/newsfirstlive-kannada/media/post_attachments/wp-content/uploads/2025/05/shreyas_iyer_test.jpg)
ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಟೀಮ್ ಇಂಡಿಯಾದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕ್ಯಾಪ್ಟನ್ ಹಾಗೂ ಉಪ ನಾಯಕನ ಹೆಸರನ್ನು ಅಂತಿಮಗೊಳಿಸಿದೆ. ಆದರೆ ಈ ಎಲ್ಲದರ ನಡುವೆಯೂ ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರ, ಭಾರತದ ಚಾಂಪಿಯನ್​ ಟ್ರೋಫಿ ಗೆಲುವಿಗೆ ಕಾರಣರಾಗಿದ್ದ ಶ್ರೇಯಸ್​ ಅಯ್ಯರ್ ಅವರನ್ನು ಟೆಸ್ಟ್​ನಿಂದ ಹೊರಗಿಡಲಾಗಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಮೇಲೆ ಶ್ರೇಯಸ್ ಅಯ್ಯರ್ ಹೆಸರು ಟೆಸ್ಟ್​ನಲ್ಲಿ ಹೆಚ್ಚಾಗಿ ಕೇಳಿ ಬಂದಿತ್ತು. ಅಲ್ಲದೇ ಶ್ರೇಯಸ್ ಅಯ್ಯರ್ ಭಾರತ ತಂಡದಲ್ಲಿ ಯಶಸ್ವಿ ಆಟಗಾರ. ಇಂತಹ ಆಟಗಾರನಿಗೆ ಈಗ ಟೆಸ್ಟ್​ ತಂಡದಲ್ಲಿ ಅವಕಾಶ ಕೊಡದೇ ಹೊರ ಗಿಟ್ಟಿರುವುದು ಕ್ರಿಕೆಟ್​ ವಲಯದಲ್ಲಿ ಚರ್ಚೆ ಮೂಡಿಸಿದೆ.
ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ನೀಡುತ್ತಾರೆ ಅನ್ನೋ ನಿರೀಕ್ಷೆ ಬೆಟ್ಟದಷ್ಟಿತ್ತು. ಇದಕ್ಕೆ ಕಾರಣ 2024ರಿಂದ ಶ್ರೇಯಶ್ ಅಯ್ಯರ್, ಟೀಮ್ ಇಂಡಿಯಾ ಪರ ಹಾಗೂ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ನೀಡಿದ ಪ್ರದರ್ಶನ.
ಇದನ್ನೂ ಓದಿ: ಬದ್ಧವೈರಿ ಆದರೂ ಚೆನ್ನೈ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ RCB.. ಯಾಕೆ ಗೊತ್ತಾ?
/newsfirstlive-kannada/media/post_attachments/wp-content/uploads/2025/05/shreyas_iyer-3.jpg)
2024ರ ಇಂಗ್ಲೆಂಡ್ ಎದುರಿನ ವಿಶಾಖಪಟ್ಟಣಂ ಟೆಸ್ಟ್ ಬಳಿಕ ಸ್ಥಾನ ಕಳೆದುಕೊಂಡಿದ್ದ ಶ್ರೇಯಸ್ ಅಯ್ಯರ್, ಅದೇ ವರ್ಷ ಮುಂಬೈ ರಣಜಿ ಗೆಲುವಿಗೆ ಕಾರಣರಾದರು. ಅಷ್ಟೇ ಅಲ್ಲ, ಸೀಸನ್​​-17ರ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ನಾಯಕನಾಗಿ ಮಿಂಚಿದ ಶ್ರೇಯಸ್ ಅಯ್ಯರ್, ಮೇ 26ರಂದು​​ ಕೆಕೆಆರ್​​ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಈ ಬೆನ್ನಲ್ಲೇ ಪ್ರತಿಷ್ಠಿತ ಇರಾನಿ ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್, 2024ರ ಸೈಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಮುಂಬೈ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಪ್ರಸಕ್ತ ಐಪಿಎಲ್​ನಲ್ಲೂ ಪಂಜಾಬ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಚಾಂಪಿಯನ್ಸ್​ ಟ್ರೋಫಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಶ್ರೇಯಸ್​ಗೆ ಬಿಸಿಸಿಐ ಟೆಸ್ಟ್ ತಂಡದಲ್ಲಿ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us