newsfirstkannada.com

ಎಲ್ಲೆಲ್ಲೂ ದಿಯಾ ಹೆಗ್ಡೆಯದ್ದೇ ಹವಾ.. ಈಕೆ ಗಾಯನಕ್ಕೆ ಸ್ಟಾರ್​​ ಸಿಂಗರ್‌ಗಳು ಕ್ಲೀನ್ ಬೋಲ್ಡ್‌; ಏನಂದ್ರು?

Share :

Published May 10, 2024 at 4:14pm

    ಸೂಪರ್ ಸ್ಟಾರ್ ಸಿಂಗರ್ 3 ರಿಯಾಲಿಟಿ ಶೋನಲ್ಲಿ ದಿಯಾ ಹೆಗ್ಡೆ ಸಿಂಗಿಂಗ್

    ದಿಯಾ ಗಾಯನವನ್ನು ಮನಸಾರೆ ಮೆಚ್ಚಿಕೊಂಡ ಸಿಂಗರ್​ ಶ್ರೇಯಾ ಘೋಷಾಲ್

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ ದಿಯಾ ಹಿಂದಿ ಹಾಡು

ಸರಿಗಮಪ ಸೀಸನ್​ 19ರ ಪೋರಿ ದಿಯಾ ಹೆಗ್ಡೆ ಪ್ರತಿಭೆಗೆ ತಲೆದೂಗದವರೇ ಇಲ್ಲ. ಈ ಪುಟಾಣಿ ಹಾಡು, ಡ್ಯಾನ್ಸ್​​ ಪ್ರೆಸೆಂಟ್​ ಮಾಡೋ ರೀತಿ ನಿಜಕ್ಕೂ ಅದ್ಭುತ. ಮುಗ್ಧ ನಗುವಿನ ದಿಯಾ ಹೆಗ್ಡೆ ಮೋಡಿಗೆ ವೀಕ್ಷಕರು ಫಿದಾ ಆಗಿದ್ರು. ದಿಯಾಗೆ ಹಿರಿಯರು-ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗ ಇದೆ. ತನ್ನ ಪ್ರತಿಭೆ ಮೂಲಕ ಮನರಂಜನೆ ನೀಡುತ್ತಿದ್ದಾಳೆ ಈ ಪೋರಿ ದಿಯಾ.

ಇದನ್ನೂ ಓದಿ: ಗೋವಾ ಬೀಚ್​ನಲ್ಲಿ ಬಿಗ್​ಬಾಸ್​ ಬೆಡಗಿ; ನಮ್ರತಾ ಗೌಡ ಹಾಟ್​ ಫೋಟೋ ನೋಡಿ ಫ್ಯಾನ್ಸ್​​​ ಗಪ್​ಚುಪ್​

ಸದ್ಯ ದಿಯಾ ಹೆಗ್ಡೆ ಜನಪ್ರಿಯ ಹಿಂದಿಯ ‘ಇಂಡಿಯನ್ ಐಡಲ್ 14 ಗ್ರ್ಯಾಂಡ್ ಫಿನಾಲೆ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಸೋನಿ ಟಿವಿಯ ‘ಸೂಪರ್ ಸ್ಟಾರ್ ಸಿಂಗರ್ 3’ ರಿಯಾಲಿಟಿ ಶೋನಲ್ಲಿಯೂ ದಿಯಾ ಹೆಗ್ಡೆ ಕಂಟೆಸ್ಟೆಂಟ್​ ಆಗಿದ್ದಾರೆ. ಕಳೆದ ಮಾರ್ಚ್ 9ರಿಂದ ಸೂಪರ್ ಸ್ಟಾರ್ ಸಿಂಗರ್ 3 ಶೋ ಪ್ರಸಾರ ಆಗಿತ್ತು. ‘ಇಂಡಿಯನ್ ಐಡಲ್’ ಶೋನಲ್ಲಿ ವಿಶಾಲ್ ದದ್ಲಾನಿ, ಕುಮಾರ್ ಸಾನು, ಶ್ರೇಯಾ ಘೋಷಾಲ್ ಅವರು ಜಡ್ಜ್ ಆಗಿದ್ದಾರೆ.

ಇನ್ನು, ದಿಯಾ ಗಾಯನವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ ಸ್ಟಾರ್​ ಸಿಂಗರ್​ ಶ್ರೇಯಾ ಘೋಷಾಲ್. ಜೀ ಕನ್ನಡ ಸರಿಗಮಪ ಸೀಸನ್ 10ರ ಫೈನಲಿಸ್ಟ್ ಆಗಿದ್ದ ದಿಯಾ ಹೆಗ್ಡೆ ವಿಭಿನ್ನವಾದ ಹಾಡು, ಡ್ಯಾನ್ಸ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದರು. ರಕ್ಷಿತಾ ಪ್ರೇಮ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಂಸಲೇಖ ಕೂಡ ಈ ಪೋರಿಯ ಹಾಡು ಕೇಳಿ ಚಪ್ಪಾಳೆ ತಟ್ಟಿ ಭೇಷ್ ಎಂದಿದ್ದರು. ಇದೀಗ ಹಿಂದಿಯ ಸೂಪರ್ ಸ್ಟಾರ್ ಸಿಂಗರ್ 3 ಭಾಗಿಯಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಸದ್ಯ ದಿಯಾ ಹೆಗ್ಡೆ ಹಿಂದಿ ಹಾಡನ್ನು ಹಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ. ದಿಯಾ ಹಿಂದಿಯಲ್ಲಿ ಹಾಡಿದ ಹಾಡುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲೆಲ್ಲೂ ದಿಯಾ ಹೆಗ್ಡೆಯದ್ದೇ ಹವಾ.. ಈಕೆ ಗಾಯನಕ್ಕೆ ಸ್ಟಾರ್​​ ಸಿಂಗರ್‌ಗಳು ಕ್ಲೀನ್ ಬೋಲ್ಡ್‌; ಏನಂದ್ರು?

https://newsfirstlive.com/wp-content/uploads/2024/05/diya-hegde1.jpg

Load More