newsfirstkannada.com

ಡಬಲ್ ಬ್ಯಾರೆಲ್ ಗನ್‌ನಿಂದ ಶೂಟೌಟ್.. ಚಿರತೆ ಸಾಯಿಸಲು ಅರಣ್ಯ ಕಾಯ್ದೆಗಳಲ್ಲಿ ಅನುಮತಿ ಇದ್ಯಾ?

Share :

Published November 1, 2023 at 6:04pm

Update December 7, 2023 at 10:39pm

    ಗುಂಡೇಟಿನಿಂದಲೇ ಸಾವನ್ನಪ್ಪಿದೆ ಎಂದ ಅರಣ್ಯ ಇಲಾಖೆ ಅಧಿಕಾರಿ

    ಅರಿವಳಿಕೆ ತಜ್ಞ, ಡಾಕ್ಟರ್ ಕಿರಣ್ ಅವರ ಮೇಲೆ ದಾಳಿ ಮಾಡಿದ್ದ ಚಿರತೆ

    ಕಳೆದ 5 ದಿನದಿಂದ ಕೂಡ್ಲು ಗೇಟ್‌ ಬಳಿ ಓಡಾಡುತ್ತಿದ್ದ ಚಿರತೆ ಸಾವು

ಬೆಂಗಳೂರು: ಕೂಡ್ಲು ಗೇಟ್ ಬಳಿಯ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾಗೆ ಬಂದಿದ್ದ ಚಿರತೆ ಸೆರೆ ಸಿಕ್ಕ ಬಳಿಕ ಸಾವನ್ನಪ್ಪಿದೆ. ಚಿರತೆ ಗುಂಡೇಟಿನಿಂದಲೇ ಮೃತಪಟ್ಟಿದೆ ಅನ್ನೋದು ಖಚಿತವಾಗಿದೆ. ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದ ಚಿರತೆ ಗುಂಡೇಟಿಗೆ ಬಲಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

ಚಿರತೆ ಸಾವಿನ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ CCF ಅಧಿಕಾರಿ ಲಿಂಗರಾಜು ಅವರು ಮಾಹಿತಿ ನೀಡಿದ್ದಾರೆ. ಕಳೆದ 5 ದಿನದಿಂದ ಕೂಡ್ಲು ಗೇಟ್‌ ಬಳಿ ಓಡಾಡುತ್ತಿದ್ದ ಚಿರತೆ ಸಾವನ್ನಪ್ಪಿದೆ. ಗುಂಡೇಟು ತಗುಲಿದ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ತರಲಾಯಿತು. ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡಿದ್ರೂ ಅದು ಫಲಕಾರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷ್ಣಾರೆಡ್ಡಿ ಲೇಔಟ್ ಸುತ್ತಾಮುತ್ತ ಕಾಣಿಸಿಕೊಂಡಿದ್ದ ಚಿರತೆ ಹಿಡಿಯಲು ಇಂದು ವಿವಿಧ ವಲಯಗಳ ಅರಣ್ಯ ಅಧಿಕಾರಿಗಳು ಆಪರೇಷನ್ ಚಿರತೆ ನಡೆಸಿದ್ದರು. ಈ ಕಾರ್ಯಾಚರಣೆ ಮಧ್ಯೆ ಅರಿವಳಿಕೆ ತಜ್ಞ, ಡಾಕ್ಟರ್ ಕಿರಣ್ ಅವರು ಚಿರತೆಗೆ ಅರವಳಿಕೆ ಮದ್ದು ನೀಡಲು ಮುಂದಾಗಿದ್ದರು. ಆಗ ಡಾಕ್ಟರ್ ಕಿರಣ್ ಅವರ ಮೇಲೆ ಚಿರತೆ ದಾಳಿ ಮಾಡಿತ್ತು. ಗಾಯಗೊಂಡಿದ್ದ ಕಿರಣ್ ಹಾಗೂ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗಿತ್ತು.

ಹೀಗೆ ಸತಾಯಿಸುತ್ತಿದ್ದ ಕಿಲಾಡಿ ಚಿರತೆಯನ್ನು ಹಿಡಿಯೋದು ಕಷ್ಟವಾದಾಗ ಅರಣ್ಯ ಇಲಾಖೆ ಸಿಬ್ಬಂದಿ ಮೇಲಧಿಕಾರಿಗಳಿಂದಲೇ ಅನುಮತಿ ಪಡೆದಿದ್ದೆವು. ಅರಣ್ಯ ಕಾಯ್ದೆಗಳಲ್ಲಿ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದಾಗ ಗುಂಡು ಹಾರಿಸಲು ಅವಕಾಶವಿದೆ. ಗುಂಡು ಹಾರಿಸಲು ನಾವು ಅನುಮತಿಯನ್ನು ಪಡೆದಿದ್ದೆವು ಎಂದು CCF ಲಿಂಗರಾಜು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಬಲ್ ಬ್ಯಾರೆಲ್ ಗನ್‌ನಿಂದ ಶೂಟೌಟ್.. ಚಿರತೆ ಸಾಯಿಸಲು ಅರಣ್ಯ ಕಾಯ್ದೆಗಳಲ್ಲಿ ಅನುಮತಿ ಇದ್ಯಾ?

https://newsfirstlive.com/wp-content/uploads/2023/11/Benagaluru-Chirate-Death.jpg

Load More