2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ
ಎಲ್ಲಾ ತಂಡಗಳು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಕೆ..!
ಕೆಕೆಆರ್ ತಂಡದಿಂದ ಕ್ಯಾಪ್ಟನ್ ಶ್ರೇಯಸ್ಗೆ ಕೊಕ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆದಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿಗೆ ಮುನ್ನ ಎಲ್ಲಾ ತಂಡಗಳು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಕೆ ಮಾಡಿವೆ. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಹರಾಜು ಯಾವಾಗ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಬಹಳ ಯೋಚನೆ ಮಾಡಿ ಅಳೆದು ತೂಗಿ ಕೆಕೆಆರ್ ತಂಡ 6 ಮಂದಿ ಆಟಗಾರರನ್ನು ಉಳಿಸಿಕೊಂಡಿದೆ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರನ್ನೇ ತಂಡದಿಂದ ಕೈ ಬಿಡಲಾಗಿದೆ.
ಯಾರಿಗೆ ಮಣೆ?
ಕೆಕೆಆರ್ ತಂಡವು ಬರೋಬ್ಬರಿ 13 ಕೋಟಿ ನೀಡಿ ರಿಂಕು ಸಿಂಗ್ ಅವರನ್ನು ರೀಟೈನ್ ಮಾಡಿಕೊಂಡಿದೆ. ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಇಬ್ಬರಿಗೂ ತಲಾ 12 ಕೋಟಿ ಕೊಟ್ಟು ಉಳಿಸಿಕೊಂಡಿದೆ. ಆಂಡ್ರಿ ರಸೆಲ್ 12 ಕೋಟಿ, ಹರ್ಷಿತ್ ರಾಣಾ 4 ಕೋಟಿ, ರಮಣದೀಪ್ ಸಿಂಗ್ ಅವರಿಗೆ 4 ಕೋಟಿ ಕೊಟ್ಟು ಉಳಿಸಿಕೊಂಡಿದೆ.
ಮುಂದಿನ ಸೀಸನ್ ಕೂಡ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಮುಂದಾಗಿರೋ ಕೆಕೆಆರ್ ಹಲವು ಬದಲಾವಣೆಗಳನ್ನು ಮಾಡಿದೆ. ಈ ಹಿಂದೆಯೇ ಐಪಿಎಲ್ ವಿನ್ನಿಂಗ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಬಹುದು ಎಂದು ಹೇಳಲಾಗಿತ್ತು. ಈಗ ಅಂತೆಯೇ ಶ್ರೇಯಸ್ ಅಯ್ಯರ್ ಅವರಿಗೆ ಕೊಕ್ ನೀಡಲಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಪಂತ್ಗೆ ಬಿಗ್ ಶಾಕ್; ಡೆಲ್ಲಿ ಉಳಿಸಿಕೊಂಡ ಆಟಗಾರರು ಇವರೇ ನೋಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ