ಬೆಂಗಳೂರು; ಹೃದಯಾಘಾತದಿಂದ ಆಚಾರ್ಯ ಕಾಲೇಜಿನ ಉಪನ್ಯಾಸಕ ನಿಧನ

author-image
Bheemappa
Updated On
ಬೆಂಗಳೂರು; ಹೃದಯಾಘಾತದಿಂದ ಆಚಾರ್ಯ ಕಾಲೇಜಿನ ಉಪನ್ಯಾಸಕ ನಿಧನ
Advertisment
  • ಕಾಲೇಜಿನಲ್ಲಿ ಉಪನ್ಯಾಸಕ ಮಾಡುತ್ತ ನಗರದಲ್ಲಿ ಒಬ್ರೇ ವಾಸವಿದ್ರು
  • ಶ್ರೇಯಸ್ ತಂದೆ ಶಶಾಂಕ್ ನಿವೃತ್ತ ಐಎಎಸ್ ಅಧಿಕಾರಿ ಆಗಿದ್ದಾರೆ
  • ಠಾಣೆಯಲ್ಲಿ ಅಸಹಜವಾಗಿ ಜೀವ ಹೋಗಿದೆಂದು ಕೇಸ್​ ದಾಖಲು

ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಮಗ ಹೃದಯಾಘಾತದಿಂದ ಜೀವ ಬಿಟ್ಟಿರುವ ಘಟನೆ ನಗರದ ಕೆರೆಗುಡ್ಡದಹಳ್ಳಿಯ ನಿವಾಸ ಒಂದರಲ್ಲಿ ನಡೆದಿದೆ.

ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಉಪನ್ಯಾಸಕ ಶ್ರೇಯಸ್ (33) ಹೃದಯಾಘಾತದಿಂದ ನಿಧನ ಹೊಂದಿದವರು. ಪಶ್ಮಿಮ ಬಂಗಾಳ ಮೂಲದ ನಿವೃತ್ತ ಐಎಎಸ್ ಅಧಿಕಾರಿ ಶಶಾಂಕ್ ಅವರ ಮಗ ಶ್ರೇಯಸ್ ಅವರು ಸೋಲದೇವನಹಳ್ಳಿ ಆಚಾರ್ಯ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ನಗರದ ಕೆರೆಗುಡ್ಡದಹಳ್ಳಿಯ ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದರು. ಭಾನುವಾರ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದ್ದು ನಿನ್ನೆ ಸಂಜೆ ಘಟನೆ ಬೆಳಕಿಗೆ ಬಂದಿದೆ.

ಮೂರು ದಿನಗಳು ಆದರೂ ಶ್ರೇಯಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರಿಗೆ ಕೆಟ್ಟ ವಾಸನೆ ಬರತೊಡಗಿದೆ. ಇದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ಮುರಿದು ನೋಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು ಮೃತದೇಹ ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment