/newsfirstlive-kannada/media/post_attachments/wp-content/uploads/2024/08/SHRAVANI_SUBBU.jpg)
ಕಿರುತೆರೆ ಪ್ರಿಯರು ಈಗ ಹೆಚ್ಚು ಕನೆಕ್ಟ್​ ಆಗಿರೋದು ಶ್ರಾವಣಿ ಸುಬ್ರಮಣ್ಯ ಧಾರಾವಾಹಿಗೆ. ಸುಬ್ಬು ಶ್ರಾವಣಿ ಅಭಿನಯ ಕಾಲೇಜ್​ಗೆ ಹೋಗೋ ಹುಡುಗಿರಿಂದ ಹಿಡಿದು ಹಿರಿಯರು, ಅಷ್ಟೇ ಯಾಕೆ ಹುಡುಗರು ಕೂತು ನೋಡುವಂತೆ ಮಾಡಿದೆ. ಇಬ್ಬರ ಕೋಳಿ ಜಗಳ, ಕಾಳಜಿ, ಹುಸಿ ಮುನಿಸು ವೀಕ್ಷಕರಿಗೆ ಕಚಗುಳಿ ಇಡ್ತಿರೋದಂತು ಸತ್ಯ.
ನಿಮಗೆಲ್ಲಾ ಗೊತ್ತಿರೋ ಹಾಗೆ, ಶ್ರಾವಣಿ ಹೊಸ ಸಾಹಸಕ್ಕೆ ಕೈಹಾಕಿದ್ದಾಳೆ. ಫಾರ್ಮ್​ ಹೌಸ್​ ಹೆಸರು ಕೇಳಿದರೆ ಬೆಚ್ಚಿಬೀಳೋ ವಿಜಯಾಂಬಿಕಾ ರಹಸ್ಯವನ್ನ ಶ್ರಾವಣಿ ಬೆನ್ನಟ್ಟಿದ್ದಾಳೆ. ಇದಕ್ಕೆ ಸುಬ್ಬು ಸಾಥ್​ ಕೊಡ್ತಿದ್ದಾನೆ.
ಇಬ್ಬರೂ ಫಾರ್ಮ್​ ಹೌಸ್​ ರಹಸ್ಯ ಭೇದಿಸುತ್ತಿರುವಾಗ ವಿಜಯಾಂಬಿಕಾ ಕಣ್ಣಿಗೆ ಬಿದ್ದಿದ್ದಾರೆ. ಇವ್ರು ಯಾರು ಅಂತ ಇನ್ನು ಗೊತ್ತಾಗಿಲ್ಲ. ರೌಡಿಗಳಿಂದ ತಪ್ಪಿಸಿಕೊಂಡು ಇಬ್ಬರೂ ಗೆಸ್ಟ್​ ಹೌಸ್​ಗೆ ಬಂದಿದ್ದಾರೆ. ಅಲ್ಲಿ ನಾವಿಬ್ಬರೂ ಮದುವೆ ಆಗಿದ್ದೀವಿ ಅಂತಾ ಹೇಳಿರೋ ಶ್ರಾವಣಿ, ನಾಗರಹಾವು ಹಾಗೂ ಮುಂಗಾರು ಮಳೆ ಸಿನಿಮಾ ಸ್ಟೋರಿನ ಲವ್​ ಸ್ಟೋರಿ ಅಂತೆ ಬಿಂಬಿಸಿದ್ದಾರೆ. ಈ ಸೀನ್​ಗಳಂತೂ ಸಿಕ್ಕಾಪಟ್ಟೆ ಮಜವಾಗಿದ್ದು, ಮತ್ತಷ್ಟು ಕ್ಯೂಟ್​ ದೃಶ್ಯಗಳು ಬರಲಿ ಅಂತಿದ್ದಾರೆ ಫ್ಯಾನ್ಸ್​.
ಅಂದ್ಹಾಗೆ, ಶ್ರಾವಣಿ ಸುಬ್ರಮಣ್ಯ ಇವತ್ತಿಗೆ ಯಶಸ್ವಿ 100 ಸಂಚಿಕೆಗಳನ್ನ ಪೊರೈಸಿದ್ದು, ಟಿಆರ್​ಪಿನಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಇದೇ ಖುಷಿಯಲ್ಲಿ ಶೂಟಿಂಗ್​ನಲ್ಲಿ ಒಂದಿಷ್ಟು ಫನ್ನಿ ಕ್ಷಣಗಳು ಕೂಡ ನಡೆದಿವೆ. ಶ್ರಾವಣಿ ಬದುಕಿನ ರೋಚಕ ಸತ್ಯಗಳು ಹೊರಬರಲಿದ್ದು, ಶ್ರಾವಣಿ ಸುಬ್ರಮಣ್ಯ ಮತ್ತಷ್ಟು ಇಂಟ್ರಸ್ಟಿಂಗ್​ ಸ್ಟೋರಿ ಹೊತ್ತು ತರಲಿದೆ. ಬಟ್​​ ನೀವು ಸುಬ್ಬು- ಶ್ರಾವಣಿ ಲವ್​ ಸ್ಟೋರಿಗೆ ಕಾಯ್ತಾಯಿದ್ದೀರಾ ಅಂತ ಗೊತ್ತು. ಮುಂದಿನ ದಿನಗಳಲ್ಲಿ ಈ ಮುದ್ದು ಜೋಡಿ ಹೆಚ್ಚಿನ ಮನರಂಜನೆ ಹೊತ್ತು ತರುವುದಂತು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ