/newsfirstlive-kannada/media/post_attachments/wp-content/uploads/2025/05/SHREYAS_IYER_RCB_1.jpg)
ಈ ಬಾರಿಯ ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಪಂಜಾಬ್ ಕಿಂಗ್ಸ್ ಸದ್ಯ ಪಾಯಿಂಟ್ ಟೇಬಲ್ನಲ್ಲಿ ಟಾಪ್ನಲ್ಲಿದೆ. 11 ವರ್ಷಗಳ ಬಳಿಕ ಫೈನಲ್ಗೇರುವ ತವಕದಲ್ಲಿದೆ. ಈ ಬಾರಿ ಹೊಸ ಕ್ಯಾಪ್ಟನ್ ಅನ್ನು ತಂಡಕ್ಕೆ ಕರೆತಂದು ಟ್ರೋಫಿಗೆ ಇನ್ನೊಂದೇ ಹೆಜ್ಜೆ ಎನ್ನುವಂತೆ ಕಾಯುತ್ತಿದೆ. ಈ ಬಾರಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿರುವ ಪಂಜಾಬ್ ಇಂದು ಆರ್ಸಿಬಿ ಜೊತೆ ಅಖಾಡಕ್ಕೆ ಇಳಿಯುತ್ತಿದೆ. ಇದರ ನಡುವೆ ಪಂಜಾಬ್ ಕಿಂಗ್ಸ್ನ ಸ್ಟ್ರೆಂಥ್ & ವೀಕ್ನೆಸ್ ಏನು?.
ಪಂಜಾಬ್ ಕಿಂಗ್ಸ್ ತಂಡದ ಸಕ್ಸಸ್ ಸಿಕ್ರೇಟ್ ಅಂದ್ರೆ, ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರಾನ್ ಸಿಂಗ್ ಓಪನಿಂಗ್ ಬ್ಯಾಟಿಂಗ್. ಇವ್ರೇ ಅಲ್ಲ. ಪವರ್ ಪ್ಲೇ ಹಾಗೂ ಮಿಡಲ್ ಓವರ್ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಜೋಶ್ ಇಂಗ್ಲಿಷ್, ಪಂಜಾಬ್ ಶಕ್ತಿ ಆಗಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವ ಹಾಗೂ ಸಮಯೋಚಿತ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಬಲವಾಗಿರುತ್ತದೆ. ಲೋವರ್ ಆರ್ಡರ್ನಲ್ಲಿ ನೇಹಲ್ ವಡೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್ ಮ್ಯಾಚ್ ಫಿನಿಷರ್ ರೋಲ್ ತಂಡಕ್ಕೆ ಆಧಾರವಾಗಿದ್ದಾರೆ.
ಇದನ್ನೂ ಓದಿ: IPLನಲ್ಲಿ ಶ್ರೇಯಸ್ ಅಯ್ಯರ್ ಟ್ರ್ಯಾಕ್ ರೆಕಾರ್ಡ್ RCBಗೆ ಭಯ ಹುಟ್ಟಿಸುತ್ತಾ?
ಮಾರ್ಕೊ ಯಾನ್ಸನ್ ಆಲ್ರೌಂಡರ್ ಆಟದ ಜೊತೆಗೆ ವೇಗಿ ಆರ್ಶ್ದೀಪ್ ಸಿಂಗ್, ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಆದ್ರೆ, ಯಜುವೇಂದ್ರ ಚಹಲ್ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಿದ್ರೆ, ಕೈಲ್ ಜೇಮೀಸನ್, ವೈಶಾಕ್ ವಿಜಯ್ ದುಬಾರಿ ಸ್ಪೆಲ್ಗಳ ಪಂಜಾಬ್ ಕಿಂಗ್ಸ್ಗೆ ಮಾರಕವಾಗಿವೆ.
9 ವರ್ಷಗಳ ಬಳಿಕ ಫೈನಲ್ ಕನಸಿನಲ್ಲಿ ಬೆಂಗಳೂರು ಬಾಯ್ಸ್.!
ಲೀಗ್ ಹಂತದಲ್ಲಿ ಅದ್ಭುತ ಆಟವಾಡಿರುವ ಉಭಯ ತಂಡಗಳು, ಈಗ ಐಪಿಎಲ್ ಫೈನಲ್ ಕನವರಿಕೆಯಲ್ಲಿವೆ. 2014ರ ಬಳಿಕ ಫೈನಲ್ಗೇರುವ ಸುವರ್ಣವಕಾಶ ಹೊಂದಿರುವ ಪಂಜಾಬ್ ಕಿಂಗ್ಸ್, ಶತಯಗತಾಯ ಈ ಅವಕಾಶ ಸದ್ಬಳಕೆ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಇತ್ತ 2016ರ ಬಳಿಕ ಕ್ವಾಲಿಫೈಯರ್ ಆಡ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ, 9 ವರ್ಷಗಳ ಬಳಿಕ ಐಪಿಎಲ್ನಲ್ಲಿ ಪ್ರಶಸ್ತಿ ಸುತ್ತಿಗೇರುವ ಚಾನ್ಸ್ ಇದೆ. ಈ ಇಬ್ಬರಲಲ್ಲಿ ಯಾರು ಪ್ರಶಸ್ತಿ ಸುತ್ತಿಗೇರ್ತಾರೆ ಅನ್ನೋದನ್ನ ಜಸ್ಟ್ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ