಟೀಮ್​ ಇಂಡಿಯಾದ​​ ಟಿ20 ನಾಯಕ ಸೂರ್ಯಕುಮಾರ್ ಯಾದವ್​ ಸ್ಥಾನಕ್ಕೂ ಕುತ್ತು ತಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಒಂಟಿ ಕಾಲು ಪತ್ತೆ ಕೇಸ್​ನ ರಹಸ್ಯ ಬಯಲು.. ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ..
ಮಿಸ್ಟರ್​ 360 ಸೂರ್ಯಕುಮಾರ್​​ ಯಾದವ್​ ಟಿ20 ಫಾರ್ಮೆಟ್​ನಲ್ಲಿ ನಾಯಕನಾದ ಬಳಿಕ ಹಳೇ ಖದರ್​ ಕಳೆದುಕೊಂಡಿದ್ದಾರೆ. ನಾಯಕನಾಗಿ ಶೈನ್​ ಆದ್ರೂ ಬ್ಯಾಟ್ಸ್​ಮನ್​ ಆಗಿ ಸತತ ವೈಫಲ್ಯ ಅನುಭವಿಸಿದ್ದಾರೆ. ಟಿ20 ಮಾದರಿಯಲ್ಲಿ 44 ರಷ್ಟಿದ್ದ ಸೂರ್ಯಕುಮಾರ್​​ ಯಾದವ್​ ರನ್​ಗಳಿಕೆಯ ಸರಾಸರಿ, ಸಾರಥ್ಯ ವಹಿಸಿಕೊಂಡ ಮೇಲೆ 27ಕ್ಕೆ ಕುಸಿದಿದೆ. ಸೂರ್ಯನ​ ವೈಫಲ್ಯ ಇದೀಗ ಶ್ರೇಯಸ್​​ಗೆ ನಾಯಕತ್ವದ ಸಿಂಹಾಸದತ್ತ ದಾರಿ ಮಾಡಿಕೊಟ್ಟಿದೆ. 2026ರಲ್ಲಿ ಟಿ20 ವಿಶ್ವಕಪ್​ ಬೇರೆ ಇರೋದ್ರಿಂದ ನಾಯಕನ ಬದಲಾವಣೆಯ ಬಗ್ಗೆ ಬಿಸಿಸಿಐ ಚಿಂತಿಸಿದೆ.
ಫೀಲ್ಡ್​ನಲ್ಲಿ ಕೂಲ್​ ಮತ್ತು ಕಾಮ್​ ಆಗಿ ಕಾಣಿಸಿಕೊಳ್ಳೋ ಶ್ರೇಯಸ್​ ಅಯ್ಯರ್​ ನೆವರ್​ ಡೈ ಆ್ಯಟಿಟ್ಯೂಡ್​​ನಿಂದಲೇ ನಾಯಕನಾಗಿ ಗಮನ ಸೆಳೆದಿದ್ದಾರೆ. ಶ್ರೇಯಸ್​​​​​ ಬಾರ್ನ್​​​​ ಲೀಡರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬ ನಾಯಕನಿಗೆ ಇರೋ ಎಲ್ಲಾ ಕ್ವಾಲಿಟಿಗಳು, ಶ್ರೇಯಸ್​ ಅಯ್ಯರ್​ರಲ್ಲಿದೆ. ಟೀಮ್​ ಇಂಡಿಯಾದ ವೈಟ್​ಬಾಲ್​ ಕ್ಯಾಪ್ಟನ್​ ಆಗೋ ಎಲ್ಲಾ ಸಾಮರ್ಥ್ಯ ಹಾಗೂ ಸ್ಕಿಲ್ ಕೂಡ​ ಇರೋದ್ರಿಂದ ಶ್ರೇಯಸ್​​ ಮೆನ್​ ಇನ್​ ಬ್ಲ್ಯೂ ಪಡೆಯ ಮುಂದಿನ ಸಾರಥಿಯಾದ್ರೆ ಅಚ್ಚರಿಪಡುವಂತದ್ದು ಏನೂ ಇಲ್ಲ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸ್ಥಳಾಂತರಕ್ಕೆ ಪರಿಶೀಲನೆ -ಸಿದ್ದರಾಮಯ್ಯರಿಂದ ಮಹತ್ವದ ಹೇಳಿಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us