ಚಾಂಪಿಯನ್ಸ್​ ಟ್ರೋಫಿ ಎಫೆಕ್ಟ್.. ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಭರ್ಜರಿ ಗಿಫ್ಟ್..!

author-image
Ganesh
Updated On
ಶ್ರೇಯಸ್​​ ಅಯ್ಯರ್​​, ಹಾರ್ದಿಕ್​ ಪಾಂಡ್ಯ ಅಬ್ಬರ; ನ್ಯೂಜಿಲೆಂಡ್​ಗೆ ಟೀಮ್​ ಇಂಡಿಯಾ 250 ರನ್​ ಟಾರ್ಗೆಟ್
Advertisment
  • ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ
  • ಶೀಘ್ರದಲ್ಲೇ ಅಯ್ಯರ್​ಗೆ ಬಿಸಿಸಿಐ ವಿಶೇಷ ಸ್ಥಾನ
  • ರಾಹುಲ್, ಅಕ್ಸರ್, ರಿಷಬ್​ಗೆ ಬಡ್ತಿ ಸಾಧ್ಯತೆ

ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಬಿಸಿಸಿಐನಿಂದ ಶ್ರೇಯಸ್ ಅಯ್ಯರ್​ಗೆ ಭರ್ಜರಿ ಗುಡ್​ನ್ಯೂಸ್ ಸಿಕ್ಕಿದೆ.

ವರದಿಗಳ ಪ್ರಕಾರ, ಬಿಸಿಸಿಐ ಶೀಘ್ರದಲ್ಲೇ ಅಯ್ಯರ್​ ಅವರಿಗೆ ಕೇಂದ್ರ ಒಪ್ಪಂದದಲ್ಲಿ ಸ್ಥಾನ ನೀಡಲಿದೆ. ಕಳೆದ ವರ್ಷ ಅಯ್ಯರ್ ಅವರನ್ನು ಒಪ್ಪಂದದಿಂದ ಕೈಬಿಟ್ಟಿತ್ತು. ಆದರೆ ಅವರೀಗ ನಿರಂತರವಾಗಿ ಟೀಂ ಇಂಡಿಯಾ ಪರ ಆಡ್ತಿದ್ದು, ಉತ್ತಮ ಪ್ರದರ್ಶನ ಕೂಡ ಕೊಡ್ತಿದ್ದಾರೆ.
ಕಳೆದ ವರ್ಷ ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಟ್ಟಿತ್ತು. ಅಯ್ಯರ್ ಮತ್ತೆ ಬಿಸಿಸಿಐ ಒಪ್ಪಂದಕ್ಕೆ ವಾಪಸ್ ಆಗಲಿದ್ದಾರೆ. ಆದರೆ ಅಯ್ಯರ್ ಯಾವ ಕೆಟಗರಿ ಒಪ್ಪಂದ ಪಡೆಯುತ್ತಾರೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಒಪ್ಪಂದದಲ್ಲಿ ಬಡ್ತಿ ನೀಡಬಹುದು.

ಇದನ್ನೂ ಓದಿ: ಫೈನಲ್​ನಲ್ಲಿ ನಾಲ್ವರು ರಿಯಲ್ ಗೇಮ್ ಚೇಂಜರ್; ಈ ಸ್ಟಾರ್​ ಮಿಂಚಿದ್ರೆ ಟ್ರೋಫಿ ಗ್ಯಾರಂಟಿ..!

publive-image

ಬಿಸಿಸಿಐನ ಎ ಪ್ಲಸ್ ವಿಭಾಗದಲ್ಲಿ ಕೇವಲ ನಾಲ್ಕು ಆಟಗಾರರಿದ್ದಾರೆ. ನಾಯಕ ರೋಹಿತ್ ಶರ್ಮಾ, ಅನುಭವಿ ಆಟಗಾರ ವಿರಾಟ್ ಕೊಹ್ಲಿ , ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಪಟ್ಟಿಯಲ್ಲಿದ್ದಾರೆ. ಎ ವಿಭಾಗದಲ್ಲಿ ಐದು ಆಟಗಾರರಿದ್ದಾರೆ. ಶಮಿ, ಸಿರಾಜ್, ಕೆಎಲ್ ರಾಹುಲ್ ಮತ್ತು ಗಿಕ್ ಅಶ್ವಿನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿಗೆ ಅನುದಾನ ಮೀಸಲಿಟ್ಟ ಸಿಎಂ ಸಿದ್ದರಾಮಯ್ಯ.. ಎಷ್ಟು ಸಾವಿರ ಕೋಟಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment