newsfirstkannada.com

ಶಾಕಿಂಗ್​​ ನ್ಯೂಸ್​​.. ಟೀಮ್​​ ಇಂಡಿಯಾದಿಂದ ಈ ಸ್ಟಾರ್​​ ಆಟಗಾರರನ್ನು ಹೊರಹಾಕಲು ಕಾರಣವೇನು..?

Share :

Published February 13, 2024 at 6:08pm

Update February 13, 2024 at 6:16pm

  ಟೀಮ್​ ಇಂಡಿಯಾದ ಈ ಯಂಗ್​ಸ್ಟರ್ಸ್​ ಬುದ್ಧಿ ಕಲಿಯೋದು ಯಾವಾಗ?

  ಹಿರಿಯರ ಮಾತಿಗೂ ಕ್ಯಾರೇ ಎನ್ನದ ಶ್ರೇಯಸ್​ ಅಯ್ಯರ್​, ಇಶಾನ್​​ ಕಿಶನ್​!

  ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್​​ಗೆ ಹೆಡ್​​ ಕೋಚ್​ ದ್ರಾವಿಡ್​​ ವಾರ್ನಿಂಗ್​​

ಟೀಮ್​ ಇಂಡಿಯಾದ ಇಬ್ಬರು ಸ್ಟಾರ್​ ಆಟಗಾರರು ಎಂದರೆ ಇಶಾನ್​ ಕಿಶನ್​​, ಶ್ರೇಯಸ್​ ಅಯ್ಯರ್. ಇವರು ತಮ್ಮದೇ ರೀತಿಯಲ್ಲಿ ಭಾರತ ಕ್ರಿಕೆಟ್​ ತಂಡಕ್ಕೆ ಕೊಡುಗೆ ನೀಡಿದವರು. ಈಗ ಬಿಸಿಸಿಐ ಮಾತು ಕೇಳದೆ ಇಬ್ಬರು ಬೀದಿಗೆ ಬಂದಿದ್ದಾರೆ.

ಹೌದು, ಶ್ರೇಯಸ್​ ಅಯ್ಯರ್​​ ಮತ್ತು ಇಶಾನ್​ ಕಿಶನ್​​ ಟೀಮ್ ಇಂಡಿಯಾದ ಹಿರಿಯರ ಮಾತಿಗೆ ಕ್ಯಾರೇ ಎನ್ನದೆ ಪೇಚೆಗೆ ಸಿಲುಕಿದ್ದಾರೆ. ಈ ಕಾರಣದಿಂದಲೇ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರೋ ಸೀರೀಸ್​ನಿಂದ ಇಬ್ಬರನ್ನು ಹೊರಹಾಕಲಾಗಿದೆ.

ಭಾರತ ತಂಡಕ್ಕಿಂತಲೂ ಐಪಿಎಲ್​ ಮುಖ್ಯವೇ?

ಇಶಾನ್ ಕಿಶನ್ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮಾನಸಿಕ ಒತ್ತಡದ ಕಾರಣ ನೀಡಿ ಹೊರ ಬಂದಿದ್ದರು. ಇದಾದ ಬಳಿಕ ನಡೆದ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಲಭ್ಯರಾಗಿಲ್ಲ. ಹೀಗಾಗಿ ಟೀಮ್​ ಇಂಡಿಯಾದ ಸೆಲೆಕ್ಟರ್ಸ್​​ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್​​ ಹೆಸರು ಕೈಬಿಟ್ಟಿದ್ದರು. ಈಗ ಭಾರತ ತಂಡಕ್ಕೆ ಮರಳು ಇಶಾನ್​​ ರಣಜಿ ಆಡಲೇಬೇಕು ಎಂದಿದ್ದಾರೆ. ಇಷ್ಟಾದ್ರೂ ಬುದ್ಧಿ ಕಲಿಯದ ಇಶಾನ್​​ ರಣಜಿ ಆಡದೆ ಐಪಿಎಲ್​ಗೆ ತಯಾರಿ ನಡೆಸಿದ್ದಾರೆ.

ಇನ್ನೊಂದೆಡೆ ಶ್ರೇಯಸ್ ಅಯ್ಯರ್​ಗೆ ಎಷ್ಟು ಹೇಳಿದ್ರೂ ಶಾಟ್​ ಸೆಲೆಕ್ಷನ್​​​ ವಿಚಾರದಲ್ಲಿ ಬದಲಾಗಿಲ್ಲ. ಅನಗತ್ಯ ಶಾಟ್​ ಸೆಲೆಕ್ಟ್​ ಮಾಡಿ ಹಲವು ಬಾರಿ ವಿಕೆಟ್​ ಒಪ್ಪಿಸಿದ್ದ ಅಯ್ಯರ್​ನಿಂದ ಟೀಮ್​ ಇಂಡಿಯಾ ಪೇಚೆಗೆ ಸಿಲುಕಿದೆ. ಹೀಗಾಗಿ ಅಯ್ಯರ್​ಗೂ ರಣಜಿ ಆಡುವಂತೆ ಸೂಚನೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಕಿಂಗ್​​ ನ್ಯೂಸ್​​.. ಟೀಮ್​​ ಇಂಡಿಯಾದಿಂದ ಈ ಸ್ಟಾರ್​​ ಆಟಗಾರರನ್ನು ಹೊರಹಾಕಲು ಕಾರಣವೇನು..?

https://newsfirstlive.com/wp-content/uploads/2023/10/Team-India-wins.jpg

Load More