‘ನಾನು ಅಮ್ಮ ಆ ಸೀನ್​ ನೋಡಿ ಅಳ್ತಾನೇ ಇದ್ವಿ’.. ಶ್ರಾವಣಿ ತಾಯಿ ಕಣ್ಣಲ್ಲಿ ನೀರು ತರಿಸಿದ್ದೇನು?

author-image
Veena Gangani
Updated On
‘ನಾನು ಅಮ್ಮ ಆ ಸೀನ್​ ನೋಡಿ ಅಳ್ತಾನೇ ಇದ್ವಿ’.. ಶ್ರಾವಣಿ ತಾಯಿ ಕಣ್ಣಲ್ಲಿ ನೀರು ತರಿಸಿದ್ದೇನು?
Advertisment
  • ಶ್ರಾವಣಿ ಸುಬ್ಬು ಮುದ್ದಾದ ಜೋಡಿಗೆ ವೀಕ್ಷಕರು ಫುಲ್ ಫಿದಾ
  • ಸೀರಿಯಲ್ ಪ್ರಿಯರಿಗೆ ಬಲು ಸಖತ್​ ಇಷ್ಟ ಶ್ರಾವಣಿ ಸುಬ್ರಮಣ್ಯ
  • ಅಮ್ಮನ ಜೊತೆಗೆ ಕುಳಿತುಕೊಂಡು ಶ್ರಾವಣಿ ಅತ್ತಿದ್ದು ಏಕೆ?

ಸೀರಿಯಲ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡ್ತಿದೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್​. ಟಿಆರ್​ಪಿ ಲಿಸ್ಟ್​ನಲ್ಲೂ ಉತ್ತಮ ಸ್ಥಾನ ಕಾಯ್ದು ಕೊಂಡು ಬಂದಿದೆ. ಶ್ರಾವಣಿ ಸುಬ್ಬು ಮುದ್ದಾದ ಜೋಡಿಗೆ ವೀಕ್ಷಕರು ಕೂಡ ಫಿದಾ ಆಗಿದ್ದಾರೆ.

ಇದನ್ನೂ ಓದಿ:ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ನಿಶ್ಚಿತಾರ್ಥ.. ಸ್ನೇಹಾಗೆ ಸಾಹೇಬ್ರ ಮೇಲಿರೋ ಪ್ರೀತಿಗೆ ಟ್ವಿಸ್ಟ್

publive-image

ಆದ್ರೆ ಸೀರಿಯಲ್​ನಲ್ಲಿ ನಟಿಸೋ ಕಲಾವಿದರಿಗೂ ಕೆಲವೊಂದು ಸೀನ್​ಗಳು ಕಣ್ಣಲ್ಲಿ ನೀರು ತರಿಸಿ ಬಿಡುತ್ತದೆ. ಅದರಂತೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್​ನಲ್ಲಿ ಶ್ರಾವಣಿ ಪಾತ್ರದಲ್ಲಿ ನಟಿಸುತ್ತಿರೋ ನಟಿ ಆಸಿಯಾ ಫಿರ್ದೋಸ್ ತಾವು ನಟಿಸಿದ್ದ ಒಂದು ಸೀನ್​ ನೋಡಿ ಅತ್ತಿದ್ದರಂತೆ. ಅಷ್ಟೇ ಅಲ್ಲದೇ ಆಸಿಯಾ ಫಿರ್ದೋಸ್ ಅವರ ತಾಯಿ ಕೂಡ ಕಣ್ಣೀರು ಹಾಕಿದ್ದರಂತೆ.

ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಆಸಿಯಾ ಫಿರ್ದೋಸ್ ಅವರು, ಈ ಸೀರಿಯಲ್​ನಲ್ಲಿ ಅಮ್ಮನ ಫೋಟೋ ನೋಡಿ ಒಂದು ಸೀನ್​ ಮಾಡೋದಿತ್ತು. ಆ ಸೀನ್​ ಕೂಡ ತುಂಬಾ ಎಮೋಷನಲ್ ಆಗಿತ್ತು. ಆ ಸೀನ್​ ಅನ್ನು ಒಂದೇ ಟೇಕ್​ನಲ್ಲಿ ಮಾಡಬೇಕಿತ್ತು. ಆ ಸೀನ್ ತುಂಬಾ ಚೆನ್ನಾಗಿ ಬಂದಿದೆ ಅಂತ ಅಮ್ಮ ಹೇಳಿದ್ರು. ಆಗ ನಾನು ಮತ್ತು ಅಮ್ಮ ಇಬ್ಬರು ಕುಳಿತುಕೊಂಡು ಆ ಸೀನ್​ ನೋಡಿದ್ದೇವೆ. ಅದೇ ವೇಳೆ ನಾವಿಬ್ಬರು ಮಾತೇ ಆಡಿಲ್ಲ, ಸುಮ್ನೆ ಅಳುತ್ತಾ ಇದ್ವಿ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment