/newsfirstlive-kannada/media/post_attachments/wp-content/uploads/2024/08/Modi-2.jpg)
ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಇನ್​​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಹೆಚ್ಚಿಸಿಕೊಂಡಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿಕ್ಕಿ ಶ್ರದ್ಧಾ ಫಾಲೋವರ್ಸ್​ ಸಂಖ್ಯೆ ಜಾಸ್ತಿ ಮಾಡಿಕೊಂಡಿದ್ದಾರೆ.
ಶ್ರದ್ಧಾ ಸದ್ಯ ಇನ್​​ಸ್ಟಾದಲ್ಲಿ 91.4 ಮಿಲಿಯನ್​​​​​ ಅನುಯಾಯಿಗಳನ್ನು ಹೊಂದಿದ್ದಾರೆ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್​ ಕೊಹ್ಲಿ, ಬಾಲಿವುಡ್​​ ಪಿಂಕಿ ಪ್ರಿಯಾಂಕಾ ಚೋಪ್ರಾ ಅವರ ಬಳಿಕ ಮೂರನೇ ಅತಿ ಹೆಚ್ಚು ಫಾಲೋವರ್ಸ್​​ ಹೊಂದಿರುವ ನಟಿಯಾಗಿ ಶ್ರದ್ಧಾ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಂಬಾರಿ ಹೊತ್ತು ದಸರಾ ಸುತ್ತಲಿರೋ ಅಭಿಮನ್ಯು.. ರಾಜ್ಯಗಾಂಭೀರ್ಯದಿಂದ ಹೆಜ್ಜೆ ಹಾಕೋ ಆನೆಗಳ ಪರಿಚಯ ಇಲ್ಲಿದೆ
/newsfirstlive-kannada/media/post_attachments/wp-content/uploads/2024/08/Shradda-kapoor.jpg)
ಪ್ರಧಾನಿ ಮೋದಿ ಸದ್ಯ 91.3 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಎಕ್ಸ್​ನಲ್ಲಿ 101 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ. ಆ ಮೂಲಕ ನರೇಂದ್ರ ಮೋದಿಯವರು ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭೀಕರ ಬಸ್ ಅಪಘಾತ.. ಸಾವಿನ ಸಂಖ್ಯೆ 28ಕ್ಕೂ ಹೆಚ್ಚು; 23 ಮಂದಿಗೆ ಗಂಭೀರ ಗಾಯ; ಪ್ರಧಾನಿ ತೀವ್ರ ಕಂಬನಿ
ಸ್ತ್ರೀ ಭರ್ಜರಿ ಕಲೆಕ್ಷನ್
ನಟಿ ಶ್ರದ್ಧಾ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಇತ್ತೀಚೆಗೆ ಸ್ತ್ರೀ 2 ಸಿನಿಮಾ ರಿಲೀಸ್​ ಆಗಿದೆ. 100 ಕೋಟಿ ಬಜೆಟ್​​ ಸಿನಿಮಾ ಬಾಕ್ಸ್​ ಆಫೀಸಿನಲ್ಲಿ 300 ಕೋಟಿ ಗಳಿಸಿದೆ. ಹಾರರ್​ ಕಾಮಿಡಿ ಸಿನಿಮಾ ಇದಾಗಿದ್ದು, ಆಗಸ್ಟ್​ 15ರಂದು ತೆರೆಕಂಡಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us