ವಿಶ್ವಕಪ್ನಲ್ಲಿ 2ನೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ಬ್ಯಾಟಿಂಗ್ಗೆ ಕ್ರೀಡಾಲೋಕ ಫಿದಾ
ಕೇವಲ 70 ಬಾಲ್ನಲ್ಲಿ 105 ರನ್ ಚಚ್ಚಿದ ಶ್ರೇಯಸ್..!
ಇಂದು ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ 398 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಟೀಂ ಇಂಡಿಯಾದ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಅಗ್ರೆಸ್ಸಿವ್ನಿಂದ ಬ್ಯಾಟಿಂಗ್ ಮಾಡಿ 4 ಫೋರ್, 4 ಬಿಗ್ ಸಿಕ್ಸರ್ ಸಮೇತ 47 ರನ್ ಗಳಿಸಿದರು. ಗಿಲ್ 65 ಎಸೆತಗಳಲ್ಲಿ 79 ರನ್ ಸಿಡಿಸಿದ್ರು. ಕೊಹ್ಲಿ ತಾನು ಎದುರಿಸಿದ 113 ಬಾಲ್ನಲ್ಲಿ 2 ಬಿಗ್ ಸಿಕ್ಸರ್, 9 ಫೋರ್ ಸಮೇತ 117 ರನ್ ಗಳಿಸಿದ್ರು.
ಇನ್ನಿಂಗ್ಸ್ ಉದ್ಧಕ್ಕೂ ಕೊಹ್ಲಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ ಅಬ್ಬರಿಸಿದ್ರು. ಕೇವಲ 70 ಬಾಲ್ನಲ್ಲಿ 8 ಸಿಕ್ಸರ್, 7 ಫೋರ್ನೊಂದಿಗೆ 105 ರನ್ ಚಚ್ಚಿದ್ರು. ಅದರಲ್ಲೂ ಇವರ ಸ್ಟ್ರೈಕ್ ರೇಟ್ ಔಟ್ ಆಗುವ ತನಕ ಬರೋಬ್ಬರಿ 150ಕ್ಕೂ ಹೆಚ್ಚು ಇತ್ತು.
ಅಯ್ಯರ್ ಈ ಟೂರ್ನಿಯಲ್ಲಿ 2 ಶತಕಗಳನ್ನು ಸಿಡಿಸಿದ ಟೀಂ ಇಂಡಿಯಾದ ಏಕೈಕ ಬ್ಯಾಟರ್. ಕೊಹ್ಲಿ ಮಾತ್ರ ಮೂರು ಸೆಂಚೂರಿಸಿ ಸಿಡಿಸಿದ್ರೆ, ರಾಹುಲ್ ಮತ್ತು ರೋಹಿತ್ ತಲಾ ಒಂದು ಶತಕ ಬಾರಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ