ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..

author-image
Ganesh
Updated On
ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..
Advertisment
  • ಎರಡು ವರ್ಷದ ಹಿಂದೆ ರಾಕೇಶ್​ನನ್ನು ಮದುವೆ ಆಗಿದ್ದ ಗೌರಿ
  • ಬದುಕು ಸಾಗಿಸಲು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ರು
  • ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ರಾಕೇಶ್​

ಬೆಂಗಳೂರು: ಸುಂದರ ಸಂಸಾರವದು. ಗಂಡನಿಗೆ ಸಾಫ್ಟ್​ವೇರ್ ಕೆಲಸ. ಕೈ ತುಂಬಾ ಸಂಬಳ. ಹೆಂಡ್ತಿ ಕೂಡ ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಹುಡುಕ್ತಿದ್ದ ಸ್ಫುರದ್ರೂಪಿ ಅವಳು. ಹೀಗಿದ್ದಾಗಲೂ ಹೆಂಡ್ತಿಯನ್ನ ಕೊಲೆ ಮಾಡಿ ಸೂಟ್ ಕೇಸ್​ಗೆ ತುಂಬಿದ್ದಾನೆ.

ಏನಿದು ಪ್ರಕರಣ..?

ರಾಜಧಾನಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಕೃತ್ಯ ನಡೆದಿದೆ. ಇಲ್ಲಿ ರಾಕೇಶ್ ಕೊಲೆ ಮಾಡಿದ ಆರೋಪಿ ಪತಿ. ಗೌರಿ ಅನಿಲ್‌ಸಾಂಬೇಕರ್, ಗಂಡನಿಂದಲೇ ಕೊಲೆಯಾದ ಮಹಿಳೆ. ಮಾಸ್ ಕಮ್ಯುನಿಕೇಷನ್​ನಲ್ಲಿ ಡಿಗ್ರಿ ಮುಗಿಸಿದ್ದ ಗೌರಿ, ಹೌಸ್​ವೈಫ್​ ಆಗಿದ್ದಳು. ಈಕೆಯ ಪತಿ ಕೂಡ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಈ ದಂಪತಿ ಜೀವನದಲ್ಲಿ ಅದೇನ್​ ಆಯ್ತೋ ಏನೋ.. ಕಿರಾತಕ ಪತಿರಾಯ ಮುದ್ದಾದ ಹೆಂಡ್ತಿಯನ್ನ ಭೀಕರವಾಗಿ ಕೊಲೆಗೈದು ಸೂಟ್​ಕೇಸ್​ಗೆ ತುಂಬಿದ್ದಾನೆ.

ಇದನ್ನೂ ಓದಿ: ಬೇಸಿಕ್​ ಮೊಬೈಲ್​ ಬಳಸೋರಿಗೆ ಗುಡ್​ನ್ಯೂಸ್​​; ಕಡಿಮೆ ಬೆಲೆಗೆ ಹೊಸ ಪ್ಲಾನ್!

publive-image

ಯಾರು ರಾಕೇಶ್..?

ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್, ಎರಡು ವರ್ಷದ ಹಿಂದಷ್ಟೆ ಮದುವೆ ಆಗಿದ್ದರು. ಬದುಕು ಸಾಗಿಸಲು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ರು. ಪತಿ ರಾಕೇಶ್​ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಪತ್ನಿ ಗೌರಿ, ಮನೆಯಲ್ಲೇ ಇದ್ದು ಕೆಲಸವನ್ನು ಹುಡುಕುತ್ತಿದ್ದಳು. 1 ತಿಂಗಳ ಹಿಂದಷ್ಟೇ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದರು. ಪತಿ ರಾಕೇಶ್​ ವರ್ಕ್​ ಫ್ರಮ್​ ಹೋಮ್ ಕೆಲ್ಸ​ ಮಾಡುತ್ತಿದ್ದ. ಹೀಗೆ ಸುಖ ಜೀವನ ನಡೆಸುತ್ತಿದ್ದರುವ ಮೊನ್ನೆ ರಾತ್ರಿ ಊಟದ ಸಮಯದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆ ವಿರೋಪಕ್ಕೆ ತಿರುಗಿ ಬಳಿಕ ರಾಕೇಶ್​ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಕುತ್ತಿಗೆ, ಹೊಟ್ಟೆ ಕೊಯ್ದು ಸೂಟ್​ಕೇಸ್​ಗೆ ತುಂಬಿದ್ದಾನೆ.

ಇದನ್ನೂ ಓದಿ: ಒಂದು ಲೋಟ ಕರ್ಬೂಜ ಜ್ಯೂಸ್​ ಕುಡಿಯೋದರಿಂದ ಆರೋಗ್ಯಕ್ಕೆ ಹತ್ತಾರು ಲಾಭ; ಏನವು?

publive-image

ಕೊಲೆ ಬಳಿಕ ಪತಿ ರಾಕೇಶ್​ಗೆ ಪಶ್ಚಾತ್ತಾಪ

ಪತ್ನಿಯನ್ನು ಕೊಲೆ ಮಾಡಿ ಅದನ್ನು ಸಾಗಿಸಲು ಸೂಟ್​ಕೇಸ್​ಗೆ ತುಂಬಿದ್ದ ರಾಕೇಶ್​ಗೆ ಬಳಿಕ ಪಾಪಪ್ರಜ್ಞೆ ಕಾಡಿದೆ. ರಾತ್ರಿ 12.30 ರ ಸುಮಾರಿಗೆ ಒಬ್ಬನೆ ನಡೆದುಕೊಂಡು ಅಪಾರ್ಟ್ ಮೆಂಟ್ ಬಳಿ ನಿಲ್ಲಿಸಿದ್ದ ತನ್ನ ಕಾರ್ ಜೊತೆ ಎಸ್ಕೇಪ್ ಆಗಿದ್ದಾನೆ. ಇದಕ್ಕೂ ಮುನ್ನ ಪತ್ನಿ ಗೌರಿ ಮನೆಯವರಿಗೂ ಮತ್ತು ತಾವು ಬಾಡಿಗೆ ಇದ್ದ ಕೆಳಗಿನ ಮನೆಯವರಿಗೂ ಕರೆ ಮಾಡಿ ಕೊಲೆ ಮಾಡಿರುವ ವಿಷ್ಯ ತಿಳಿಸಿದ್ದಾನೆ. ಬಳಿಕ ಮಾಲೀಕರು ಮನೆ ಬಳಿ ಬಂದು ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ಇನ್ನು, ಗೌರಿ ಮನೆಯವರೂ ಮುಂಬೈ ಪೊಲೀಸರಿಗೆ ವಿಷ್ಯ ಮುಟ್ಟಿಸಿದ್ದಾರೆ. ಬಳಿಕ ಹುಳಿಮಾವು ಪೊಲೀಸರು ಸ್ಥಳಕ್ಕೆ ಬಂದು, ಮನೆಯ ಬಾಗಿಲು ಓಪನ್​ ಮಾಡಿದಾಗ ಟಾಯ್ಲೆಟ್​ನಲ್ಲಿ ಇದ್ದ ಸೂಟ್​ಕೇಸ್​ನಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ: ಶಾಸಕಾಂಗ ಇಲಾಖೆಯಲ್ಲಿ ಕಚೇರಿ ಸಹಾಯಕರ ಹುದ್ದೆಗಳು ಖಾಲಿ ಖಾಲಿ.. ಕೂಡಲೇ ಅರ್ಜಿ ಸಲ್ಲಿಸಿ

publive-image

ಕೊಲೆ ಮಾಡಿದ ಬಳಿಕ ಎಸ್ಕೇಪ್​ ಆಗಿದ್ದ ಆರೋಪಿ ರಾಕೇಶ್​ನನ್ನು ಸಿಡಿಆರ್​ ಜಾಡು ಹಿಡಿದು ಪುಣೆಯ ಶಿರವಾಲ್​ ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆ, ಗಂಡ ಹೆಂಡ್ತಿ ಅಂದ್ ಮೇಲೆ ನೂರು ವಿಚಾರ ಬರುತ್ತೆ ಹೋಗುತ್ತೆ. ಅಷ್ಟಕ್ಕೆ ಹೆಂಡ್ತಿ ಕೊಲೆ ಮಾಡಿ ಸೂಟ್ ಕೇಸ್​ಗೆ ತುಂಬ್ತಾನಂದ್ರೆ ಟೆಕ್ಕಿ ಅದೆಂಥಾ ಕಟುಕು ಅನ್ನೋದು ಗೊತ್ತಾಗುತ್ತೆ. ಸದ್ಯ ಹುಳಿಮಾವು ಪೊಲೀಸರು ಆರೋಪಿ ರಾಕೇಶ್​ನನ್ನು ಪುಣೆಯಿಂದ ಕರೆ ತರುತ್ತಿದ್ದು, ಕೊಲೆಯ ಹಿಂದಿನ ರಹಸ್ಯವನ್ನು ಪತ್ತೆ ಹಚ್ಚಬೇಕಿದೆ.

ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್​ಗೆ CID ಎಂಟ್ರಿ; ಸಚಿವ ರಾಜಣ್ಣ ಮನೆಯಲ್ಲಿ ತಲಾಷ್, ಹೊಸ ತಿರುವು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment