newsfirstkannada.com

ಪ್ರೀತಿಯ ಬಲೆಯಲ್ಲಿ ಶ್ರೇಯಸ್ ಅಯ್ಯರ್​; ತಮಗಿಂತ 8 ವರ್ಷದ ಹಿರಿಯ ನಟಿ ಜೊತೆ ಡೇಟಿಂಗ್..!

Share :

Published March 14, 2024 at 12:28pm

  ಟೀಮ್ ಇಂಡಿಯಾದ ಪ್ಲೇ ಬಾಯ್ ಆದ್ರಾ ಶ್ರೇಯಸ್​..?

  ಬಾಲಿವುಡ್ ಬ್ಯೂಟಿ ಜೊತೆ ಶ್ರೇಯಸ್​ ಪ್ರೇಮಾಯಣ..?

  ಪ್ರೀತಿಗೆ ಸೇತುವೆ ಆಯಿತು ಅದೊಂದು ಜಾಹೀರಾತು..?

ಟೀಮ್ ಇಂಡಿಯಾ ಸ್ಟಾರ್ ಆಟಗಾರ ಶ್ರೇಯಸ್​ ಅಯ್ಯರ್​ ಕರಿಯರ್ ಅಂತತ್ರಕ್ಕೆ ಸಿಲುಕಿದೆ. ಸ್ವಯಂಕೃತ ಅಪರಾಧಕ್ಕೆ ಬೆಲೆ ತೆತ್ತಿರುವ ಮುಂಬೈಕರ್ ಭವಿಷ್ಯ ಮುಂದೇನು ಅನ್ನೋ ಪ್ರಶ್ನೆ ತಲೆದೂರಿದೆ. ಇದ್ರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುದ್ದಿಯೊಂದು ಸದ್ದು ಮಾಡ್ತಿದೆ.

ಕ್ರಿಕೆಟ್ ಹಾಗೂ ಬಾಲಿವುಡ್​​ ನಡುವಿನ ಸಂಬಂಧ ಇಂದು, ನಿನ್ನೆಯದ್ದಲ್ಲ. ಇದ್ರ ಇತಿಹಾಸ ದೊಡ್ಡದಿದೆ. ಈ ಎರಡೂ​ ಬೇರೇಯದ್ದೇ ಲೋಕವಾಗಿದ್ರೂ, ನಂಟು ಮಾತ್ರ ಬಿಡಿಸಲಾಗದ್ದಾಗಿದೆ. ಲವ್​​ಸ್ಟೋರಿ ವಿಚಾರದಲ್ಲಂತೂ ಆಗಾಗ ಸುದ್ದಿಗಳು ಹೊರ ಬೀಳ್ತಾನೆ ಇರ್ತಾವೆ. ಇದೀಗ ಲವ್​ ಗಾಸಿಪ್​ ಲಿಸ್ಟ್​ಗೆ ಶ್ರೇಯಸ್​ ಅಯ್ಯರ್ ಹೊಸ ಸೇರ್ಪಡೆಯಾಗಿದ್ದಾರೆ.

ಸಿಕ್ರೇಟ್​ ರಿಲೇಷನ್​​​ಶಿಪ್​​ನಲ್ಲಿ ಶ್ರೇಯಸ್​ ಅಯ್ಯರ್..?
ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಶ್ರೇಯಸ್​, ಬಿಸಿಸಿಐ ವಾರ್ಷಿಕ ಒಪ್ಪಂದದಿಂದಲೂ ಹೊರಬಿದ್ದಿದ್ದಾರೆ. ಸದ್ಯ ರಣಜಿ ಆಡ್ತಿರೋ ಶ್ರೇಯಸ್​​​, ಭವಿಷ್ಯದ ಸದ್ಯ ಅಂತತ್ರಕ್ಕೆ ಸಿಲುಕಿದೆ. ಇದ್ರ ನಡುವೆ, ಶ್ರೇಯಸ್ ಡೇಟಿಂಗ್​ ವಿಚಾರದಲ್ಲಿ ಸಖತ್​ ಸುದ್ದಿಯಾಗಿದ್ದಾರೆ. ಅಂದ್ಹಾಗೆ ಇದೀಗ ಶ್ರೇಯಸ್​ ಹೆಸರು ತಳುಕು ಹಾಕಿಕೊಂಡಿರೋದು ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್ ಜೊತೆ.

ಆ ಜಾಹೀರಾತು ಶೂಟಿಂಗ್ ಆಯ್ತಾ ಪ್ರೇಮಕ್ಕೆ ವೇದಿಕೆ..?
ಕೆಲ ತಿಂಗಳ ಹಿಂದೆ ಮೊಬೈಲ್ ಫೋನ್​​ವೊಂದರ ಜಾಹೀರಾತು​ ಶೂಟಿಂಗ್​ನಲ್ಲಿ ಮೊದಲ ಬಾರಿ ಶ್ರದ್ಧಾ ಹಾಗೂ ಶ್ರೇಯಸ್​​ ಜೊತೆಯಾಗಿ ನಟಿಸಿದ್ರು. ಇದೇ ಶೂಟಿಂಗ್​ನಲ್ಲಾದ ಪರಿಚಯ ಸ್ನೇಹಕ್ಕೆ ದಾರಿ ಮಾಡಿಕೊಟ್ಟಿತ್ತು. ಆದ್ರೀಗ ಇದೇ ಸ್ನೆಹವೇ ಪ್ರೇಮಕ್ಕೆ ತಿರುಗಿದೆ ಎಂಬ ರೂಮರ್ಸ್​ ಬಿಟೌನ್​ನಲ್ಲಿ ಹರಿದಾಡ್ತಿದೆ.

ಶೂಟಿಂಗ್​ನಲ್ಲಿ ಪರಿಚಯ, ಇನ್ಸ್​​​ಸ್ಟಾಗ್ರಾಂನಲ್ಲಿ ಫಾಲೋ​.​.!
ಶೂಟಿಂಗ್​ನಲ್ಲಿ ಪರಿಚಯವಾಗಿದ್ದ ಇವರಿಬ್ಬರು, ಇನ್ಸ್​ಟಾದಲ್ಲಿ ಪರಸ್ಪರ ಫಾಲೋ ಮಾಡ್ತಿದ್ದಾರೆ. ಸದ್ಯ ಬಾಲಿವುಡ್​ ಅಂಗಳದಲ್ಲಿ ನಟಿ ಶ್ರದ್ದಾ ಕಪೂರ್ ಹಾಗೂ ಶ್ರೇಯಸ್​ಸಿಕ್ರೇಟ್ ಆಗಿ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಗುಲ್ಲೆದಿದೆ. ರಹಸ್ಯವಾಗಿ ಕೈ ಕೈ ಹಿಡಿದು ಸುತ್ತಾಡ್ತಿದ್ದಾರೆ ಎಂಬ ಸುದ್ದಿಯಿದೆ. ಆದ್ರೆ, ಶ್ರೇಯಸ್​ ಅಯ್ಯರ್​ಗೆ ಕೇವಲ 29 ವರ್ಷ, ಶ್ರದ್ಧಾಗೆ 37 ವರ್ಷ ವಯಸ್ಸು. 8 ವರ್ಷದ ದೊಡ್ಡವಳ ಜೊತೆ ಶ್ರೇಯಸ್​​ ಲವ್​ ಬಿದ್ದಿದ್ದಾರಾ ಎಂಬ ಪ್ರಶ್ನೆ ಹಲವರಲ್ಲಿದೆ.

ಪ್ಲೇ ಬಾಯ್ ಆಗಿ ಬಿಟ್ರಾ ಶ್ರೇಯಸ್​ ಅಯ್ಯರ್..?
ಟೀಮ್ ಇಂಡಿಯಾದ ಬ್ಯಾಟ್ಸ್​​ಮನ್​ ಶ್ರೇಯಸ್​ ಅಯ್ಯರ್​​​​​​​​​​​​, ರೂಮರ್ಸ್​ನಿಂದ ಬಹು ದೂರವೇ ಉಳಿದಿದ್ದರು. ಆದ್ರೀಗ ಶ್ರೇಯಸ್​​, ಆಟಕ್ಕಿಂತ ಹೆಚ್ಚು ರೂಮರ್​​ಗಳಿಂದಲೇ ಸುದ್ದಿಯಾಗ್ತಿದ್ದಾರೆ. ಏಕದಿನ ವಿಶ್ವಕಪ್ ವೇಳೆ ತ್ರಿಷಾ ಕುಲಕರ್ಣಿ ಜೊತೆ ದೀಪಾವಳಿ ಸೆಲಬ್ರೇಟ್​​​ ಮಾಡಿದ್ರು.​ಇದೀಗ ನಟಿ ಶ್ರದ್ದಾ ಜೊತೆ ಸುತ್ತಾಡ್ತಿದ್ದಾರೆ.

ಶ್ರೇಯಸ್​ ಅಲ್ಲ.. ಹಲವರ ಜೊತೆ ಶ್ರದ್ಧಾ ಹೆಸರು ತಳುಕು!
ನಟಿ ಶ್ರದ್ಧಾ ಕಪೂರ್ ಹೆಸರು ಕೂಡ ಹಲವರ ಜೊತೆ ತಳುಕು ಹಾಕಿಕೊಂಡಿದೆ. ಬಾಲಿವುಡ್​ ಎಂಟ್ರಿಗೂ ಮುನ್ನ ಉದ್ಯಮಿ ವನ್ರಾಜ್ ಝವೇರಿ ಜೊತೆ 5 ವರ್ಷಗಳ ರಿಲೇಷನ್​ ಶಿಪ್​ನಲ್ಲಿದ್ರು ಎನ್ನಲಾಗಿತ್ತು. ಆ ಬಳಿಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ಫೋಟೋಗ್ರಾಫರ್ ರೋಹನ್ ಶ್ರೀಶಾಂತ್​, ನಟ ವರುಣ್ ಧವನ್, ಫರಾನ್ ಅಕ್ತರ್​​ ಹಾಗೂ ​ಅದಿತ್ಯ ರಾಯ್ ಜೊತೆ ಶ್ರದ್ಧಾ ಹೆಸರು ತಳುಕು ಹಾಕಿಕೊಂಡಿತ್ತು.
ಕೆಲ ದಿನಗಳಿಂದ ಶ್ರದ್ಧಾ ರೈಟರ್ ರಾಹುಲ್ ಮೂಡಿ ಜೊತೆ ರಿಲೇಷನ್​ಶಿಪ್​ನಲ್ಲಿದ್ದಾರೆ ಎನ್ನಲಾಗಿತ್ತು. ಅನಂತ್ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್​​​ನಲ್ಲಿ ರಾಹುಲ್ ಹಾಗೂ ಶ್ರದ್ದಾ ಜೊತೆಯಾಗಿ ಕಾಣಿಸಿಕೊಂಡಿದ್ರು. ಈಗ ನೋಡಿದ್ರೆ, ಕ್ರಿಕೆಟಿಗ ಶ್ರೇಯಸ್​ ಅಯ್ಯರ್ ಜೊತೆಯೂ ಶ್ರದ್ದಾ ಕಪೂರ್ ಹೆಸರು ಕಾಣಿಸಿಕೊಳ್ಳುತ್ತಿದೆ. ಮುಂದೆ ಏನಾಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪ್ರೀತಿಯ ಬಲೆಯಲ್ಲಿ ಶ್ರೇಯಸ್ ಅಯ್ಯರ್​; ತಮಗಿಂತ 8 ವರ್ಷದ ಹಿರಿಯ ನಟಿ ಜೊತೆ ಡೇಟಿಂಗ್..!

https://newsfirstlive.com/wp-content/uploads/2024/03/IYER.jpg

Load More