newsfirstkannada.com

ಕೋವಿಶೀಲ್ಡ್ ಆಯ್ತು.. ಈಗ ಕೋವ್ಯಾಕ್ಸಿನ್‌ನಲ್ಲೂ ಸೈಡ್ ಎಫೆಕ್ಟ್‌ ಪತ್ತೆ! ಶಾಕಿಂಗ್ ವರದಿ ಬಹಿರಂಗ

Share :

Published May 16, 2024 at 9:35pm

    ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್

    ಭಾರತದ ಸ್ವದೇಶಿ ಕೊರೊನಾ ಲಸಿಕೆಯಲ್ಲೂ ಸೈಡ್ ಎಫೆಕ್ಟ್‌ ಇದ್ಯಾ?

    ಅಧ್ಯಯನಕ್ಕೊಳಪಡಿಸಿದ್ದ ಶೇ.50 ರಷ್ಟು ಜನರಲ್ಲಿ ಸೋಂಕು ಇರುವುದು ಪತ್ತೆ

ನವದೆಹಲಿ: ಇತ್ತೀಚೆಗೆ ಜಗತ್ತಿನಾದ್ಯಂತ ಕೋವಿಶೀಲ್ಡ್ ಲಸಿಕೆ ಸರಬರಾಜು ಮಾಡಿದ್ದ ಅಸ್ಟ್ರಾಝೆನೆಕಾ ಕಂಪನಿ ಸತ್ಯ ಒಪ್ಪಿಕೊಂಡಿತ್ತು. ಕೋವಿಶೀಲ್ಡ್ ಲಸಿಕೆಯಲ್ಲಿ ಟಿಟಿಎಸ್ (Thrombocytopenia Syndrome) ನಂತಹ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಅನ್ನೋದನ್ನ ಲಂಡನ್ ಕೋರ್ಟ್​ ಮುಂದೆ ಒಪ್ಪಿಕೊಂಡಿತ್ತು. ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಸೃಷ್ಟಿಸಿರುವಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಯಲಾಗಿದೆ.

ಭಾರತದ ಸ್ವದೇಶಿ ಕೊರೊನಾ ಲಸಿಕೆ ಕೋವ್ಯಾಕ್ಸಿನ್‌ ಅಲ್ಲೂ ಸೈಡ್ ಎಫೆಕ್ಟ್ ಇರೋದು ದೃಢವಾಗಿದೆ. ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಜನರಲ್ಲಿ ಸೈಡ್ ಎಫೆಕ್ಟ್ ಇರುತ್ತದೆ ಅನ್ನೋ ಅಂಶ ಬಯಲಾಗಿದೆ.

ಇದನ್ನೂ ಓದಿ: ಕೋರ್ಟ್​ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್​ ತೆಗೆದುಕೊಂಡವ್ರಿಗೆ ಗಢಗಢ..! 

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ಮಹತ್ವದ ಅಧ್ಯಯನ ನಡೆಸಿದ್ದಾರೆ. ಅಧ್ಯಯನಕ್ಕೊಳಪಡಿಸಿದ್ದ 926 ಮಂದಿಯ ಪೈಕಿ ಶೇ.50 ರಷ್ಟು ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ಕೋವ್ಯಾಕ್ಸಿನ್ ಪಡೆದವರಲ್ಲಿ ಉಸಿರಾಟ ವ್ಯವಸ್ಥೆಯಲ್ಲಿ ಸೋಂಕು, ಗಂಟಲು ಕೆರೆತ, ಮೂಗು ಸೋರುವಿಕೆ ಕೆಮ್ಮಿನಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿದೆ. ಇನ್ನೂ ಶೇ.1ರಷ್ಟು ಪ್ರಕರಣಗಳಲ್ಲಿ ಪಾಶ್ವವಾಯು, ನರ ಸಂಬಂಧಿತ ಆರೋಗ್ಯ ಸಮಸ್ಯೆ ಇದೆ ಎಂದು ಸ್ಟ್ರಿಂಜರ್ ನೇಚರ್ ಜರ್ನಲ್‌ ತನ್ನ ಅಧ್ಯಯನದ ವರದಿಯಲ್ಲಿ ಪ್ರಕಟ ಮಾಡಿದೆ.

ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಚರ್ಮ ಸಂಬಂಧಿತ ಸಮಸ್ಯೆ, ನರ ಸಂಬಂಧಿ ಸಮಸ್ಯೆ, ಸಾಮಾನ್ಯ ಅಸ್ವಸ್ಥತೆ ಪತ್ತೆಯಾಗಿದೆ. 2022ರ ಜನವರಿಯಿಂದ 2023ರ ಆಗಸ್ಟ್‌ವರೆಗೆ ಕೋವ್ಯಾಕ್ಸಿನ್ ಪಡೆದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಬನಾರಸ್ ಹಿಂದೂ ವಿವಿ 635 ಮಂದಿ ಹದಿ ಹರೆಯದವರು, 291 ಮಂದಿ ವಯಸ್ಕರನ್ನು ಅಧ್ಯಯನಕ್ಕೊಳಪಡಿಸಿದೆ.

ಕೊರೊನಾ ಕಾಲದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಮಾಡಿತ್ತು. ಕೋವ್ಯಾಕ್ಸಿನ್ ಲಸಿಕೆಗೆ ಅತ್ಯುತ್ತಮವಾದ ಸುರಕ್ಷತೆಯ ಟ್ರ್ಯಾಕ್ ರೆಕಾರ್ಡ್ ಇದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ ಎಂದು ಭಾರತ್ ಬಯೋಟೆಕ್‌ ಕಂಪನಿ ಹೇಳಿತ್ತು. ಆದ್ರೀಗ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ವರದಿ ಆತಂಕಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋವಿಶೀಲ್ಡ್ ಆಯ್ತು.. ಈಗ ಕೋವ್ಯಾಕ್ಸಿನ್‌ನಲ್ಲೂ ಸೈಡ್ ಎಫೆಕ್ಟ್‌ ಪತ್ತೆ! ಶಾಕಿಂಗ್ ವರದಿ ಬಹಿರಂಗ

https://newsfirstlive.com/wp-content/uploads/2024/05/Covaxin.jpg

Load More