VIDEO; ಅಪಾರ್ಟ್​ಮೆಂಟಿನ 5ನೇ ಮಹಡಿಯಿಂದ ಬಿದ್ದು ಯುವತಿ ಸಾವು; ಬೆಚ್ಚಿ ಬೀಳಿಸುತ್ತೆ ವಿಡಿಯೋ

author-image
Gopal Kulkarni
Updated On
VIDEO; ಅಪಾರ್ಟ್​ಮೆಂಟಿನ 5ನೇ ಮಹಡಿಯಿಂದ ಬಿದ್ದು ಯುವತಿ ಸಾವು; ಬೆಚ್ಚಿ ಬೀಳಿಸುತ್ತೆ ವಿಡಿಯೋ
Advertisment
  • ಅಪಾರ್ಟ್​ಮೆಂಟ್​ನ ಐದನೇ ಮಹಡಿಯಿಂದ ಬಿದ್ದ ಯುವತಿ
  • ನೆಲಕ್ಕೆ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಅಸುನೀಗಿದ ಬೇಗಂ ಸಾನಿಯಾ
  • ಯುವತಿಯ ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಲು ಪೊಲೀಸರ ತನಿಖೆ

ಹೈದ್ರಾಬಾದ್: ಯುವತಿಯೋರ್ವಳು ರಾಮನಗರದ ಅಪಾರ್ಟ್​ಮೆಂಟ್​​ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವತಿ ಕಟ್ಟದಿಂದ ಜಿಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಆಕೆಯ ಭೀಕರ ಅಂತ್ಯವನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ:BREAKING: ಅರವಿಂದ್ ಕೇಜ್ರಿವಾಲ್ ಶಾಕಿಂಗ್ ಹೇಳಿಕೆ.. ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ?

ರಾಮನಗರದ ಗಿರಿಶಿಖರ ಅಪಾರ್ಟ್​ಮೆಂಟ್​ನಲ್ಲಿ ಈ ಒಂದು ಘಟನೆ ನಡೆದಿದೆ. ಯುವತಿ ಅಪಾರ್ಟ್​ಮೆಂಟ್​ನ ಐದನೇ ಮಹಡಿಯಿಂದ ಕೆಳಗೆ ನೆಗೆಯುವ ವಿಡಿಯೋವನ್ನು ಸ್ಥಳೀಯರೆ ಮಾಡಿಕೊಂಡಿದ್ದಾರೆ. ಆಕೆ ಮಹಡಿ ಏರಿ ಕುಳಿತಿದ್ದನ್ನು ಕಂಡ ಜನರು ನೆಗೆಯಬೇಡ, ಆಚೆ ಬಾ ಎಂದು ಕೂಗಿ ಹೇಳಿದ್ದಾರೆ. ಆದ್ರೆ ಕೊಂಚ ಹೊತ್ತು ಸುಮ್ಮನೆ ಕುಳಿತಿದ್ದ ಯುವತಿ ಬಳಿಕ ತಾನು ಕುಳಿತಿದ್ದ ಐದನೇ ಮಹಡಿಯಿಂದ ನೆಗೆದಿದ್ದಾಳೆ


">September 14, 2024


ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸಾನಿಯಾ ಬೇಗಂ ಅಪಾರ್ಟ್​ಮೆಂಟ್​ನೊಳಕ್ಕೆ ನುಗ್ಗಿ ಕಟ್ಟಡದ ಟೆರಸ್​ಗೆ ಬಂದು ಮೊಬೈಲ್​ನಲ್ಲಿ ಯಾರದೋ ಜೊತೆ ಮಾತನಾಡುತ್ತಿದ್ದಳಂತೆ. ಇದಾದ ಬಳಿಕ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿದ್ದಾಳೆ. ಈ ಘಟನೆಗೆ ಸಾಕ್ಷಿಯಾಗಿದ್ದ ಸ್ಥಳೀಯರು ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದ್ರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಯುವತಿ ಕಟ್ಟದಿಂದ ಜಿಗಿದ ಸಾವಿಗೆ ಶರಣಾಗಿದ್ದಳು.

ಇದನ್ನೂ ಓದಿ:Stop Hindi Diwas: ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್

ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರಿಗೆ ಆತ್ಮಹತ್ಯೆಗೆ ಪ್ರಮುಖ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಆತ್ಮಹತ್ಯೆಗೆ ಕಾರಣವೇನು ಅನ್ನೋದನ್ನ ಕಂಡುಹಿಡಿಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment