ಹೆಂಡತಿ ಮುಂದೆ ‘ಅಂಕಲ್’ ಅಂತ ಕರೆದಿದ್ದಕ್ಕೆ ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

author-image
Bheemappa
Updated On
ಹೆಂಡತಿ ಮುಂದೆ ‘ಅಂಕಲ್’ ಅಂತ ಕರೆದಿದ್ದಕ್ಕೆ ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ
Advertisment
  • ಹೆಚ್ಚು ಸಮಯ ಸೀರೆ ನೋಡಿದ್ರು ಯಾವುದನ್ನ ಆಯ್ಕೆ ಮಾಡಲಿಲ್ಲ
  • ತನ್ನ ಹೆಂಡತಿಗೆ ಸೀರೆ ಕೊಡಿಸಲೆಂದು ಅಂಗಡಿಗೆ ಬಂದಿದ್ದ ಗಂಡ
  • ಅಂಗಡಿ ಮಾಲೀಕನ ಜೊತೆ ಮೊದಲು ಗಲಾಟೆ ಮಾಡಿದ ಗ್ರಾಹಕ

ಭೋಪಾಲ್: ತನ್ನ ಹೆಂಡತಿ ಮುಂದೆ ಅಂಕಲ್ ಎಂದು ಕರೆದಿದ್ದಕ್ಕೆ ಗಂಡ, ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಬೋಪಾಲ್​ ನಗರದ ಜತ್ಖೇಡಿ ಏರಿಯಾದಲ್ಲಿ ನಡೆದಿದೆ.

ಸೀರೆ ಅಂಗಡಿ ಮಾಲೀಕ ವಿಶಾಲ್ ಶಾಸ್ತ್ರಿ ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಹಲ್ಲೆ ಮಾಡಿರುವ ರೋಹಿತ್ ಎನ್ನುವ ವ್ಯಕ್ತಿಯನ್ನ ಇದುವರೆಗೂ ಪೊಲೀಸರು ಬಂಧಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ:ಬೈ ಎಲೆಕ್ಷನ್​ ಭರಾಟೆ​; ಇಂದು ಮೂರು ಕ್ಷೇತ್ರಗಳಲ್ಲೂ ಘಟಾನುಘಟಿ ನಾಯಕರಿಂದ ಪ್ರಚಾರ​

publive-image

ತನ್ನ ಹೆಂಡತಿಗೆ ಸೀರೆ ಕೊಡಿಸಲೆಂದು ರೋಹಿತ್, ವಿಶಾಲ್ ಶಾಸ್ತ್ರಿಯ ಸೀರೆ ಅಂಗಡಿಗೆ ಬಂದಿದ್ದಾನೆ. ಈ ವೇಳೆ ಸಾಕಷ್ಟು ಸಮಯ ಕುಳಿತು ಅಂಗಡಿಯಲ್ಲಿ ಸೀರೆಗಳನ್ನು ನೋಡಿದ ದಂಪತಿ ಯಾವುದೇ ಸೀರೆಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಈ ವೇಳೆ ವಿಶಾಲ್ ನಿಮಗೆ ಯಾವ ಬೆಲೆಯಲ್ಲಿ ಸೀರೆ ಬೇಕು ‘ಅಂಕಲ್‘ ಎಂದು ಕೇಳಿದ್ದಾನೆ. ಇದಕ್ಕೆ ರೋಹಿತ್ 1,000 ರೂಪಾಯಿ ಬೆಲೆಯಲ್ಲಿ ಬೇಕು ಎಂದಿದ್ದಾರೆ. ಮತ್ತೆ ಇದಕ್ಕೆ ಪ್ರತಿಯಾಗಿ ಅಂಕಲ್ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಸೀರೆಗಳನ್ನು ನೋಡಿ ಎಂದಿದ್ದಾನೆ.

ಇಷ್ಟಕ್ಕೆ ಅಂಕಲ್ ಅಂತ ಕರೆಯಬೇಡ ಎಂದು ರೋಹಿತ್ ಗಲಾಟೆ ಮಾಡಿ, ಬೈದು ಹೆಂಡತಿಯನ್ನು ಕರೆದುಕೊಂಡು ಹೋಗಿದ್ದಾನೆ. ಪತ್ನಿಯನ್ನ ಮನೆಯಲ್ಲಿ ಬಿಟ್ಟು ಗ್ಯಾಂಗ್ ಕಟ್ಟಿಕೊಂಡು ವಾಪಸ್ ಬಂದು ಸೀರೆ ಅಂಗಡಿ ಮಾಲೀಕನಿಗೆ ಸರಿಯಾಗಿ ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಾಲೀಕ ಚಿಕಿತ್ಸೆ ಪಡೆದುಕೊಂಡು ನಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment