ಪಂಜಾಬ್ ಕಿಂಗ್ಸ್​, ಮುಂಬೈ 2 ತಂಡದ ಕ್ಯಾಪ್ಟನ್​ಗಳಿಗೆ ಬಿಗ್ ಶಾಕ್.. ಅಸಲಿಗೆ ಆಗಿದ್ದೇನು?

author-image
Bheemappa
Updated On
ಪಂಜಾಬ್ ಕಿಂಗ್ಸ್​, ಮುಂಬೈ 2 ತಂಡದ ಕ್ಯಾಪ್ಟನ್​ಗಳಿಗೆ ಬಿಗ್ ಶಾಕ್.. ಅಸಲಿಗೆ ಆಗಿದ್ದೇನು?
Advertisment
  • ಮುಂಬೈ ವಿರುದ್ಧ ಗೆದ್ದರೂ ಶ್ರೇಯಸ್​ ಅಯ್ಯರ್​ಗೆ ತಪ್ಪಲಿಲ್ಲ ಕಷ್ಟ
  • ಪಂದ್ಯದಲ್ಲಿ ನಿಯಮಗಳನ್ನು ಮೀರಿ ಆಟವಾಡಿದ್ರಾ ನಾಯಕರು?
  • ಆರ್​ಸಿಬಿ ಜೊತೆ ಫೈನಲ್​ನಲ್ಲಿ ಆಡಲಿರುವ ಪಂಜಾಬ್ ಕಿಂಗ್ಸ್​

ಮುಂಬೈ ಇಂಡಿಯನ್ಸ್​ ವಿರುದ್ಧ ಹೋರಾಡಿ ಕೊನೆಗೆ ಪಂಜಾಬ್ ಕಿಂಗ್ಸ್​ 5 ವಿಕೆಟ್​ಗಳಿಂದ ಭರ್ಜರಿ ಗೆಲುವು ಪಡೆದಿದೆ. ಇದರಿಂದ ಪಂಜಾಬ್ ಕಿಂಗ್ಸ್​ ನಾಳೆ ಆರ್​ಸಿಬಿ ಜೊತೆ ಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಇದರ ಬೆನ್ನಲ್ಲೇ ಮುಂಬೈ ಹಾಗೂ ಪಂಜಾಬ್ ಈ ಎರಡು ತಂಡದ ನಾಯಕರಿಗೆ ಬಿಸಿಸಿಐ ಭಾರೀ ಮೊತ್ತದ ದಂಡ ವಿಧಿಸಿದೆ.

ಗುಜರಾತ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ಲಾಲಿಫೈಯರ್- 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ​ ಪಂಜಾಬ್ ಕಿಂಗ್ಸ್ ಎರಡು ತಂಡಗಳು ಪೈಪೋಟಿಗೆ ಬಿದ್ದಿದ್ದವು. ಈ ಪಂದ್ಯದ ವೇಳೆ ಎರಡು ತಂಡದ ನಾಯಕರೂ ನಿಧಾನಗತಿ ಬೌಲಿಂಗ್​ ಮಾಡುವ ಅಪರಾಧ (ಸ್ಲೋ ಓವರ್​ ರೇಟ್) ಎಸಗಿದ್ದಾರೆ. ಹೀಗಾಗಿ ಇಬ್ಬರೂ ನಾಯಕರೂ ಸೇರಿದಂತೆ ಎರಡು ಟೀಮ್​ಗಳ ಇಂಪ್ಯಾಕ್ಟ್​ ಪ್ಲೇಯರ್​ ಸೇರಿದಂತೆ ಎಲ್ಲರಿಗೂ ಭಾರೀ ಫೈನ್ ಹಾಕಲಾಗಿದೆ.

ಇದನ್ನೂ ಓದಿ: RCB ಜೊತೆ ಪಂಜಾಬ್ ಫೈನಲ್​.. Qualifier- 2, ಮುಂಬೈಗೆ ಬಿಗ್ ಶಾಕ್ ಕೊಟ್ಟ ಶ್ರೇಯಸ್ ಅಯ್ಯರ್!

publive-image

ಈ ಸೀಸನ್​ನಲ್ಲಿ 2ನೇ ಬಾರಿ ಸ್ಲೋ ಓವರ್​ ರೇಟ್​ ತಪ್ಪು ಎಸಗಿದ್ದಕ್ಕೆ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು 27 ಲಕ್ಷ ರೂಪಾಯಿ ದಂಡ ಪಾವತಿ ಮಾಡಬೇಕಿದೆ. ಇದರ ಜೊತೆಗೆ ಇಂಪ್ಯಾಕ್ಟ್​ ಪ್ಲೇಯರ್ ಸೇರಿ ತಂಡದ 11 ಆಟಗಾರರಿಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡ ಕಟ್ಟಬೇಕಾಗಿದೆ ಎಂದು ಐಪಿಎಲ್​ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬೈ ಇಂಡಿಯನ್ಸ್​ ಕೂಡ ಈ ಸೀಸನ್​ನಲ್ಲಿ 3ನೇ ಸಲ ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕೆ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಇಂಪ್ಯಾಕ್ಟ್​ ಪ್ಲೇಯರ್ ಸೇರಿ ಪ್ಲೇಯಿಂಗ್​- 11ನಲ್ಲಿ ಆಡಿದ ಎಲ್ಲ ಆಟಗಾರರು 12 ಲಕ್ಷ ರೂಪಾಯಿ ಅಥವಾ ಪಂದ್ಯದ ಫೀಸ್​ನ ಶೇಕಡಾ 50 ರಷ್ಟು ದಂಡ ಪಾವತಿ ಮಾಡಬೇಕಿದೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment