ನಾಳೆಯಿಂದ ವಿಶ್ವಮಂಗಳ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕುಂಭಾಭಿಷೇಕ; ಇದರ ವಿಶೇಷತೆಯೇನು?

author-image
Ganesh Nachikethu
Updated On
ನಾಳೆಯಿಂದ ವಿಶ್ವಮಂಗಳ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕುಂಭಾಭಿಷೇಕ; ಇದರ ವಿಶೇಷತೆಯೇನು?
Advertisment
  • ದೇಶದ ಪ್ರಖ್ಯಾತ ಶ್ರೀ ವಿಶ್ವಮಂಗಳ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ
  • ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿರೋ ದೇವಾಲಯ
  • ಜಗತ್ತಿನ ಅತೀ ಪವಿತ್ರ ಸ್ಥಳಗಳಲ್ಲಿ ಒಂದಾದ ಖ್ಯಾತಿ ಈ ಪುಣ್ಯ ಕ್ಷೇತ್ರಕ್ಕಿದೆ!

ಮಂಡ್ಯ: ಕಾವೇರಿ ನದಿ ದ್ವೀಪ ಎಂದೇ ಕರೆಯಲಾಗುವ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿರೋ ಶ್ರೀ ವಿಶ್ವಮಂಗಳ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ದೇಶದ ಅತ್ಯಂತ ಪೂಜ್ಯನೀಯ ಪ್ರದೇಶ. ಜಗತ್ತಿನ ಅತೀ ಪವಿತ್ರ ಸ್ಥಳಗಳಲ್ಲಿ ಒಂದಾದ ಖ್ಯಾತಿ ಈ ಕ್ಷೇತ್ರಕ್ಕಿದೆ. ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ. 2024 ಸೆಪ್ಟೆಂಬರ್​​ 8ನೇ ತಾರೀಕು ಎಂದರೆ ಇದೇ ಭಾನುವಾರದಂದು ಬೆಳಗ್ಗೆ 7.45 ರಿಂದ 8.30 ರವರೆಗೂ ಶ್ರೀ ವಿಶ್ವಮಂಗಳ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಕುಂಭಾಭಿಷೇಕ ಜರುಗಲಿದೆ.

ನಿರಂತರ 12 ವರ್ಷಗಳ ಕಾಲ ಅಂದರೆ 13/05/2022 ರಿಂದ 01/ 05/2034 ರ ವರೆಗೂ ದೀರ್ಘಸತ್ರ ಮಹಾಯಾಗವು 4372 ದಿನಗಳು ನರಸಿಂಹನ ಕೃಪಾಕಟಾಕ್ಷದಿಂದ ನಡೆಯುತ್ತಿದೆ. ಇಂತಹ ಸುದೀರ್ಘ ಯಾಗ ನಡೆಯುತ್ತಿರುವ ದೇಶದ ಏಕ ಮಾತ್ರ ಸುಕ್ಷೇತ್ರ ಇದಾಗಿದೆ.

ಇದೇ ಪುಣ್ಯ ಕ್ಷೇತ್ರದಲ್ಲಿ ಭಾನುವಾರ ಅಂದ್ರೆ ಸೆಪ್ಟೆಂಬರ್​ 8 ನೇ ತಾರೀಕು ಸಂಜೆ 4 ರಿಂದ 7 ರವರೆಗೆ ಕುಂಭಾಭಿಷೇಕದ ಜೊತೆಗೆ ಭಾನುವಾರ 7.45 ರಿಂದ 8.30 ರವರೆಗೂ ಮಹಾಸಂಪ್ರೋಕ್ಷಣೆ ಇರಲಿದೆ.

publive-image

ದೇವಾಲಯದ ವಿಶಿಷ್ಟತೆಗಳೇನು..?

32 ಅಕ್ಷರಗಳಿಂದ ಕೂಡಿದ ನರಸಿಂಹ ಮಹಾಮಂತ್ರದಿಂದ ಆಗಮರೀತ್ಯ ಯಂತ್ರ, ಮಂತ್ರಶಕ್ತಿಯಿಂದ ಅಭಿಮಂತ್ರಿತಗೊಂಡು ಅನುಷ್ಟುಪ್ ಮಂತ್ರವನ್ನು ಪ್ರತಿನಿಧಿಸುವ ಸುಂದರವಾದ 32 ಶಿಲಾಕಂಭಗಳಿಂದ ಕೂಡಿದ ಮಹಾಮಂಟಪವು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.

32 ಶಿಲಾಕಂಭಗಳಲ್ಲಿ ಶ್ರೀ ನರಸಿಂಹ ಸ್ವಾಮಿಯ ನಾನಾ ಶ್ಲೋಕಗಳಲ್ಲಿ ವರ್ಣಿಸಿದಂತೆ ವಿವಿಧ ಭಂಗಿಯ 50 ಪಂಚಲೋಹದ ವಿಗ್ರಹಗಳು ಹಾಗೂ 24 ಶಿಲಾವಿಗ್ರಹಗಳು ಒಟ್ಟು 74 ನರಸಿಂಹ ಮೂರ್ತಿಯ ಸುಂದರವಾದ ವಿಗ್ರಹಗಳು ಮಹಾಮಂಟಪವನ್ನು ಅತೀ ವೈಶಿಷ್ಟ್ಯ ಪೂರ್ಣವಾಗಿಸಿದೆ.

ಶ್ರೀ ನರಸಿಂಹ ಹಾಗೂ ಶ್ರೀ ಸುದರ್ಶನ ದೇವರ ಬೃಹದಾಕಾರದ ಲೋಹದ ವಿಗ್ರಹಗಳು, ಶ್ರೀ ಮಹಾವಿಷ್ಣುವಿನ 7 ಬೃಹದಾಕಾರದ ವಿವಿಧ ಅವತಾರಗಳ ಶಿಲಾವಿಗ್ರಹಗಳನ್ನು ಮಹಾಮಂಟಪವು ಒಳಗೊಂಡಿದೆ.

ಭಾರತ ದೇಶದಲ್ಲೇ ಅನನ್ಯವೂ ಅನುಪಮವೂ ಎಂಬಂತೆ ದೇವಾಲಯದ ಆವರಣದ ಕೋಷ್ಟಗಳಲ್ಲಿ ಆಕರ್ಷಣೀಯವಾದ ನಾನಾ ಬಣ್ಣಗಳಿಂದ ಆವೃತವಾದ ದೇಶದ ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಮಹಾವಿಷ್ಣುವಿನ 381 ವಿಧದ ಸಿಮೆಂಟ್​​ ವಿಗ್ರಹಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಶ್ರೀರಾಮಪಟ್ಟಾಭಿಷೇಕ ಹಾಗೂ ಅಷ್ಟಮಹಿಷಿಯರೊಂದಿಗೆ ಶ್ರೀಕೃಷ್ಣನ ಶಿಲಾವಿಗ್ರಹಗಳನ್ನು ನಿರ್ಮಿಸಲಾಗಿದೆ. ಶ್ರೀ ರಾಮಾನುಜಾಚಾರ್ಯರು ಪ್ರಚುರಪಡಿಸಿದ ಶ್ರೀವೈಷ್ಣವ ಗುರುಪರಂಪರೆಯನ್ನು ಪ್ರದರ್ಶಿಸಲಾಗಿದೆ. ಈ ಕ್ಷೇತ್ರದಲ್ಲಿ ಸರಿ ಸುಮಾರು 2000ಕ್ಕಿಂತಲೂ ಅಧಿಕ ಯಾಗದಿಗಳನ್ನು ನೆರವೇರಿಸಲಾಗಿದೆ.

publive-image

ಉತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಈ ಕ್ಷೇತ್ರದಲ್ಲಿ ಮುಂದಿನ ಶನಿವಾರ 14ನೇ ತಾರೀಕು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ಉತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಸನಾತನಧರ್ಮ ಮತ್ತು ಭಾರತ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಪುನರುಜ್ಜಿವನಗೊಳಿಸುವ ಮತ್ತು ಮರುಸ್ಥಾಪಿಸುವಲ್ಲಿ ಮಹತ್ತರ ಕೊಡುಗೆ ನೀಡಿದ ವಿಶಿಷ್ಟ ವ್ಯಕ್ತಿಗಳನ್ನು ಗೌರವಿಸಲಾಗುತ್ತದೆ.

ಸೆಪ್ಟೆಂಬರ್​ 8ರಂದು ನಡೆಯುವ ಕುಂಭಾಭಿಷೇಕ ಹಾಗೂ ಸೆಪ್ಟೆಂಬರ್​ 14 ರಂದು ನಡೆಯುವ ವಿಶೇಷ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಭಕ್ತರು ಲಕ್ಷ್ಮೀ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಕೋರಿಕೊಳ್ಳುತ್ತಿದೆ.

ಇದನ್ನೂ ಓದಿ:ಬರೋಬ್ಬರಿ 500 ಕೆಜಿ ತೂಕ.. ಗಣೇಶನಿಗಾಗಿ ಸ್ಪೆಷಲ್‌ ಲಾಡು ತಯಾರಿಸಿದ ಈ ಅಂಗಡಿ ಇತಿಹಾಸವೇ ರೋಚಕ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment