/newsfirstlive-kannada/media/post_attachments/wp-content/uploads/2025/05/Shreyas_Iyer_ಧಃಓಣೀ.jpg)
ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 4 ವಿಕೆಟ್ಗಳಿಂದ ಭರ್ಜರಿ ಗೆಲುವು ಪಡೆದಿದೆ. ಪಂದ್ಯವನ್ನು ಗೆದ್ದ ಖುಷಿಯಲ್ಲಿದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ಗೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು ಅಲ್ಲದೇ ದೊಡ್ಡ ಮೊತ್ತದ ದಂಡ ವಿಧಿಸಿದೆ.
ಐಪಿಎಲ್ನ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ 12 ಲಕ್ಷ ರೂಪಾಯಿಗಳ ದಂಡವನ್ನು ಬಿಸಿಸಿಐ ವಿಧಿಸಿದೆ. ಏಪ್ರಿಲ್ 30 ರಂದು ಚೆನ್ನೈ ತಂಡದ ವಿರುದ್ಧ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲೀಗ್ನ ಓವರ್ ರೇಟ್ ನಿಯಮಗಳನ್ನು ಕ್ಯಾಪ್ಟನ್ ಉಲ್ಲಂಘನೆ ಮಾಡಿದ್ದರಿಂದ ಈ ದಂಡವನ್ನು ಕಟ್ಟುವಂತೆ ತಿಳಿಸಲಾಗಿದೆ.
ಇದನ್ನೂ ಓದಿ:ಬಿಸಿಸಿಐನ ಕೋರ್ಟ್ ಕಟಕಟೆಗೆ ಎಳೆದುತಂದ ರೋಬೋ ನಾಯಿ, IPLನಲ್ಲಿ ಬಿಗ್ಬಾಸ್ಗೆ ಸಂಕಷ್ಟ..!
ಈ ಸೀಸನ್ನಲ್ಲಿ ಪಂಜಾಬ್ ತಂಡದ ಶ್ರೇಯಸ್ ಅಯ್ಯರ್ ಅವರು ಇದೇ ಮೊದಲ ಬಾರಿಗೆ ತಪ್ಪು ಎಸಗಿದ್ದಾರೆ. ಐಪಿಎಲ್ನ ನೀತಿ ಸಂಹಿತೆ ಆರ್ಟಿಕಲ್ 2.22 ಅನ್ನು ಮೀರಲಾಗಿದೆ. ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಆಗಿದ್ದರಿಂದ ಫೈನ್ ಹಾಕಲಾಗಿದೆ ಎಂದು ಬಿಸಿಸಿಐನಿಂದ ಪ್ರಕಟಣೆ ಹೊರಡಿಸಲಾಗಿದೆ. ಐಪಿಎಲ್ ಆರಂಭದಿಂದ ಶ್ರೇಯಸ್ ಅಯ್ಯರ್ ಸೇರಿ ಒಟ್ಟು 6 ನಾಯಕರು ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನು ಐಪಿಎಲ್ ನಿಯಮದಂತೆ 20 ಓವರ್ಗಳನ್ನು 1 ಗಂಟೆ 30 ನಿಮಿಷದ ಒಳಗೆ ಎಲ್ಲ ತಂಡಗಳು ಪೂರ್ಣಗೊಳಿಸಬೇಕು. ಇಲ್ಲದಿದ್ರೆ ದಂಡವನ್ನು ಪಾವತಿಸಬೇಕಾಗುತ್ತದೆ.
ಚೆನ್ನೈ ಎಂ.ಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಚೆನ್ನೈ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿತ್ತು. ಮೊದಲ ಬ್ಯಾಟಿಂಗ್ ಮಾಡಿದ್ದ ಎಂ.ಎಸ್ ಧೋನಿ ಪಡೆಯು 19.2 ಓವರ್ಗಳಲ್ಲಿ ಆಲೌಟ್ ಆಗಿ 191 ರನ್ ಗುರಿ ನೀಡಿತ್ತು. ಈ ಗುರಿ ಹಿಂದೆ ಬಿದ್ದಿದ್ದ ಪಂಜಾಬ್ ಇನ್ನೂ 2 ಎಸೆತ ಬಾಕಿ ಇರುವಾಗಲೇ 6 ವಿಕೆಟ್ಗೆ 194 ರನ್ ಗಳಿಸುವ ಮೂಲಕ ಜಯ ಸಾಧಿಸಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ