/newsfirstlive-kannada/media/post_attachments/wp-content/uploads/2025/05/DHONI_KOHLI_ROHIT.jpg)
ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಪಡೆಯ ಸಾರಥಿ ಶ್ರೇಯಸ್ ಅಯ್ಯರ್ ಎಲ್ಲರ ಗಮನ ಸೆಳೆದಿದ್ದಾರೆ. ಶ್ರೇಯಸ್ ಸೈಲೆಂಟ್ ಸ್ಟ್ರಾಟಜಿಗಳಿಗೆ ಎದುರಾಳಿಗಳು ಮಕಾಡೆ ಮಲಗಿದ್ರೆ, ದಿಗ್ಗಜರು ಶಹಬ್ಬಾಸ್ ಅಂತಿದ್ದಾರೆ. ಡಿಫರೆಂಟ್ ನಾಯಕತ್ವದಿಂದ ಕ್ಯಾಪ್ಟನ್ ಶ್ರೇಯಸ್ ಎಲ್ಲರ ಮನ ಗೆದ್ದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಸಕ್ಸಸ್ ಫುಲ್ ಕ್ಯಾಪ್ಟನ್ಸ್ ಎಂದಾಕ್ಷಣ ಕಣ್ಮುಂದೆ ಬರೋದು ಮಹೇಂದ್ರ ಸಿಂಗ್ ಧೋನಿ, ಹಿಟ್ಮ್ಯಾನ್ ರೋಹಿತ್ ಶರ್ಮಾ. ಬರೋಬ್ಬರಿ 5 ಬಾರಿ ಟ್ರೋಫಿ ಗೆದ್ದಿರುವ ಸಾಧನೆ ಮಾಡಿರುವ ಇವರು, ಐಪಿಎಲ್ನ ಲೆಜೆಂಡರಿ ಕ್ಯಾಪ್ಟನ್ಗಳು ಅಂತಾನೇ ಫೇಮಸ್. ಆದ್ರೀಗ ಇವರನ್ನೇ ಮೀರಿಸುವ ನಾಯಕನಾಗುವತ್ತ ಹೆಜ್ಜೆ ಹಾಕಿದ್ದಾರೆ ಶ್ರೇಯಸ್ ಅಯ್ಯರ್.
ಐಪಿಎಲ್ ನಾಯಕನಾಗಿ ಶ್ರೇಯಸ್ ಅಯ್ಯರ್ ಕಮಾಲ್..!
ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್, ಪ್ರಸಕ್ತ ಸೀಸನ್ನಲ್ಲಿ ಪಂಜಾಬ್ ಚುಕ್ಕಾಣಿ ಹಿಡಿದಿದ್ದಾರೆ. ಶ್ರೇಯಸ್ ಅಯ್ಯರ್, ಪಂಜಾಬ್ ನಾಯಕನಾದ ಬೆನ್ನಲ್ಲೇ ಈ ಸೀಸನ್ನಲ್ಲಿ ಪಂಜಾಬ್ ಚರಿಷ್ಮಾ ಬದಲಾಗುತ್ತೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದ್ರೆ, ತನ್ನ ಆಟದ ಮೂಲಕ ಆ ನಂಬಿಕೆ ಉಳಿಸಿಕೊಂಡಿದ್ದಾರೆ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ಬ್ಯಾಟ್ ಹಿಡಿದು ಹೆಚ್ಚು ಸದ್ದು ಮಾಡಿದ ಶ್ರೇಯಸ್ ಅಯ್ಯರ್, ನಾಯಕನಾಗಿ ತಾನೇನು ಅನ್ನೋದನ್ನು ಫ್ರೂವ್ ಮಾಡಿದ್ದಾರೆ. ಹಿಂದೆಂದೂ ಕಾಣದ ಸಕ್ಸಸ್ನ ಪಂಜಾಬ್ ತಂಡಕ್ಕೆ ನೀಡಿದ್ದಾರೆ. ಈ ಮೂಲಕ ಪಂಜಾಬ್ ಫ್ರಾಂಚೈಸಿಯ ನಂಬಿಕೆ ಮಾತ್ರವೇ ಉಳಿಸಿಕೊಳ್ಳಲಿಲ್ಲ. ತಾನೋರ್ವ ಬೆಸ್ಟ್ ಕ್ಯಾಪ್ಟನ್ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಜೊತೆಗೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ್ದಾರೆ.
ಐಪಿಎಲ್ನ ದಿಗ್ಗಜ ನಾಯಕರಿಗೆ ಶ್ರೇಯಸ್ ಸೆಡ್ಡು..!
ಐಪಿಎಲ್ನ ದಿಗ್ಗಜ ನಾಯಕರು ಎಂದಾಕ್ಷಣ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್ ಇವ್ರೆ ನೆನಪಾಗೋದು. ಯಾಕಂದ್ರೆ ಹೆಚ್ಚು ಟ್ರೋಫಿ ಗೆದ್ದಿದ್ದಾರೆ. ಈ ಲೆಜೆಂಡರಿ ನಾಯಕರನ್ನೇ ಶ್ರೇಯಸ್ ಅಯ್ಯರ್ ನಾಯಕತ್ವದ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಒಂದು ಐಪಿಎಲ್ ಟ್ರೋಫಿಯನ್ನೂ ಗೆದ್ದಿರೋ ಶ್ರೇಯಸ್, ವಿನ್ನಿಂಗ್ ಪರ್ಸಂಟೇಜ್ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.
ದಿಗ್ಗಜ ನಾಯಕರಿಗೆ ಶ್ರೇಯಸ್ ಸೆಡ್ಡು..!
ಐಪಿಎಲ್ ನಾಯಕನಾಗಿ 82 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಶ್ರೇಯಸ್ ಅಯ್ಯರ್, 45 ಪಂದ್ಯಗಳಲ್ಲಿ ಗೆದ್ದು ಬೀಗಿದ್ದಾರೆ. 32 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. 59.4ರ ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ದಾರೆ. ಧೋನಿ 233 ಪಂದ್ಯಗಳಿಂದ 135 ಮ್ಯಾಚ್ ಗೆದ್ದು, 79 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದ್ದಾರೆ. 58.44ರಷ್ಟು ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ದಾರೆ. 158 ಪಂದ್ಯಗಳ ಪೈಕಿ 87ರಲ್ಲಿ ಗೆಲುವು, 67ರಲ್ಲಿ ಸೋಲು ಕಂಡಿರುವ ರೋಹಿತ್, 56.32ರ ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ರೆ. ಹಾರ್ದಿಕ್ 56 ಪಂದ್ಯಗಳ ಪೈಕಿ 33ರಲ್ಲಿ ಗೆಲುವು, 23 ಪಂದ್ಯದಲ್ಲಿ ಸೋಲುಂಡಿದ್ದಾರೆ. 58.9ರಷ್ಟು ವಿನ್ನಿಂಗ್ ಪರ್ಸಂಟೇಜ್ ಹೊಂದಿದ್ದಾರೆ.
ಇದನ್ನೂ ಓದಿ: ಕನ್ನಡಿಗನೂ ಸೇರಿ IPLನಲ್ಲಿ ಒನ್ ಮ್ಯಾಚ್ ಕಾ ಹೀರೋಗಳು.. ₹23 ಕೋಟಿ ಪ್ಲೇಯರ್ ಫ್ಲಾಪ್!
ಸಿಕ್ಕ ಪ್ರತಿ ಅವಕಾಶದಲ್ಲೂ ಶ್ರೇಯಸ್ ಮಿಂಚು..!
2018ರ ಐಪಿಎಲ್ನ ಮಿಡ್ ವೇನಲ್ಲಿ ಡೆಲ್ಲಿ ತಂಡದ ನಾಯಕತ್ವದ ಚುಕ್ಕಾಣಿ ಹಿಡಿದ ಶ್ರೇಯಸ್ ಅಯ್ಯರ್, 2020ರ ಐಪಿಎಲ್ನಲ್ಲಿ ಯುವ ಆಟಗಾರರನ್ನೇ ಒಳಗೊಂಡ ತಂಡವನ್ನ ಫೈನಲ್ಗೆ ಕೊಂಡೊಯ್ದಿದ್ರು. ಡೆಲ್ಲಿ ನಾಯಕನಾಗಿ ದಿಗ್ಗಜ ಆಟಗಾರರೇ ಮಾಡದ ಸಾಧನೆ ಮಾಡಿದ್ರು. ಆದ್ರೆ, 2021ರಲ್ಲಿ ಇಂಜುರಿಯಿಂದ ಸೀಸನ್ ಅರ್ಧದಲ್ಲೇ ಹೊರಬಿದ್ದ ಶ್ರೇಯಸ್ಗೆ ಮತ್ತೆ ನಾಯಕತ್ವದ ಪಟ್ಟ ಸಿಗಲಿಲ್ಲ.
ಬಳಿಕ 2022ರಲ್ಲಿ ಕೆಕೆಆರ್ ಸೇರಿದ ಅಯ್ಯರ್, 2024ರಲ್ಲಿ ಕೊಲ್ಕತ್ತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಆದ್ರೆ, ಈ ಕ್ರೆಡಿಟ್ ಕಂಪ್ಲೀಟ್ ಗಂಭೀರ್ ಪಾಲಾಗಿತ್ತು. ಇದೀಗ, ಅದೇ ಶ್ರೇಯಸ್ ಅಯ್ಯರ್, ಪಂಜಾಬ್ ನಾಯಕನಾಗಿ ಪ್ರಸಕ್ತ ಸೀಸನ್ನಲ್ಲಿ ಟ್ರೋಫಿ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪಂಜಾಬ್ ಪಡೆಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕನಸು ಹುಟ್ಟು ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ