ಪ್ಯಾರಿಸ್ ಅಂಗಳದಲ್ಲಿ ಇತಿಹಾಸ ಬರೆದ ಮನು ಭಾಕರ್: 10 ಮೀಟರ್ ಏರ್​ ಪಿಸ್ತೂಲ್​ನಲ್ಲಿ ಒಲಿದ ಕಂಚು

author-image
Gopal Kulkarni
Updated On
ಗೆಲುವಿನ ಕಾರಣ ಬಿಚ್ಚಿಟ್ಟ ಮನು ಭಾಕರ್: ಭಗವದ್ಗೀತೆಯನ್ನು ಉಲ್ಲೇಖಿಸಿದ್ದೇಕೆ ಕಂಚಿನ ರಾಣಿ..?
Advertisment
  • ಪ್ಯಾರಿಸ್ ಅಂಗಳದಲ್ಲಿ ಮೊದಲ ಪದಕ ಬಾಚಿಕೊಂಡ ಭಾರತ
  • 10 ಮೀಟರ್ ಏರ್​ ಪಿಸ್ತೂಲ್​ನಲ್ಲಿ ಮನು ಭಾಕರ್​ಗೆ ಒಲಿದ ಕಂಚು
  • ಒಲಿಂಪಿಕ್ಸ್​ ಇತಿಹಾಸದಲ್ಲಿ ಮೊದಲ ಪದಕ ಗೆದ್ದ ಭಾರತೀಯ ಮಹಿಳೆ

ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಓಲಂಪಿಕ್ಸ್​ನಲ್ಲಿ ಭಾರತವು ಶುಭಾರಂಭ ಮಾಡಿದೆ. ಕ್ರೀಡಾಕೂಟಗಳು ಶುರುವಾಗಿ ಎರಡನೇ ದಿನಕ್ಕೆ ಮೊದಲ ಪದಕವನ್ನು ಭಾರತ ಗೆದ್ದುಕೊಂಡಿದೆ. 10 ಮೀಟರ್ ಏರ್​ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ ಅಂಗಳದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಕೂಡ ಮನು ಪಾತ್ರರಾಗಿದ್ದಾರೆ. ಒಲಿಂಪಿಕ್ಸ್ ಆರಂಭದಲ್ಲಿಯೇ ಭಾರತ ಮೊದಲ ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡಾಪಟುಗಳು ಭರವಸೆಯನ್ನು ಮೂಡಿಸಿದ್ದಾರೆ. ಒಂದು ಕಡೆ ಪಿವಿ ಸಿಂಧು ಹಾಗೂ ಸಾತ್ವಿಕ್ ಚಿರಾಗ್​ ಜೋಡಿ ಸಿಂಗಲ್ಸ್ ಹಾಗೂ ಡಬಲ್ಸ್ ಬ್ಯಾಡ್ಮಿಂಟನ್​ ಪಂದ್ಯಗಳಲ್ಲಿ ಮೊದಲ ಗೆಲುವು ದಾಖಲಿಸಿದ್ದು, ಬಂಗಾರದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಚಿನ್ನದ ಬೇಟೆಗೆ ಮೊದಲ ಹೆಜ್ಜೆಯಿಟ್ಟ ಪಿ.ವಿ.ಸಿಂಧು: ಮಾಲ್ಡೀವ್ಸ್​ನ ಫಾತಿಮಾ ವಿರುದ್ಧ ಭರ್ಜರಿ ಗೆಲುವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment