/newsfirstlive-kannada/media/post_attachments/wp-content/uploads/2025/04/Shreyas_Iyer_1.jpg)
ಸನ್ರೈಸರ್ಸ್ ಹೈದ್ರಾಬಾದ್ ತಂಡ ಮೊದಲ ಬೌಲಿಂಗ್ ಮಾಡಿ ಭಾರೀ ಅವಮಾನಕ್ಕೆ ಒಳಗಾಗಿದ್ದು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತದ ರನ್ಗಳನ್ನು ಕಲೆ ಹಾಕಿದೆ. 20 ಓವರ್ಗಳಲ್ಲಿ 6 ವಿಕೆಟ್ಗೆ 246 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡರು. ಮೊದಲೇ ಯೋಜನೆಯಂತೆ ಆರಂಭಿಕ ಬ್ಯಾಟರ್ಸ್ ಹೊಡಿಬಡಿ ಬ್ಯಾಟಿಂಗ್ ಮಾಡಿದರು. ಓಪನರ್ಸ್ ಆದ ಪ್ರಿಯಾಂಶ್ ಆರ್ಯ ಕೇವಲ 13 ಎಸೆತದಲ್ಲಿ 4 ಸಿಕ್ಸರ್ ಇಂದ 36 ರನ್ ಹೊಡೆದು ಔಟ್ ಆದ್ರೆ, ಪ್ರಭಸಿಮ್ರನ್ ಸಿಂಗ್ ಕೇವಲ 23 ಬಾಲ್ಗಳಲ್ಲಿ 7 ಬೌಂಡರಿಗಳಿಂದ 42 ರನ್ಗೆ ಕ್ಯಾಚ್ ನೀಡಿ ಔಟ್ ಆದರು.
ಇದನ್ನೂ ಓದಿ:RCBಗೆ ಬೆಂಗಳೂರೇ ಅನ್ಲಕ್ಕಿ ಸ್ಟೇಡಿಯಂ.. ಸೋಲೋದ್ರಲ್ಲಿ ಕೆಟ್ಟ ದಾಖಲೆ, ಅದೆಷ್ಟು ಬಾರಿ ಸೋತಿದೆ?
ಪ್ರಭಸಿಮ್ರನ್ ಬಳಿಕ ಬ್ಯಾಟಿಂಗ್ಗೆ ಬಂದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಹೈದ್ರಾಬಾದ್ ಬೌಲರ್ಸ್ಗೆ ಆಕಾಶದಲ್ಲಿನ ಚುಕ್ಕಿಗಳನ್ನು ತೋರಿಸಿದರು. ಬ್ಯಾಟಿಂಗ್ನಲ್ಲಿ ಘರ್ಜನೆ ಮಾಡಿದ ಶ್ರೇಯಸ್ ಕೇವಲ 23 ಎಸೆತಗಳಲ್ಲಿ 2 ಫೋರ್, 5 ಅಮೋಘ ಸಿಕ್ಸರ್ಗಳಿಂದ ಅರ್ಧಶತಕ ಪೂರೈಸಿದರು. ಅಯ್ಯರ್ಗೆ ಒಳ್ಳೆಯ ಸಾಥ್ ಕೊಟ್ಟ ನೆಹಾಲ್ ವಧೇರಾ 27 ರನ್ ಗಳಿಸಿ ತಂಡಕ್ಕೆ ಮೆಲ್ಲಗೆ ರನ್ಗಳನ್ನ ತಂದು ಕೊಡುತ್ತಿದ್ದರು.
ಕೊನೆಗೆ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ಗಳಿಂದ ಅಮೋಘವಾದ 82 ರನ್ಗಳ ಕಾಣಿಕೆ ನೀಡಿ, ಟ್ರಾವಿಸ್ ಹೆಡ್ಗೆ ಕ್ಯಾಚ್ ಕೊಟ್ಟರು. ಮ್ಯಾಕ್ಸ್ವೆಲ್ 3 ರನ್ಗೆ ಔಟ್ ಆಗಿ ಮತ್ತೆ ಬ್ಯಾಟಿಂಗ್ನಲ್ಲಿ ವಿಫಲರಾದರು. ಕೊನೆಯಲ್ಲಿ ಘರ್ಜಿಸಿದ ಮಾರ್ಕಸ್ ಸ್ಟೊನಿಸ್ ಕೇವಲ 11 ಬಾಲ್ಗಳಲ್ಲಿ 34 ರನ್ ಚಚ್ಚಿದರು. ಕೊನೆ ಓವರ್ನಲ್ಲಿ ಮೊಹಮ್ಮದ್ ಶಮಿಗೆ ಮಾರ್ಕಸ್ ಸ್ಟೊನಿಸ್ ಸತತ 4 ಸಿಕ್ಸರ್ಗಳನ್ನು ಬಾರಿಸಿದರು. ಇದರಿಂದ ಪಂಜಾಬ್ ಕಿಂಗ್ಸ್ 246 ರನ್ಗಳ ದೊಡ್ಡ ಮೊತ್ತದ ಟಾರ್ಗೆಟ್ ಅನ್ನು ಸೆಟ್ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ