ಶತಕಕ್ಕೆ ಮೂರೇ 3 ರನ್​ ಬೇಕಿತ್ತು.. ಆದ್ರೂ ತಂಡಕ್ಕಾಗಿ ತ್ಯಾಗ ಮಾಡಿದ ಕ್ಯಾಪ್ಟನ್ ಶ್ರೇಯಸ್

author-image
Bheemappa
Updated On
ಶತಕಕ್ಕೆ ಮೂರೇ 3 ರನ್​ ಬೇಕಿತ್ತು.. ಆದ್ರೂ ತಂಡಕ್ಕಾಗಿ ತ್ಯಾಗ ಮಾಡಿದ ಕ್ಯಾಪ್ಟನ್ ಶ್ರೇಯಸ್
Advertisment
  • ಪಂದ್ಯದಲ್ಲಿ ಸೆಂಚುರಿ ಹೊಸ್ತಿಲಿನಲ್ಲೇ ಶ್ರೇಯಸ್ ಅಯ್ಯರ್ ಎಡವಿದ್ರಾ?
  • 3 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡ ಪಂಜಾಬ್ ಕ್ಯಾಪ್ಟನ್
  • ಶತಕದ ಸನಿಹಕ್ಕೆ ಬಂದು ರನ್ ಗಳಿಸಲಿಲ್ವಾ ಶ್ರೇಯಸ್ ಅಯ್ಯರ್?

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ಪಂಜಾಬ್ ಕಿಂಗ್ಸ್ ಪರ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅತ್ಯದ್ಭುತವಾದ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಕೇವಲ ಮೂರೇ 3 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡಿದ್ದಾರೆ. ಆ ಸೆಂಚುರಿ ಹೇಗೆ ಮಿಸ್ ಮಾಡಿಕೊಂಡರು ಎನ್ನುವ ಮಾಹಿತಿ ಇಲ್ಲಿದೆ.

ಗುಜರಾತ್ ಟೈಟನ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಪಂಜಾಬ್ ಪರ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪಂಜಾಬ್​ನ ಆರಂಭಿಕ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಶತಕ ಸಿಡಿಸುವ ಸಮೀಪಕ್ಕೆ ಬಂದಿದ್ದರು. ಆದರೆ ಅದು ಆಗಲಿಲ್ಲ. ತಮ್ಮ ಬ್ಯಾಟಿಂಗ್ ಪರ್ಫಾಮೆನ್ಸ್​ನಿಂದ ಫ್ರಾಂಚೈಸಿಯ ನಂಬಿಕೆ, ವಿಶ್ವಾಸ ಎಲ್ಲ ಉಳಿಸಿಕೊಂಡಿದ್ದಾರೆ ಎನ್ನಬಹುದು.

ಇದನ್ನೂ ಓದಿ:4, 4, 4, 6, 6, 6, 6, 6; ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಅರ್ಧ ಶತಕ ಹೇಗಿತ್ತು?

publive-image

ಬೌಲರ್​ಗಳ ಮೇಲೆ ಪರಾಕ್ರಮ ಮೆರೆದ ಶ್ರೇಯಸ್ ಅಯ್ಯರ್ ಅವರು ತಮ್ಮ ಅಮೂಲ್ಯವಾದ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿಯೇ ಕೇವಲ 27 ಎಸೆತದಲ್ಲಿ 3 ಬೌಂಡರಿ, 5 ಸಿಕ್ಸರ್​ ಸಮೇತ ಅರ್ಧಶತಕ ಪೂರೈಸಿದ್ದರು. ಇದು ಆದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಫೋರ್, ಸಿಕ್ಸರ್ ಬಾರಿಸುತ್ತ 97 ರನ್​ಗಳಿಗೆ ಬಂದು ನಿಂತರು. ಈ ವೇಳೆ 19 ಓವರ್ ಕಂಪ್ಲೇಟ್ ಆಯಿತು. 20ನೇ ಓವರ್​ನಲ್ಲಿ ಸ್ಟ್ರೈಕ್​ಗೆ ಶಶಾಂಕ್ ಸಿಂಗ್ ಬಂದರು.

ಮೊಹಮ್ಮದ್ ಸಿರಾಜ್ ಅವರ 20ನೇ ಓವರ್​ನಲ್ಲಿ ಶಶಾಂಕ್ ಅವರು, ಒಂದು ರನ್​ ತೆಗೆದು ಶ್ರೇಯಸ್​ ಅಯ್ಯರ್​ಗೆ ಸ್ಟ್ರೈಕ್​ ಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಶಶಾಂಕ್ 6 ಬಾಲ್​ಗಳಲ್ಲಿ ಮೊದಲ ಬಾಲ್ ಅನ್ನು ಬೌಂಡರಿ ಬಾರಿಸಿದರು. 2ನೇ ಬಾಲ್​ನಲ್ಲಿ 2 ರನ್​ ಓಡಿದ್ದರಿಂದ ಮತ್ತೆ ಸ್ಟ್ರೈಕ್​ ಶಶಾಂಕ್​ಗೆ ಬಂತು. 3ನೇ ಬಾಲ್ ಅನ್ನು ಫೋರ್ ಬಾರಿಸಿದರು. ಇದರ ಬೆನ್ನಲ್ಲೇ 4ನೇ ಬಾಲ್ ಅನ್ನು ಫೋರ್ ಹೊಡೆದರು. ಮತ್ತೊಂದು ವೈಡ್ ಬಂತು. ಇದು ಆದ ಮೇಲೆ 5 ಹಾಗೂ 6ನೇ ಬಾಲ್ ಕೂಡ ಶಶಾಂಕ್​ ಬೌಂಡರಿ ಬಾರಿಸಿದ್ದರಿಂದ ಶ್ರೇಯಸ್ ಅಯ್ಯರ್​ಗೆ ಸ್ಟ್ರೈಕ್​ ಸಿಗಲಿಲ್ಲ. 97 ರನ್​ಗಳಲ್ಲೇ ಉಳಿದು ಸೆಂಚುರಿ ಮಿಸ್ ಮಾಡಿಕೊಂಡರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment