/newsfirstlive-kannada/media/post_attachments/wp-content/uploads/2025/02/shraddha-walker-father.jpg)
ಶ್ರದ್ಧಾ ವಾಕರ್ ಪೀಸ್, ಪೀಸ್ ಪ್ರಕರಣವನ್ನ ಇಡೀ ದೇಶದ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಪಾಪಿ 35 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಕ್ರೌರ್ಯ ಮರೆದಿದ್ದ. ಶ್ರದ್ಧಾ ವಾಕರ್ ಚಿತಾಭಸ್ಮಕ್ಕಾಗಿ ಹೋರಾಡುತ್ತಿದ್ದ ಆಕೆಯ ತಂದೆ ಇಂದು ಹಠಾತ್ ಸಾವನ್ನಪ್ಪಿದ್ದಾರೆ.
2022ರಲ್ಲಿ ಆಫ್ತಾಬ್ ಪೂನಾವಾಲಾ ಅನ್ನೋ ಹಂತಕ ಶ್ರದ್ಧಾ ವಾಕರ್ ಅನ್ನು ಚಿತ್ರ, ವಿಚಿತ್ರವಾಗಿ ಹತ್ಯೆ ಮಾಡಿದ್ದ. ಶ್ರದ್ಧಾ ವಾಕರ್ ಮೃತದೇಹವನ್ನ 35 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಸಿಕ್ಕಿಬಿದ್ದಿದ್ದ. ಅಂದಿನಿಂದ ಶ್ರದ್ಧಾ ವಾಕರ್ ತಂದೆ ವಿಕಾಸ್ ವಾಕರ್ ತನ್ನ ಮಗಳ ಸಾವಿನ ನ್ಯಾಯಕ್ಕಾಗಿ ಹೋರಾಡುತ್ತಿದ್ದರು.
ಇದನ್ನೂ ಓದಿ: 73 ಬಾರಿ ಚಾಕು ಇರಿತ.. ಖ್ಯಾತ ಉದ್ಯಮಿ ಜನಾರ್ಧನ್ ರಾವ್ ದುರಂತ ಅಂತ್ಯ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಸತತ 2 ವರ್ಷಗಳಿಂದ ಪ್ರಾಣ ಬಿಟ್ಟ ಮಗಳ ಅಂತ್ಯಕ್ರಿಯೆ ಮಾಡದೆ, ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ವಿಕಾಸ್ ವಾಕರ್ ಅವರು ಹಗಲಿರುಳು ಹೋರಾಡುತ್ತಿದ್ದರು. ಆದರೆ ಹೋರಾಟದಲ್ಲಿರುವಾಗಲೇ ವಿಕಾಸ್ ವಾಕರ್ ಅವರು ಇಂದು ಜೀವ ಬಿಟ್ಟಿದ್ದಾರೆ. ಮುಂಬೈನ ವಸೈ ಅಲ್ಲಿ ವಿಕಾಸ್ ವಾಕರ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶ್ರದ್ಧಾ ವಾಕರ್ ತಂದೆ ವಿಕಾಸ್ ವಾಕರ್ ಅವರು ತನ್ನ ಮಗಳ ಅಮಾನುಷ ಹತ್ಯೆಯ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮಗಳ ಅಂತ್ಯಕ್ರಿಯೆ ಮಾಡಲು ಆಗದೆ, ಪಾಪಿ ಹಂತಕನಿಗೆ ಆಗುವ ಕಠಿಣ ಶಿಕ್ಷೆಯನ್ನು ಎದುರು ನೋಡುತ್ತಿದ್ದರು. ಸದ್ಯ ಹಂತಕ ಆಫ್ತಾಬ್ ಪೂನಾವಾಲಾ ಜೈಲಿನಲ್ಲಿದ್ದು, ವಿಚಾರಣೆ ಮುಂದುವರಿದಿದೆ.
2 ವರ್ಷದಿಂದ ಅಂತ್ಯಕ್ರಿಯೆ ಮಾಡಿಲ್ಲ!
ಶ್ರದ್ಧಾ ವಾಕರ್ ಹತ್ಯೆಯಾಗಿ 2 ವರ್ಷ ಕಳೆದರೂ ಅಂತ್ಯಕ್ರಿಯೆ ಮಾಡಿರಲಿಲ್ಲ. ಕಾರಣ ಏನಂದ್ರೆ ತನಿಖೆ ನಡೆಸಿದ ದೆಹಲಿ ಪೊಲೀಸರು ಶ್ರದ್ಧಾ ವಾಕರ್ ಮೂಳೆಗಳು ಹಾಗೂ ಅಸ್ಥಿಯನ್ನು ಮೆಹ್ರೌಲಿ ಅರಣ್ಯದಲ್ಲಿ ಪತ್ತೆ ಹಚ್ಚಿದ್ದರು. ತನಿಖೆಯ ಭಾಗವಾಗಿ ಮಗಳ ಮೂಳೆಗಳು ಪೊಲೀಸರ ವಶದಲ್ಲಿದ್ದು ಶ್ರದ್ಧಾ ವಾಕರ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿರಲಿಲ್ಲ. ಶ್ರದ್ಧಾ ವಾಕರ್ ತಂದೆ ಮಗಳ ಅಂತಿಮ ವಿಧಿವಿಧಾನ ಮಾಡಲು ಚಿತಾಭಸ್ಮಕ್ಕಾಗಿ ಕಾಯುತ್ತಿದ್ದರು. ಮಗಳ ಚಿತಾಭಸ್ಮ ಹಾಗೂ ಸಾವಿಗೆ ನ್ಯಾಯ ಸಿಗುವ ಮೊದಲೇ ವಿಕಾಸ್ ವಾಕರ್ ಕಣ್ಣು ಮುಚ್ಚಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ