RCB ಫ್ಯಾನ್ಸ್​ ಕುತೂಹಲಕ್ಕೆ ಒಂದೇ ಉತ್ತರ.. Heartbroken ಎಂದ ಶ್ರೇಯಾಂಕ ಪಾಟೀಲ್..!

author-image
Bheemappa
Updated On
RCB ಫ್ಯಾನ್ಸ್​ ಕುತೂಹಲಕ್ಕೆ ಒಂದೇ ಉತ್ತರ.. Heartbroken ಎಂದ ಶ್ರೇಯಾಂಕ ಪಾಟೀಲ್..!
Advertisment
  • ಕನ್ನಡತಿ ಇಲ್ಲದೇ ನಡೆದ ಡಬ್ಲುಪಿಎಲ್​ನ ಆರಂಭಿಕ ಪಂದ್ಯ
  • ಆರ್​ಸಿಬಿಯಿಂದ ಹೊರಗುಳಿದಿದ್ದಕ್ಕೆ ಶ್ರೇಯಾಂಕ ಬೇಸರ
  • ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿದ ಎಲ್ಲಿಸ್ ಪೆರ್ರಿ, ರಿಚಾ

ಡಬ್ಲುಪಿಎಲ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಗುಜರಾತ್​ ವಿರುದ್ಧ ರೋಚಕ ಗೆಲುವು ಪಡೆದಿದೆ. ಇಡೀ ಮಹಿಳಾ ಐಪಿಎಲ್​ನಲ್ಲೇ ಅತ್ಯಧಿಕ ರನ್​ ಚೇಸ್ ಮಾಡುವ ಮೂಲಕ ಆರ್​ಸಿಬಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆದರೆ ಇಂತಹ ಮನಮೋಹಕ ತಂಡದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಏಕೆ ಇರಲಿಲ್ಲ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಇದರ ಬೆನ್ನಲ್ಲೇ ಶ್ರೇಯಾಂಕ ಇನ್​ಸ್ಟಾದಲ್ಲಿ ಪೋಸ್ಟ್​ವೊಂದನ್ನ ಶೇರ್ ಮಾಡಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಸದ್ಯ ಶ್ರೇಯಾಂಕ ಪಾಟೀಲ್ ಹೊರಗುಳಿದಿದ್ದಾರೆ. ಅತ್ಯುತ್ತಮ ಸ್ಪಿನ್ ಬೌಲಿಂಗ್ ಮಾಡುವ ಶ್ರೇಯಾಂಕ, ವಿಕೆಟ್ ಕಬಳಿಸುವುದರಲ್ಲಿ ಮುಂದೆ ಇರುತ್ತಾರೆ. ಸ್ಪಿನ್​ ಜೊತೆ ಜೊತೆಗೆ ಬ್ಯಾಟಿಂಗ್​ನಲ್ಲೂ ತಂಡಕ್ಕೆ ನೆರವಾಗುತ್ತಾರೆ. ಆದರೆ ಈ ಬಾರಿ ಡಬ್ಲುಪಿಎಲ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಇರಲಿಲ್ಲ. ಇವರ ಬದಲಿಗೆ ಆಟಗಾರ್ತಿ ಸ್ನೇಹಾ ರಾಣಾಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ:‘ಈ ತರಹದ ಮದುವೆ ಎಕ್ಸ್​ಪೆಕ್ಟ್​ ಮಾಡಿರಲಿಲ್ಲ’ -ಧನಂಜಯ ಮದುವೆ ಕುರಿತು ಅಕ್ಕನ ಮಾತುಗಳು?

publive-image

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಗುಳಿದಿರುವ ಕುರಿತು ಶ್ರೇಯಾಂಕ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾದಲ್ಲಿ ಪೋಸ್ಟ್​ ಶೇರ್ ಮಾಡಿರುವ ಅವರು, ಈಗ ಎದೆಗುಂದಿರಬಹುದು, ಆದರೆ ನಾನು ಮತ್ತೆ ಹಾರಾಬಲ್ಲೇನು (Heartbroken, but I will fly again). ಅಂದರೆ ತಂಡದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತೇನೆ ಎಂದು ಟ್ಯಾಗ್​ಲೈನ್ ಬರೆದುಕೊಂಡಿದ್ದಾರೆ. ಈ ಟ್ಯಾಗ್​​ ಲೈನ್​ಗೆ ತಕ್ಕಂತೆ ಕೆರೆಯ ದಡದ ಮೇಲಿನ ಮರಕ್ಕೆ ಕಟ್ಟಿರುವ ಉಯ್ಯಾಲೆಯಲ್ಲಿ ಆಡುತ್ತಿದ್ದಾರೆ. ಸದ್ಯ ಈ ಪೋಟೋ ಸಖತ್ ವೈರಲ್ ಆಗುತ್ತಿದೆ.

ವಡೋದರಾದ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ತಂಡ 201 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್​ ಬೀಸಿದ ಬೆಂಗಳೂರು ಹುಡುಗಿಯರು, ಗುಜರಾತ್​ ಬೌಲರ್​ಗಳನ್ನ ಮನ ಬಂದಂತೆ ಚಚ್ಚಿ 202 ರನ್​ ಗಳಿಸುವ ಮೂಲಕ ಅಮೋಘವಾದ ಗೆಲುವು ಪಡೆದರು. ಈ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಹಾಗೂ ರಿಚಾ ಘೋಷ್ ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment