/newsfirstlive-kannada/media/post_attachments/wp-content/uploads/2025/04/kantamma4.jpg)
ಸೀರಿಯಲ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡ್ತಿದೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್. ಟಿಆರ್ಪಿ ಲಿಸ್ಟ್ನಲ್ಲೂ ಮೊದಲ ದಿನದಿಂದ ಉತ್ತಮ ಸ್ಥಾನ ಕಾಯ್ದುಕೊಂಡು ಬಂದಿದೆ. ಶ್ರಾವಣಿ ಸುಬ್ಬು ಮುದ್ದಾದ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ಒಬ್ಬರಲ್ಲ, ಇಬ್ಬರು ಉಗ್ರರ ಮನೆ ಉಡೀಸ್.. ಸ್ಫೋಟ ಮಾಡಿ ಧ್ವಂಸಗೊಳಿಸಿದ ಕ್ಷಣ ಹೇಗಿದೆ..? Video
ಅಷ್ಟೇ ಅಲ್ಲದೇ ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಒಂದೊಂದು ಪಾತ್ರವು ವೀಕ್ಷಕರಿಗೆ ಇಷ್ಟ. ಅದರಲ್ಲೂ ಸುಬ್ರಹ್ಮಣ್ಯನ ಅತ್ತೆ ಕಾಂತಮ್ಮನ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಕೂಡ ಒಂದು. ಶ್ರಾವಣಿ, ಸುಬ್ಬು ಸೇರಿದಂತೆ ಎಲ್ಲ ಕಲಾವಿದರು ಬಹಳ ಚೆನ್ನಾಗಿ ಅಭಿನಯಿಸುತ್ತಿದ್ದಾರೆ.
ಆದ್ರೆ ವೀಕ್ಷಕರು ಅತೀ ಹೆಚ್ಚಾಗಿ ಇಷ್ಟ ಪಡುವ ಮತ್ತೊಂದು ಪಾತ್ರ ಎಂದರೆ ಅದು ಕಾಂತಮ್ಮನ ಪಾತ್ರ. ಇತ್ತೀಚಿನ ದಿನಗಳಲ್ಲಂತೂ ಕಾಂತಮ್ಮನನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದಾರೆ. ಕಾಂತಮ್ಮನ ನಟನೆ, ಡೈಲಾಗ್, ಅವರು ನಡೆದುಕೊಳ್ಳುವ ರೀತಿ ಎಲ್ಲವೂ ಜನರಿಗೆ ತುಂಬಾನೆ ಇಷ್ಟವಾಗಿದ್ದು, ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ.
View this post on Instagram
ಇದೀಗ ಕಾಂತಮ್ಮ ಹೊಸ ಅವತಾರದಲ್ಲಿ ಕಾಣಿಸಿಕೊಂಡು ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ. ಸುಬ್ಬುವಿನ ಅಕ್ಕನ ಗಂಡ ಅಂದ್ರೆ ಕಾಂತಮ್ಮ ಮಗ ಸುಂದರ ಕೂಡ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋವನ್ನು ಜೀ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇದೇ ವಿಡಿಯೋದಲ್ಲಿ ಸುಂದರ ಹಾಗೂ ಕಾಂತಮ್ಮ ಏನೋ ಹೊಸ ಪ್ಲಾನ್ ಮಾಡಿಕೊಂಡು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ಪ್ಲಾನ್ ಏನು ಅಂತ ಮುಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.
ಕಾಂತಮ್ಮತ್ತೆ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿರೋದು ನಟಿ ಭವಾನಿ ಪ್ರಕಾಶ್. ಇವರು ಈಗಾಗಲೇ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ವಿಲನ್ ಪಾತ್ರಕ್ಕೆ ಜೀವ ತುಂಬಿದವರು. ಇದೀಗ ಮೊದಲ ಬಾರಿಗೆ ಕಾಮಿಡಿ ಪಾತ್ರ ಮಾಡುತ್ತಿದ್ದಾರೆ. ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ