/newsfirstlive-kannada/media/post_attachments/wp-content/uploads/2025/03/Shreyas_Iyer-3.jpg)
ಗುಜರಾತ್ ಟೈಟನ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಪಂಜಾಬ್ ಪರ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಪಂಜಾಬ್​ನ ಆರಂಭಿಕ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಅಮೋಘವಾದ ಹಾಫ್​​ಸೆಂಚುರಿ ಸಿಡಿಸಿದ್ದಾರೆ.
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕ ಶುಭ್​ಮನ್ ಗಿಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಪಂಜಾಬ್ ಆರಂಭದಲ್ಲಿ ಆಘಾತ ಅನುಭವಿಸಿದರೂ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಬ್ಯಾಟಿಂಗ್ ಬಲದಿಂದ ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ: ಗ್ರೇಟ್​ ಫಿನಿಶರ್ ಅಶುತೋಷ್ ಶರ್ಮಾರನ್ನ ಮಿಸ್ ಮಾಡಿಕೊಂಡ RCB.. ಹೇಗೆ ಗೊತ್ತಾ?
ಗುಜರಾತ್ ಬೌಲರ್​ಗಳ ಮೇಲೆ ಆರಂಭದಿಂದಲೇ ಸವಾರಿ ಮಾಡಿದ ಶ್ರೇಯಸ್ ಅಯ್ಯರ್ ಅವರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದರಿಂದ ಕೇವಲ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಅತ್ಯದ್ಭುತವಾದ ಸಿಕ್ಸರ್​ ಸಮೇತ ಅರ್ಧ ಶತಕವನ್ನು ಪೂರೈಸಿದರು. ಇದು ಈ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಅವರ ಮೊದಲ ಹಾಫ್​ ಸೆಂಚುರಿ ಆಗಿದೆ.
ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕೆಕೆಆರ್​ನಿಂದ ಹೊರ ಬಂದಿದ್ದ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಫ್ರಾಂಚೈಸಿ ಭಾರೀ ಹಣ ಕೊಟ್ಟು ಖರೀದಿ ಮಾಡಿತ್ತು. ಬರೋಬ್ಬರಿ 26.75 ಕೋಟಿ ಹಣ ನೀಡಿ ತಂಡಕ್ಕೆ ಕರೆತಂದಿದೆ. ಇದು ಐಪಿಎಲ್​ ಇತಿಹಾಸದಲ್ಲೇ 2ನೇ ಅತ್ಯಧಿಕ ಬೆಲೆಗೆ ಮಾರಾಟವಾದ ಪ್ಲೇಯರ್ ಶ್ರೇಯಸ್ ಅಯ್ಯರ್ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ