ಟೀಮ್ ಇಂಡಿಯಾದ ಈ ಟೂರ್ನಿಯಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್.. ಕಾರಣವೇನು?

author-image
Bheemappa
Updated On
ಟೀಮ್ ಇಂಡಿಯಾದ ಈ ಟೂರ್ನಿಯಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್.. ಕಾರಣವೇನು?
Advertisment
  • ಮಹತ್ವದ ಟೂರ್ನಿಯಿಂದ ಹೊರಗುಳಿದ ಶ್ರೇಯಾಂಕ ಪಾಟೀಲ್
  • ಕನ್ನಡತಿ ಶ್ರೇಯಾಂಕ ಪಾಟೀಲ್ ಅವರು ಹೊರಗುಳಿದಿದ್ದು ಯಾಕೆ?
  • ಶ್ರೇಯಾಂಕ ಜೊತೆಗೆ ಲೆಗ್ ಸ್ಪಿನ್ನರ್ ಪ್ರಿಯಾ ಮಿಶ್ರಾ ಕೂಡ ಹೊರಕ್ಕೆ

ಭಾರತ-ಎ ತಂಡದ ಆಸ್ಟ್ರೇಲಿಯಾ ಪ್ರವಾಸದಿಂದ ಕನ್ನಡತಿ ಶ್ರೇಯಾಂಕ ಪಾಟೀಲ್​ ಹೊರ ಬಿದ್ದಿದ್ದಾರೆ. ಇಂಜುರಿಯಿಂದ ಸಂಪೂರ್ಣ ಫಿಟ್​ ಆಗದ ಹಿನ್ನಲೆಯಲ್ಲಿ ಶ್ರೇಯಾಂಕ ಪಾಟೀಲ್ ಆಸಿಸ್​ ಟೂರ್ನಿಯಿಂದ ಹೊರಗುಳಿದಿದ್ದಾರೆ.​ ಹೀಗಾಗಿ ಯುವ ಆಟಗಾರ್ತಿ ಬೆಂಗಳೂರಿನ ಎನ್​ಸಿಎನ ಬಿಸಿಸಿಐ ಮೆಡಿಕಲ್​ ಟೀಮ್​ನ ನಿಗಾದಲ್ಲಿ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಟೀಮ್ ಇಂಡಿಯಾದ ಕೀಪರ್ ಕಮ್ ಬ್ಯಾಟರ್ ಆಗಿ ಯಸ್ತಿಕಾ ಭಾಟಿಯಾ ಅವರನ್ನು ಸದ್ಯಕ್ಕೆ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಧಾರಾ ಗುಜ್ಜರ್ ಹಾಗೂ ಪ್ರೇಮಾ ರಾವತ್ ಅವರನ್ನು ಸ್ಪಿನ್ ಬೌಲಿಂಗ್​ಗೆ ಬದಲಿ ಆಟಗಾರರನ್ನಾಗಿ ಆಯ್ಕೆ ಸಮಿತಿಯೂ ತಂಡಕ್ಕೆ ಆಯ್ಕೆ ಮಾಡಿದೆ.

ಇದನ್ನೂ ಓದಿ:ರಿಷಭ್ ಪಂತ್ ಸ್ಥಾನವನ್ನೇ ನಿರಾಕರಿಸಿದ ಇಶನ್ ಕಿಶನ್​.. ಇಂಗ್ಲೆಂಡ್​ಗೆ ಹೋಗಲ್ಲವೆಂದ ಯಂಗ್ ವಿಕೆಟ್​ ಕೀಪರ್!

publive-image

ತಂಡದಲ್ಲಿ ಸ್ಪಿನ್ನರ್ ಆಗಿರುವ ಶ್ರೇಯಾಂಕ ಪಾಟೀಲ್ ದೀರ್ಘಕಾಲದ ಗಾಯದಿಂದ ಬಳಲುತ್ತಿದ್ದರಿಂದ ಅವರು ಮಹಿಳಾ ತಂಡ-ಎ ಗೆ ಮರಳುವುದು ಮತ್ತಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಶ್ರೇಯಾಂಕ ಪಾಟೀಲ್ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ-ಎ ಸರಣಿಯಿಂದ ಹೊರಗುಳಿಯಲಿದ್ದಾರೆ.

ಶ್ರೇಯಾಂಕ ಜೊತೆಗೆ ಲೆಗ್ ಸ್ಪಿನ್ನರ್ ಆದ ಪ್ರಿಯಾ ಮಿಶ್ರಾರನ್ನು ಹೊರಗಿಡಲಾಗಿದೆ. ಈ ಸರಣಿಗೆ ಸಂಬಂಧಿಸಿದಂತೆ, ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಆಗಸ್ಟ್ 7 ರಿಂದ ಆಗಸ್ಟ್ 24 ರವರೆಗೆ ಮೂರು T20, ಮೂರು ಏಕದಿನ ಮತ್ತು ಒಂದು ನಾಲ್ಕು ದಿನಗಳ ಪಂದ್ಯವನ್ನು ಆಡಲಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment