newsfirstkannada.com

T20 ವಿಶ್ವಕಪ್​​ನಿಂದ ಅಯ್ಯರ್​, ಇಶಾನ್​ಗೆ ಕೊಕ್​​.. ಈ ಇಬ್ಬರನ್ನು ಕೈ ಬಿಡಲು ಕಾರಣವೇನು?

Share :

Published April 30, 2024 at 4:30pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಜೂನ್‌ ತಿಂಗಳಲ್ಲಿ ಟಿ20 ವಿಶ್ವಕಪ್

  ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ!

  T20 ವಿಶ್ವಕಪ್​ಗೆ ಟೀಮ್​ ಇಂಡಿಯಾದಲ್ಲಿ ಇಲ್ಲ ಈ ಇಬ್ಬರಿಗೆ ಸ್ಥಾನ; ಕಾರಣವೇನು?

ಇಂಡಿಯನ್​ ಪ್ರೀಮಿಯರ್​ ಲೀಗ್​​ ಬೆನ್ನಲ್ಲೇ ಟಿ20 ವಿಶ್ವಕಪ್​ ನಡೆಯಲಿದೆ. ಈಗಾಗಲೇ ಮೆಗಾ ಐಸಿಸಿ ಟೂರ್ನಿ ಟಿ20 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ. ಅಚ್ಚರಿ ಎಂದರೆ ಫಾರ್ಮ್​​ನಲ್ಲಿದ್ರೂ ಟೀಂ ಇಂಡಿಯಾದಲ್ಲಿ ವಿಕೆಟ್​​ ಕೀಪರ್​​​ ಇಶಾನ್​ ಕಿಶನ್​​, ಸ್ಟಾರ್​​ ಪ್ಲೇಯರ್​​ ಶ್ರೇಯಸ್​ ಅಯ್ಯರ್​​ಗೆ ಸ್ಥಾನ ಸಿಕ್ಕಿಲ್ಲ. ಈ ಬೆನ್ನಲ್ಲೇ ಇಬ್ಬರಿಗೂ ಸ್ಥಾನ ನೀಡದಿರಲು ಕಾರಣವೇನು? ಅನ್ನೋ ಪ್ರಶ್ನೆಗಳು ಕೇಳಿ ಬಂದಿದ್ದವು. ಆದರೀಗ, ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕಳೆದ ವರ್ಷ ಇಶಾನ್ ಕಿಶನ್ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಟೆಸ್ಟ್ ಸರಣಿಗೆ ಮುನ್ನ ಮಾನಸಿಕ ಒತ್ತಡದ ಕಾರಣ ನೀಡಿ ಟೀಮ್ ಇಂಡಿಯಾದಿಂದ ಹೊರಬಂದಿದ್ದರು. ಆದರೆ, ರೆಸ್ಟ್​ ಮಾಡಬೇಕಿದ್ದ ಇಶಾನ್​​​​ ದುಬೈನಲ್ಲಿ ಎಂಎಸ್​ ಧೋನಿ ಜತೆ ಪಾರ್ಟಿ ಮಾಡಿದ್ದಾರೆ. ಇದರಿಂದ ಇಶಾನ್​ ಕಿಶನ್​​​ ಟೀಂ ಇಂಡಿಯಾ ಸೆಲೆಕ್ಟರ್ಸ್​ ಕೆಂಗಣ್ಣಿಗೆ ಗುರಿಯಾಗಿದ್ದು, ಬೇಕಂತಲೇ ನಂತರ ಇವರನ್ನು ಬಿಸಿಸಿಐ ಸೆಂಟ್ರಲ್​ ಕಾಂಟ್ರಾಕ್ಟ್​ನಿಂದಲೂ ತೆಗೆದು ಹಾಕಲಾಗಿತ್ತು. ಈಗ ಟಿ20 ವಿಶ್ವಕಪ್​ನಿಂದಲೂ ಕೈ ಬಿಟ್ಟಿದ್ದಾರೆ.

ಶ್ರೇಯಸ್ ಅಯ್ಯರ್ ಕೂಡ ಎಷ್ಟೇ ಹೇಳಿದ್ರೂ ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿದ್ದಾರೆ. ಮಹತ್ವದ ಪಂದ್ಯಗಳಲ್ಲಿ ಎಚ್ಚರಿಕೆಯಿಂದ ಆಡದೆ ಅನಗತ್ಯ ಶಾಟ್​​ಗಳ ಹೊಡೆತಕ್ಕೆ ಕೈ ಹಾಕಿ ವಿಕೆಟ್​​​​ ಒಪ್ಪಿಸುತ್ತಿದ್ದಾರೆ. ಶ್ರೇಯಸ್​ ಅಯ್ಯರ್​ ಮಾಡುತ್ತಿರೋ ತಪ್ಪುಗಳು ಟೀಮ್ ಇಂಡಿಯಾ ಪಾಲಿಗೆ ದುಬಾರಿ ಆಗಿದೆ. ಜತೆಗೆ ಇಬ್ಬರು ರಣಜಿ ಕೂಡ ಆಡಿಲ್ಲ. ಹೀಗಾಗಿ ಇಶಾನ್​ ಜತೆಗೆ ಅಯ್ಯರ್​ಗೂ ಬಿಸಿಸಿಐ ಸೆಂಟ್ರಲ್​ ಕಾಂಟ್ರಾಕ್ಟ್​ನಿಂದ ಕೊಕ್​ ನೀಡಲಾಗಿತ್ತು. ಈಗ ಟಿ20 ವಿಶ್ವಕಪ್​ನಿಂದಲೂ ತೆಗೆದು ಹಾಕಲಾಗಿದೆ.

ಇನ್ನು, ಇಬ್ಬರು ಅಶಸ್ತಿನಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶ್ರೇಯಸ್​ ಅಯ್ಯರ್​​, ಇಶಾನ್​ ಕಿಶನ್​​ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಜಿತ್ ಅರ್ಗರ್ಕರ್ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಕನ್ನಡಿಗನಿಗೆ ಬಿಗ್​ ಶಾಕ್​​.. ಟಿ20 ವಿಶ್ವಕಪ್​ನಿಂದಲೇ ಕೆ.ಎಲ್​ ರಾಹುಲ್​​ ಔಟ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​​ನಿಂದ ಅಯ್ಯರ್​, ಇಶಾನ್​ಗೆ ಕೊಕ್​​.. ಈ ಇಬ್ಬರನ್ನು ಕೈ ಬಿಡಲು ಕಾರಣವೇನು?

https://newsfirstlive.com/wp-content/uploads/2024/01/Ishan-Kishan_Shreyas-Iyer.jpg

Load More