/newsfirstlive-kannada/media/post_attachments/wp-content/uploads/2024/10/Disturbed-Sleep.jpg)
ಶ್ವಾಸಕೋಶಗಳು ನಮ್ಮನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉಸಿರಾಟದ ಸಮಸ್ಯೆ ಎದುರಿಸಿದಾಗ ಶ್ವಾಸಕೋಶಗಳು ನಮಗಾಗಿ ಎಷ್ಟು ಕೆಲಸ ಮಾಡ್ತವೆ ಅಂತಾ ಅರ್ಥವಾಗುತ್ತದೆ. ಅದಕ್ಕೆ ನಾವು ಕೆಲವು ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು.
ಶ್ವಾಸಕೋಶ ಹಾನಿಯ ಆರಂಭಿಕ ಲಕ್ಷಣಗಳೇನು?
ಶ್ವಾಸಕೋಶದ ಹಾನಿಯ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು, ಚಿಕಿತ್ಸೆ ನೀಡುವುದು ಮುಖ್ಯ. ಶ್ವಾಸಕೋಶಕ್ಕೆ ಹಾನಿಯಾದರೆ ಅದರ ರೋಗ ಲಕ್ಷಣಗಳು ರಾತ್ರಿ ಗೊತ್ತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕ ಮಾಡಿ.
ಮಲಗುವಾಗ ಕೆಮ್ಮು
ಮಲಗಿದಾಗ ಕೆಮ್ಮು ಬರುವುದು ಶ್ವಾಸಕೋಶ ವೈಫಲ್ಯದ ಸಾಮಾನ್ಯ ಲಕ್ಷಣ. ನಿದ್ದೆ ಮಾಡುವಾಗ ಪದೇ ಪದೆ ಕೆಮ್ಮಲು ಪ್ರಾರಂಭಿಸಿದ್ರೆ ಶ್ವಾಸಕೋಶದಲ್ಲಿ ಉರಿಯೂತ ಅಥವಾ ಸೋಂಕಿನ ಸಂಕೇತವಾಗಿದೆ. ಕೆಮ್ಮು ಶ್ವಾಸಕೋಶದ ಗಂಭೀರ ಸಮಸ್ಯೆಯನ್ನು ಸೂಚಿಸುತ್ತದೆ.
/newsfirstlive-kannada/media/post_attachments/wp-content/uploads/2023/07/LUNGS.jpg)
ಉಸಿರಾಟದ ತೊಂದರೆ
ಚಿಕ್ಕ-ಪುಟ್ಟ ಕೆಲಸ ಮಾಡುವಾಗ ಅಥವಾ ಕೆಮ್ಮುವಾಗ ಪದೇ ಪದೆ ಉಸಿರಾಟದಲ್ಲಿ ತೊಂದರೆ ಅನುಭವಿಸಿದರೆ ಅದು ಕೂಡ ಶ್ವಾಸಕೋಶದ ಸಮಸ್ಯೆ ಆಗಿರುತ್ತದೆ. ಆಗಾಗ ಉಸಿರಾಟದ ತೊಂದರೆ ಎದುರಿಸಿದ್ರೆ ಜನ ಅದನ್ನು ನಿರ್ಲಕ್ಷಿಸಿಬಿಡುತ್ತಾರೆ. ಸರಿಯಾ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಮತ್ತಷ್ಟು ಉಲ್ಬಣಗೊಳ್ಳಬಹುದು.
ಇದನ್ನೂ ಓದಿ:ಗಾನ ಗಂಧರ್ವ ಆಡಿ ಬೆಳೆದ ಮನೆ ಈಗ ಅನಾಥ.. SPB ಕನಸಿನ ‘ಸಂಗೀತ ದೇಗುಲ’ದಲ್ಲೀಗ ಸ್ವರವಿಲ್ಲ
ಎದೆಯಲ್ಲಿ ನೋವು
ಕೆಮ್ಮುವಾಗ ಎದೆಯಲ್ಲಿ ನೋವು ಕಾಣಿಸಿಕೊಂಡರೆ ಶ್ವಾಸಕೋಶದ ಗಂಭೀರ ಸಮಸ್ಯೆ ಎಂದರ್ಥ. ಈ ನೋವು ಶ್ವಾಸಕೋಶದಲ್ಲಿ ಉರಿಯೂತ, ಸೋಂಕು ಅಥವಾ ಯಾವುದೇ ಇತರೆ ಕಾಯಿಲೆಯಿಂದಲೂ ಆಗಬಹುದು.
ಬಾಯಿಯಲ್ಲಿ ಲೋಳೆ
ಬಾಯಲ್ಲಿ ಹೆಚ್ಚುವರಿ ಲೋಳೆಯಿದ್ದರೂ ಅದು ಶ್ವಾಸಕೋಶದ ಸಮಸ್ಯೆಯಿಂದ ಆಗಿರುತ್ತದೆ. ಧೂಮಪಾನಿಗಳಲ್ಲಿ ಈ ಸಮಸ್ಯೆ ಸಾಮಾನ್ಯ. ಲೋಳೆ ಇರೋದು ಸಾಮಾನ್ಯ ಲಕ್ಷಣವಾಗಿರಬಹುದು. ಆದರೆ ಇದು ಹೆಚ್ಚಾಗಲು ಪ್ರಾರಂಭಿಸಿದ್ರೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇಂತಹ ಲಕ್ಷಣಗಳನ್ನು ಕಂಡು ಬಂದರೆ ಡೋಂಟ್ ಕೇರ್ ಎನ್ನಬಾರದು. ಅಡ್ರಿನಲ್ ಗ್ರಂಥಿಗಳ ಆರೋಗ್ಯಕ್ಕಾಗಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.
ಇದನ್ನೂ ಓದಿ:BBK11: ಮತ್ತೆ ಮೋಸದಾಟ ಆಡಿದ್ರಾ ಭವ್ಯಾ.. ಹನುಮಂತನ ಮೇಲೆ ಹಲ್ಲೆ ಮಾಡಿದ್ದಕ್ಕೆ ಶಿಕ್ಷೆ ಆಗುತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us