ಕೋಟೆಕಾರು ಬ್ಯಾಂಕ್‌ ಲೂಟಿ.. ದರೋಡೆಯ ಪ್ರಮುಖ ಆರೋಪಿ ಮೇಲೆ ಶೂಟೌಟ್‌; ಆಗಿದ್ದೇನು?

author-image
admin
Updated On
ಕೋಟೆಕಾರು ಬ್ಯಾಂಕ್‌ ಲೂಟಿ.. ದರೋಡೆಯ ಪ್ರಮುಖ ಆರೋಪಿ ಮೇಲೆ ಶೂಟೌಟ್‌; ಆಗಿದ್ದೇನು?
Advertisment
  • ಕೋಟೆಕಾರು ಬ್ಯಾಂಕ್‌ನಿಂದ ದರೋಡೆ ಮಾಡಿದ ಆರೋಪಿಗಳು
  • ನಿನ್ನೆ ತಮಿಳುನಾಡಿನ ತಿರುವನ್ವೇಲಿ ಪದ್ಮನೇರಿ ಗ್ರಾಮದಲ್ಲಿ ಬಂಧನ
  • ದರೋಡೆಯ ಪ್ರಮುಖ ಆರೋಪಿ ಕಣ್ಣನ್ ಮಣಿ ಮಾಡಿದ್ದೇನು?

ಕೋಟೆಕಾರು ಬ್ಯಾಂಕ್ ದರೋಡೆಕೋರರ ಮೇಲೆ ಮಂಗಳೂರು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 12 ಕೋಟಿ ಲೂಟಿ ಮಾಡಿದ ಪ್ರಮುಖ ಆರೋಪಿ ಮುಂಬೈ ಕಣ್ಣನ್ ಮಣಿಗೆ ಗುಂಡೇಟು ತಗುಲಿದೆ.

ಕೋಟೆಕಾರು ಬ್ಯಾಂಕ್‌ನಿಂದ ದರೋಡೆ ಮಾಡಿದ ಆರೋಪಿಗಳು ತಮಿಳುನಾಡಿನಲ್ಲಿ ಸಿಕ್ಕಿಬಿದ್ದಿದ್ದರು. ತಮಿಳುನಾಡಿನಿಂದ ಆರೋಪಿಗಳನ್ನು ಮಂಗಳೂರಿಗೆ ಕರೆ ತಂದು ಮಹಜರು ಮಾಡುವ ವೇಳೆ ಆರೋಪಿ ಕಣ್ಣನ್ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರ ಮೇಲೆ ಕಣ್ಣನ್ ಮಣಿ ದಾಳಿ ನಡೆಸಲು ಯತ್ನಿಸಿದ್ದು, ಸಿಸಿಬಿ ಇನ್ಸ್‌ಪೆಕ್ಟರ್ ರಫೀಕ್ ಅವರು ಶೂಟ್ ಮಾಡಿದ್ದಾರೆ.

publive-image

ಇದನ್ನೂ ಓದಿ: ಮಂಗಳೂರು ಬ್ಯಾಂಕ್ ದರೋಡೆಗೆ 2 ತಿಂಗಳ ಪ್ಲಾನ್.. ಕಾರು ಬಿಟ್ಟು ಚಿನ್ನ ಬಚ್ಚಿಟ್ಟು ಎಸ್ಕೇಪ್; ಆಮೇಲೇನಾಯ್ತು? 

ನಿನ್ನೆ ತಮಿಳುನಾಡಿನ ತಿರುವನ್ವೇಲಿ ಪದ್ಮನೇರಿ ಗ್ರಾಮವೊಂದರಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳನ್ನ ಮಂಗಳೂರಿಗೆ ಕರೆ ತರಲಾಗುತ್ತಾ ಇತ್ತು. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಈ ಘಟನೆ ನಡೆದಿದೆ. ದರೋಡೆಯ ಪ್ರಮುಖ ಆರೋಪಿ ಕಣ್ಣನ್ ಮಣಿ ಅವರನ್ನ ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment