ಸಲ್ಮಾನ್ ಖಾನ್ ಒಬ್ರೇ ಅಲ್ಲ, ಜೈಲಿನಲ್ಲಿನ ಈ ಖದೀಮರನ್ನೂ ಟಾರ್ಗೆಟ್ ಮಾಡಿದ ಬಿಷ್ಣೋಯ್ ಗ್ಯಾಂಗ್

author-image
Bheemappa
Updated On
ಸಲ್ಮಾನ್ ಖಾನ್ ಒಬ್ರೇ ಅಲ್ಲ, ಜೈಲಿನಲ್ಲಿನ ಈ ಖದೀಮರನ್ನೂ ಟಾರ್ಗೆಟ್ ಮಾಡಿದ ಬಿಷ್ಣೋಯ್ ಗ್ಯಾಂಗ್
Advertisment
  • ಗ್ಯಾಂಗ್ ಮುನ್ನಡೆಸುತ್ತಿದ್ದಾರಾ ಲಾರೆನ್ಸ್​ ಸಹೋದರ ಅನ್ಮೋಲ್?
  • ಜೈಲಿನಲ್ಲಿ ಇರುವವರನ್ನ ಟಾರ್ಗೆಟ್ ಮಾಡಿದ ಬಿಷ್ಣೋಯ್​ ಗ್ಯಾಂಗ್
  • ಬಾಲಿವುಡ್ ಸೆಲೆಬ್ರಿಟಿಗಳಿಗೂ ಭೂಗತ ಲೋಕದವರಿಗೂ ನಂಟು?

ಬಾಲಿವುಡ್​ ನಟರಾಯಿತು, ಪ್ರಭಾವಿ ರಾಜಕಾರಿಣಿಗಳು ಆಯಿತು. ಈಗ ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನ ಕರಿನೆರಳು​ ಕುಕೃತ್ಯಗಳನ್ನ ಎಸಗೋ ಖದೀಮರ ಮೇಲೂ ಬಿದ್ದಿದೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೊಲೆ ಆರೋಪಿಯೊಬ್ಬನನ್ನ ಬಿಷ್ಣೋಯ್​ ಗ್ಯಾಂಗ್​ ಟಾರ್ಗೆಟ್​ ಮಾಡಿದೆ ಅನ್ನೋ ಸತ್ಯ ಹೊರಬಿದ್ದಿದೆ. ಹಾಗಿದ್ರೆ ಬಿಷ್ಣೋಯ್ ಗ್ಯಾಂಗ್​ನ ಆ ಟಾರ್ಗೆಟ್​ ಯಾರು?.

publive-image

ಇದನ್ನೂ ಓದಿ:ಶಾಸಕರಿಗೆ ₹50 ಕೋಟಿ ಆಫರ್​; ಬಿಜೆಪಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಸಚಿವರು, ಏನಂದ್ರು?

ಬಾಲಿವುಡ್ ಸೆಲೆಬ್ರಿಟಿಗಳಿಗೂ ಭೂಗತ ಲೋಕದವರಿಗೂ ನಂಟು, ಇಂದು ನಿನ್ನೆಯದಲ್ಲ.. ಯಾವಾಗ, ಕನಸಿನ ನಗರಿ ಮುಂಬೈನಲ್ಲಿ ದಾವೂದ್ ಇಬ್ರಾಹಿಂ ಹಿಡಿತ ಕಮ್ಮಿಯಾಯಿತೋ, ಅಲ್ಲಿಂದ ಅಂಡರ್ ವರ್ಲ್ಡ್ ಹಿಡಿತವೂ ಬಾಲಿವುಡ್ ಮೇಲೆ ಕಮ್ಮಿಯಾಯಿತು. ಆದರೂ, ಮುಂಬೈನಲ್ಲಿನ ಸೆಲೆಬ್ರಿಟಿ, ರಾಜಕಾರಣಿಗಳು, ಉದ್ಯಮಿಗಳಿಗೆ ಸದಾ ಒಂದಲ್ಲ, ಒಂದು ಬೆದರಿಕೆಗಳು ಅವರ ನೆಮ್ಮದಿಯನ್ನು ಹಾಳು ಮಾಡುತ್ತ ಇರುತ್ತವೆ. ಸದ್ಯ ಸೂಪರ್​ ಸ್ಟಾರ್​ ಸಲ್ಮಾನ್​ ಕಾನ್​ ಟಾರ್ಗೆಟ್​ ಮಾಡಿದ್ದ ಬಿಷ್ಣೋಯ್​ ಗ್ಯಾಂಗ್​ನ ಮತ್ತೊಂದು ಟಾರ್ಗೆಟ್​ ಸೀಕ್ರೆಟ್​ ಬಟಾಬಯಲಾಗಿದೆ.

ಶ್ರದ್ಧಾ ಹತ್ಯೆಗೈದಿದ್ದ ಕಿರಾತಕನೇ ಬಿಷ್ಣೋಯ್​ ಗ್ಯಾಂಗ್ ಟಾರ್ಗೆಟ್​!

2022ರಲ್ಲಿ ತನ್ನ ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್​ನ ಕೊಲೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲಾ ಸದ್ಯ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದಾನೆ ಅನ್ನೋ ಸೀಕ್ರೆಟ್​ ಬಯಲಾಗಿದೆ. ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಪ್ರಕರಣದ ತನಿಖೆ ವೇಳೆ ಪೂನಾವಾಲಾ ಕೂಡ ಬಿಷ್ಣೋಯ್ ಶೂಟರ್‌ಗಳ ಹಿಟ್ ಲಿಸ್ಟ್​ನಲ್ಲಿದ್ದ ಎಂಬ ಸತ್ಯ ಗೊತ್ತಾಗಿದೆ. ಅಫ್ತಾಬ್ ಪೂನಾವಾಲಾ ಸದ್ಯ ತಿಹಾರ್ ಜೈಲಿನಲ್ಲಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ.

ಬಿಷ್ಣೋಯ್​ ಗ್ಯಾಂಗ್​​ನ ಹಿಟ್​ ಲಿಸ್ಟ್​​ನಲ್ಲಿದ್ದಾರೆ ಘಟಾನುಗಟಿಗಳು!

NIA ಮಾಹಿತಿ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಹಲವಾರು ವ್ಯಕ್ತಿಗಳನ್ನು ಹಿಟ್ ಲಿಸ್ಟ್​ನಲ್ಲಿ ಸೇರಿಸಿಕೊಂಡಿದೆ ಎಂದು ತಿಳಿದುಬಂದಿದೆ. ಈ ಪ್ರಕಾರ ಕೃಷ್ಣಮೃಗ ಭೇಟೆ ಆರೋಪದಲ್ಲಿ ಪ್ರತೀಕಾರಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್, ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ ವಾಲಾ ಮ್ಯಾನೇಜರ್ ಶಗನ್‌ಪ್ರೀತ್ ಸಿಂಗ್.. ಗುರುಗ್ರಾಮ್‌ ಜೈಲಿನಲ್ಲಿರುವ ದರೋಡೆಕೋರರಾದ ಕೌಶಲ್ ಚೌಧರಿ ಮತ್ತು ಅಮಿತ್ ದಾಗರ್ ಕೂಡ ಟಾರ್ಗೆಟ್​ ಆಗಿದ್ದಾರೆ.

ಇದನ್ನೂ ಓದಿ: ಒಂದು ಸಾವಿರ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ತಕ್ಷಣವೇ ಅಪ್ಲೇ ಮಾಡಿ!

publive-image

11 ರಾಜ್ಯ.. 700ಕ್ಕೂ ಹೆಚ್ಚು ಶೂಟರ್ಸ್​.. ಬಿಷ್ಣೋಯ್ ದರ್ಬಾರ್​!

11 ರಾಜ್ಯಗಳಾದ್ಯಂತ 700ಕ್ಕೂ ಹೆಚ್ಚು ಶೂಟರ್‌ಗಳ ವ್ಯಾಪಕ ಜಾಲವನ್ನ ಬಿಷ್ಣೋಯ್ ಗ್ಯಾಂಗ್ ಹೊಂದಿದೆ. ಸದ್ಯ ಬಿಷ್ಣೋಯ್ ಅಹಮದಾಬಾದ್‌ನ ಸಬರಮತಿ ಜೈಲಿನಲ್ಲಿ ಸೆರೆವಾಸದಲ್ಲಿದ್ದಾನೆ. ಸದ್ಯ ಈ ಗ್ಯಾಂಗ್​ನ ರುವಾರಿಯಯನ್ನ ಲಾರೆನ್ಸ್ ಸಹೋದರ ಅನ್ಮೋಲ್ ಬಿಷ್ಣೋಯ್ ಮತ್ತು ಇನ್ನೊಬ್ಬ ಕುಖ್ಯಾತ ದರೋಡೆಕೋರ ಗೋಲ್ಡಿ ಬ್ರಾರ್ ಮುನ್ನಡೆಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ಟಾರ್ಗೆಟ್..​ ಟಾರ್ಗೆಟ್..​ ಅಂತ ಒಬ್ಬೊಬ್ಬರಿಗೆ ಮಹೂರ್ತ ಇಡ್ತಿರೋ ಬಿಷ್ಣೋಯ್ ಗ್ಯಾಂಗ್ ಇನ್ನೂ ಯಾಱರ ಹೆಸರನ್ನ ತನ್ನ ಹಿಟ್​ ಲಿಸ್ಟ್​ನಲ್ಲಿ ಇಟ್ಕೊಂಡಿದೆ ಅನ್ನೋದೆ ಸಸ್ಪೆನ್ಸ್​​..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment