ಭಾರತ-ಇಂಗ್ಲೆಂಡ್​​ ಮಹತ್ವದ ಸರಣಿ; ಟೀಮ್​ ಇಂಡಿಯಾದಿಂದ ಶ್ರೇಯಸ್​ ಅಯ್ಯರ್​​ಗೆ ಕೊಕ್

author-image
Ganesh Nachikethu
Updated On
Mega Auction 2025; ಭಾರತೀಯ ಆಟಗಾರರಿಗೆ ಫುಲ್ ಡಿಮ್ಯಾಂಡ್; ಯಾರು ಎಷ್ಟು ಕೋಟಿ ಪಡೆದುಕೊಂಡಿದ್ದಾರೆ?
Advertisment
  • ಟಿ20 ಸರಣಿ ಮುಗಿದ ಬೆನ್ನಲ್ಲೇ ಏಕದಿನ ಸರಣಿ
  • ಭಾರತ, ಇಂಗ್ಲೆಂಡ್​ ನಡುವಿನ ಒನ್​ ಡೇ ಸೀರೀಸ್​​
  • ಈ ಹೊತ್ತಲ್ಲೇ ಶ್ರೇಯಸ್​ ಅಯ್ಯರ್​ಗೆ ಬಿಗ್​ ಶಾಕ್

ಟಿ20 ಸರಣಿ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ, ಇಂಗ್ಲೆಂಡ್​ ನಡುವಿನ ಏಕದಿನ ಸರಣಿ ನಡೆಯಲಿದೆ. ಮುಂದಿನ ತಿಂಗಳು ಎಂದರೆ ಫೆಬ್ರವರಿ 6 ರಿಂದ ಫೆಬ್ರವರಿ 12 ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಏಕದಿನ ಸರಣಿಗೆ ಕ್ಯಾಪ್ಟನ್​​ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಏಕದಿನ ತಂಡದಲ್ಲಿ ಶ್ರೇಯಸ್​ ಅಯ್ಯರ್​​ಗೆ ಸ್ಥಾನ

ಟೀಮ್​ ಇಂಡಿಯಾದ ಸ್ಟಾರ್​ ಪ್ಲೇಯರ್​​ ಶ್ರೇಯಸ್​ ಅಯ್ಯರ್​​. ಇವರು ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೇರಿದಂತೆ ದೇಶಿಯ ಕ್ರಿಕೆಟ್​​ನಲ್ಲಿ ಮುಂಬೈ ರಣಜಿ ತಂಡದ ಕ್ಯಾಪ್ಟನ್​ ಆಗಿ ಅಬ್ಬರಿಸಿದ್ದರು. ಇಷ್ಟೇ ಅಲ್ಲ, ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ಅಮೋಘ ಪ್ರದರ್ಶನ ನೀಡಿ ಬಿಸಿಸಿಐ ಗಮನ ಸೆಳೆದಿದ್ರು. ಹೀಗಾಗಿ ಶ್ರೇಯಸ್​ ಅಯ್ಯರ್​ ಅವರಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ.

ಅಯ್ಯರ್​ಗೆ ಬಿಗ್​ ಶಾಕ್​​

ಭಾರತ ಏಕದಿನ ತಂಡಕ್ಕೆ ಭವಿಷ್ಯದ ಮ್ಯಾಚ್ ವಿನ್ನರ್ ಆಟಗಾರ ಸಿಕ್ಕಿದ್ದಾರೆ. ಎದುರಾಳಿ ತಂಡ ಯಾವುದೇ ಇರಲಿ ಬೌಲರ್‌ಗಳಿಗೆ ನಡುಕ ಹುಟ್ಟಿಸೋ ಸ್ಪೋಟಕ ಬ್ಯಾಟರ್ ಇವರು. ಭಾರತದ ಏಕದಿನ ತಂಡದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಬಲ್ಲ ಸಾಮರ್ಥ್ಯ ಹೊಂದಿರೋರು. ಈ ಸ್ಪೋಟಕ ಬ್ಯಾಟರ್ ಪ್ರದರ್ಶನ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಕುತ್ತು ತಂದಿದೆ.

ತಿಲಕ್​ ವರ್ಮಾಗೆ ಜಾಕ್​ಪಾಟ್​​

ಮುಂದಿನ ದಿನಗಳಲ್ಲಿ ತಿಲಕ್​ ವರ್ಮಾ ಏಕದಿನ ತಂಡದಲ್ಲಿ ಸ್ಥಾನ ಪಡೆಯಬಹುದು. ಇದು ಶ್ರೇಯಸ್​ ಅಯ್ಯರ್​ ಸ್ಥಾನಕ್ಕೆ ಕುತ್ತು ತರೋ ಸಾಧ್ಯತೆ ಇದೆ. ಭಾರತದ ಈ ಪ್ರತಿಭಾವಂತ ಬ್ಯಾಟರ್ ಬೇರೆ ಯಾರೂ ಅಲ್ಲ, ತಿಲಕ್ ವರ್ಮಾ. ತಿಲಕ್ ವರ್ಮಾ ಇತ್ತೀಚೆಗೆ ಬಿರುಸಿನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್​ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಅಮೋಘ ಬ್ಯಾಟಿಂಗ್​ ಮಾಡಿ ಭಾರತ ತಂಡವನ್ನು ಗೆಲ್ಲಿಸಿದ್ದಾರೆ.

ಇಂಗ್ಲೆಂಡ್ ಸರಣಿಗೆ ಭಾರತ ಏಕದಿನ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ.

ಇದನ್ನೂ ಓದಿ:T20I; ಐತಿಹಾಸಿಕ ದಾಖಲೆ.. ಕೊಹ್ಲಿ ಕೂಡ ಮಾಡದ ರೆಕಾರ್ಡ್ ಮಾಡಿದ ತಿಲಕ್ ವರ್ಮಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment