ರಾಜ್ಯ ಬಿಜೆಪಿ ಬಂಡಾಯಕ್ಕೆ ಬ್ರೇಕ್? ಯತ್ನಾಳ್​ಗೆ ನೋಟಿಸ್, ಸೋಮಣ್ಣ ಮನೆಯಲ್ಲಿ ಮೀಟಿಂಗ್​! ಮುಂದೇನು?

author-image
Gopal Kulkarni
Updated On
ರಾಜ್ಯ ಬಿಜೆಪಿ ಬಂಡಾಯಕ್ಕೆ ಬ್ರೇಕ್? ಯತ್ನಾಳ್​ಗೆ ನೋಟಿಸ್, ಸೋಮಣ್ಣ ಮನೆಯಲ್ಲಿ ಮೀಟಿಂಗ್​! ಮುಂದೇನು?
Advertisment
  • ಬಂಡಾಯದ ಸೂತ್ರದಾರ ಯತ್ನಾಳ್​ಗೆ ನೋಟಿಸ್​​!
  • ಅಂತಿಮ ಹಂತಕ್ಕೆ ಬಂದ ರಾಜ್ಯ ಬಿಜೆಪಿ ಬಂಡಾಯ!
  • ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕ ತಡೆಹಿಡಿದ ಹೈಕಮಾಂಡ್​​​

ಹೆಚ್ಚು ಕಡಿಮೆ ನಾಲೈದು ತಿಂಗಳೇ ಕಳೀತು.. ಬಾಯಿಗಳಿಗೆ ಬೀಗನೇ ಬೀಳ್ತಿಲ್ಲ.. ಒಬ್ಬರ ನಂತರ ಒಬ್ಬರ ಬಂಡಾಯ, ಮೇಲೆ​ ಕೂತವರು ಆ ಎಲೆಕ್ಷನ್​​​, ಈ ಎಲೆಕ್ಷನ್​​​ ಅಂತ ಬ್ಯುಸಿ.. ಈಗ ಟೈಂ ಸಿಕ್ಕಿದೆ. ರಾಜ್ಯ ಬಿಜೆಪಿ ಬಣ ಕಿತ್ತಾಟಕ್ಕೆ ಹೈಕಮಾಂಡ್​​ ಎರಡು ಸಂದೇಶ ದಾಟಿಸಿದೆ. ಬಂಡಾಯಗಾರರಿಗೆ ಎಚ್ಚರಿಕೆ ಕೊಟ್ಟು ನೋಟಿಸ್​​ ಜಾರಿ ಮಾಡಿದೆ, ಇತ್ತ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ, ತಡೆ ಒಡ್ಡಿದೆ..

ಬಿಜೆಪಿ ಬಣ ಬಡಿದಾಟ ತಾರಕಕ್ಕೇರಿ, ಅಶಿಸ್ತು ಅಟ್ಟದ ಮೇಲೆ ನೃತ್ಯ ಮಾಡ್ತಿದೆ. ದೆಹಲಿಯಲ್ಲಿ ಗೆದ್ದ ಬಿಜೆಪಿ ಕರ್ನಾಟಕದ ಅಂತರ್ಯುದ್ಧಕ್ಕೆ ವಿರಾಮ ಹಾಕಲು ಶತಪ್ರಯತ್ನಕ್ಕಿಳಿದಿದೆ. ಎರಡು ಬಣಗಳ ಮೇಲಾಟಕ್ಕೂ ಬ್ರೇಕ್​ ಹಾಕಿ ತಾನೂ ಸೂಚಿಸಿದ ಮಾರ್ಗ ಅನುಸರಿಸುಂತೆ ಸೈನ್​​ ಬೋರ್ಡ್​ ಹಾಕಿದೆ.

ಅಂತಿಮ ಹಂತಕ್ಕೆ ಬಂದ ರಾಜ್ಯ ಬಿಜೆಪಿ ಬಂಡಾಯ!
ಬಿಜೆಪಿ ಒಳಗಿನ ಬಂಡಾಯದ ಸೂತ್ರದಾರ, ಪ್ರಮುಖ ಪಾತ್ರಧಾರಿ ಶಾಸಕ ಯತ್ನಾಳ್​​ ವಿರುದ್ಧ ಹೈಕಮಾಂಡ್​​​ ಗರಂ ಆದಂತೆ ಕಾಣಿಸ್ತಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಕಾರಣಕ್ಕೆ ಯತ್ನಾಳ್​ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮತ್ತೊಮ್ಮೆ ಶೋಕಾಸ್ ನೋಟಿಸ್ ನೀಡಿದೆ. 72 ಗಂಟೆಗಳಲ್ಲಿ ಸಮಜಾಯಿಷಿ ನೀಡುವಂತೆ ತಾಕೀತು ಮಾಡಿದೆ. ಕಳೆದೊಂದು ವರ್ಷದಲ್ಲಿ ಯತ್ನಾಳ್​ಗೆ ನೀಡಿದ 3ನೇ ನೋಟಿಸ್ ಇದು.

ನೀವು ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದೀರಿ. ಈ ಹಿಂದೆಯೂ ನಿಮಗೆ ನೋಟಿಸ್ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಉತ್ತಮ ನಡವಳಿಕೆ ತೋರುತ್ತೇನೆ ಎಂದು ಆಗ ಭರವಸೆ ನೀಡಿದ್ದೀರಿ. ಆದರೆ, ಅದನ್ನೂ ಉಲ್ಲಂಘಿಸಿದ್ದೀರಿ. ಇಂತಹ ನಡವಳಿಕೆಗೆ ನಿಮ್ಮ ವಿರುದ್ಧ ಪಕ್ಷ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು. ಇದಕ್ಕೆ ಮೂರು ದಿನಗಳಲ್ಲಿ ವಿವರಣೆ ನೀಡಬೇಕು. 72 ಗಂಟೆಯೊಳಗೆ ಉತ್ತರ ನೀಡದಿದ್ರೆ ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
- ಓಂ ಪಾಠಕ್​, ಶಿಸ್ತು ಸಮಿತಿ ಅಧ್ಯಕ್ಷ

publive-image

ಕೇಂದ್ರ ಸಚಿವ ಸೋಮಣ್ಣ ನಿವಾಸ ನಿನ್ನೆ ಚಟುವಟಿಕೆ ಕೇಂದ್ರವಾಯ್ತು. ಪೂಜೆ ನೆಪದಲ್ಲಿ ಸೇರಿದ ನಾಯಕರು, ಬಿಕ್ಕಟ್ಟು ಸರಿಪಡಿಸುವ ಕುರಿತು ರೆಬೆಲ್ಸ್​ ಟೀಂ 15 ನಿಮಿಷಗಳ ಕಾಲ ಚರ್ಚಿಸಿತು. ಬಳಿಕ ಬೊಮ್ಮಾಯಿ, ಬೆಲ್ಲದ, ನಿರಾಣಿ ಮತ್ತೊಂದು ಸಭೆ ನಡೆಸ್ತು.

publive-image

ಜಿಲ್ಲಾ ರಾಜಕೀಯ ಮೇಲಾಟದಲ್ಲಿ ಡಾ.ಸುಧಾಕರ್​​​​ಗೆ ಮೇಲುಗೈ

ಇತ್ತ, ಚಿಕ್ಕಬಳ್ಳಾಪುರ ಬಿಜೆಪಿ ಅಧ್ಯಕ್ಷರ ವಿಚಾರದಲ್ಲಿ ಭುಗಿಲೆದ್ದ ಅಸಮಾಧಾನಕ್ಕೆ ಹೈಕಮಾಂಡ್​​​ ತಡೆ ಹಾಕಿದೆ..ಸಂದೀಪ್​ ರೆಡ್ಡಿ ನೇಮಕವನ್ನ ತಡೆ ಹಿಡಿಯುವಂತೆ ಪಕ್ಷದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಸೂಚಿಸಿದ್ರು.. ಜಿಲ್ಲಾ ರಾಜಕೀಯದಲ್ಲಿ ಸಂಸದ ಡಾ.ಕೆ.ಸುಧಾಕರ್ ಮೇಲುಗೈ ಸಾಧಿಸಿದ್ದಾರೆ.

publive-image

ಪ್ರಯಾಗ್​ರಾಜ್​ ಕುಂಭಮೇಳದಲ್ಲಿ ಶ್ರೀರಾಮುಲು ಬೀಡು!
ಇತ್ತ, ರೆಡ್ಡಿ ಜೊತೆಗಿನ ಸಮರದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ರೋಲ್​​ಪ್ಲೇ ಬಯಸಿರುವ ಶ್ರೀರಾಮುಲು, ಡೆಲ್ಲಿ ಯಾತ್ರೆ ಕೈಗೊಳ್ಳಬೇಕಿತ್ತು.. ಆದ್ರೆ, ರಾಜಕೀಯ ಯಾತ್ರೆ ಬದಲು, ಧಾರ್ಮಿಕ ಯಾತ್ರೆ ಕೈಗೊಂಡಿದ್ದಾರೆ.. ಡೆಲ್ಲಿಯಿಂದ ದೂರ ಉಳಿದ ಶ್ರೀರಾಮುಲು, ಪ್ರಯಾಗ್​ರಾಜ್​ನಲ್ಲಿ ಠಿಕಾಣಿ ಹೂಡಿದ್ದಾರೆ.. ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯಸ್ನಾನ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment