/newsfirstlive-kannada/media/post_attachments/wp-content/uploads/2024/11/CP-YOGESHWAR.jpg)
ರಾಮನಗರ: ಚುನಾವಣೆ ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್​​ಗೆ ಸಂಕಷ್ಟ ಶುರುವಾಗಿದೆ.
ನಕಲಿ ಸಹಿ ಹಾಕಿದ್ದಾರೆಂದು ಆರೋಪಿಸಿ ತಂದೆ ವಿರುದ್ಧವೇ ಸಿಪಿ ಯೋಗೇಶ್ವರ್ ಮಗ ಶ್ರವಣ್ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದಾರೆ. ಪುತ್ರನ ದೂರಿನ ಅನ್ವಯ ಕೋರ್ಟ್​ನಲ್ಲಿ ಇಂದು ಸಿಪಿವೈ ವಿರುದ್ಧದ ಅರ್ಜಿ ವಿಚಾರಣೆ ನಡೆಯಲಿದೆ. ಬೆಂಗಳೂರಿನ ಮನೆಗೆ ಸಂಬಂಧಸಿದ ವಿಚಾರ ಇದಾಗಿದ್ದು, ಶ್ರವಣ್ ಸಹಮತ ಇಲ್ಲದೇ, ಅನುಪಸ್ಥಿತಿಯಲ್ಲಿ ಯೋಗೇಶ್ವರ್ ಸಹಿ ಮಾಡಿರುವ ಆರೋಪ ಕೇಳಿ ಬಂದಿದೆ.
/newsfirstlive-kannada/media/post_attachments/wp-content/uploads/2024/10/Cpyogeshwar-Channapatna-By-Election.jpg)
ಆರೋಪದ ಪ್ರಕಾರ, ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದ್ದ ಮನೆಯನ್ನು ನಿಶಾಗೆ ನಾವಿಬ್ಬರು ಗಿಫ್ಟ್ ಮಾಡಿದ್ದೇವು. ಅಮ್ಮ ಮತ್ತು ನಾನು ಯಾವುದೇ ತಕರಾರು ಇಲ್ಲದೇ ಗಿಫ್ಟ್ ನೀಡಿದ್ದೇವು. ಅದಾದ ನಂತರ 2024 ಅಕ್ಟೋಬರ್​ನಲ್ಲಿ ತಂದೆಯ ಪಿಎ ಮೂಲಕ ನನಗೆ ಒಂದು ಡ್ರಾಪ್ಟ್​​ ಬರುತ್ತದೆ. ಅದು ಆ ಮನೆಯ ಭಾಗಕ್ಕೆ ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು. ಅದರಲ್ಲಿ ಆ ಮನೆಯ ಭಾಗ ಕೇಳಿ ನಾನೇ ನನ್ನ ತಾಯಿ ಮತ್ತು ಸಹೋದರಿ ನಿಶಾ ವಿರುದ್ಧ ಕೇಸ್​ ಹಾಕುವುದಕ್ಕೆ ಸಂಬಂಧಿಸಿದ್ದಾಗಿತ್ತು. ನಾನು ಯಾವುದೇ ಗಿಫ್ಟ್ ನೀಡಿಲ್ಲ, ಅದರಲ್ಲಿ ನನಗೆ ಪಾಲು ಬೇಕು ಎಂದು ಬರೆಯಲಾಗಿತ್ತು.
ಇದಕ್ಕೆ ನಾನು ಒಪ್ಪಿರಲಿಲ್ಲ. ಅಲ್ಲದೇ ತಂದೆಗೂ ಕೂಡ ನನ್ನ ಅನುಮತಿ ಇಲ್ಲ ಎಂದು ಹೇಳಿದ್ದೆ. ಆಗ ತಂದೆ ಯೋಗೇಶ್ವರ್​ ನಾನು ನೋಡಿಕೊಳ್ತೇನೆ ಬಿಡು ಎಂದಿದ್ದರು. ಇದೀಗ ನನ್ನ ತಂದೆಯವರೇ ಆ ಡ್ರಾಪ್ಟ್​ಗೆ ಸಹಿ ಮಾಡಿ ನಾನು ಪಾಲು ಕೇಳುವಂತೆ ಕೇಸ್​ ದಾಖಲಿಸಿದ್ದಾರೆ. ಅಂದರೆ ನನ್ನ ಹೆಸರಿನಲ್ಲಿ ಅಮ್ಮ ಮತ್ತು ಸಹೋದರಿ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಇದರ ವಿರುದ್ಧ ನಾನು ಕೋರ್ಟ್ ಮೊರೆ ಹೋಗಿದ್ದೇನೆ. ನಾನು ಯಾವುದೇ ಸಹಿ ಮಾಡಿಲ್ಲ. ಮನೆಯಲ್ಲಿ ಭಾಗವನ್ನೂ ಕೇಳಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:ಹೋಟೆಲ್​ನಲ್ಲಿ ಹಣ ಹಂಚುವಾಗ ಸಿಕ್ಕಿಬಿದ್ದ BJP ನಾಯಕರು.. ಪ್ರತಿಪಕ್ಷಗಳ ಆರೋಪ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us