/newsfirstlive-kannada/media/post_attachments/wp-content/uploads/2025/05/Shreyas-iyer-1.jpg)
ಕ್ವಾಲಿಫೈಯರ್ 1 ರಲ್ಲಿ ಸೋತ ಬಳಿಕ ಮಾತನಾಡಿರುವ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ನಾವು ಯುದ್ಧವನ್ನು ಕಳೆದುಕೊಂಡಿದ್ದೇವೆ, ಆದರೆ ಅದು ಯುದ್ಧವಲ್ಲ. ಹಾಗಂತ ಈ ದಿನವನ್ನು ಮರೆಯುವಂತಿಲ್ಲ. ಸಣ್ಣ ಹಿನ್ನಡೆ ಆಗಿದೆ ಅನ್ನೋ ರೀತಿಯಲ್ಲಿ ಮಾತನ್ನಾಡಿದ್ದಾರೆ.
ಈ ದಿನ ನಮಗೆ ನೆನಪಿನಲ್ಲಿ ಇರಬೇಕು. ನಾವು ಮತ್ತೆ ನಮ್ಮ ಕಾರ್ಯತಂತ್ರವನ್ನು ರೂಪಿಸಬೇಕು. ಮೊದಲ ಇನ್ನಿಂಗ್ಸ್‌ನಲ್ಲಿ ಬಹಳಷ್ಟು ವಿಕೆಟ್‌ಗಳನ್ನು ಕಳೆದುಕೊಂಡೆವು. ಅದರ ಬಗ್ಗೆ ಯೋಚಿಸಬೇಕಾಗಿರೋದು ತುಂಬಾನೇ ಇದೆ. ನಿಜ ಹೇಳಬೇಕು ಅಂದರೆ ನನ್ನ ನಿರ್ಧಾರಗಳನ್ನು ನಾನು ಅನುಮಾನಿಸುವುದಿಲ್ಲ. ಮೈದಾನದ ಹೊರಗೆ ಮತ್ತು ಒಳಗೆ ಏನೇ ಪ್ಲಾನ್ ಮಾಡಿದ್ದರೂ ಅದು ಸರಿಯಾಗಿದೆ ಎಂದು ಭಾವಿಸುತ್ತೇನೆ. ಈ ದಿನ ಅದು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ಆರ್ಸಿಬಿಯ ಒಂದೊಂದು ಅಸ್ತ್ರವೂ ಬೆಂಕಿಯ ಚೆಂಡು.. ಕಪ್ ಗೆಲ್ಲಲು ಇನ್ನೊಂದೇ ಹೆಜ್ಜೆ..!
ಈ ಸೋಲಿಗೆ ಬೌಲರ್‌ಗಳನ್ನು ದೂಷಿಸಲಾಗುವುದಿಲ್ಲ. ನಮ್ಮ ಸ್ಕೋರ್ ತುಂಬಾನೇ ಕಡಿಮೆ ಇತ್ತು. ನಾವು ಬ್ಯಾಟಿಂಗ್‌ನಲ್ಲಿ ಕೆಲಸ ಮಾಡಬೇಕು. ವಿಶೇಷವಾಗಿ ಇಂಥ ವಿಕೆಟ್‌ನಲ್ಲಿ. ಇಲ್ಲಿ ಆಡಿದ ಎಲ್ಲಾ ಪಂದ್ಯಗಳು ಏರಿಳಿತಗಳನ್ನು ಹೊಂದಿವೆ. ಹಾಗಾಗಿ ಸೋಲಿಗೆ ಅಂತಹ ಕಾರಣಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ನಾವು ವೃತ್ತಿಪರರು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಬೇಕು ಎಂದಿದ್ದಾರೆ.
ಪಂಜಾಬ್ ಇನ್ನೂ ಹೊರಬಂದಿಲ್ಲ..
ಪಂಜಾಬ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತರೂ ಅವರು ಐಪಿಎಲ್-2025 ರಿಂದ ಹೊರಗುಳಿದಿಲ್ಲ. ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಪಡೆದ ಲಾಭವನ್ನು ಪಡೆಯಲಿದೆ. ಈಗ ಪಂಜಾಬ್ ಕಿಂಗ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಅಲ್ಲಿ ಪಂಜಾಬ್ ಗೆದ್ದರೆ ಫೈನಲ್ ಪ್ರವೇಶಿಸುತ್ತದೆ.
ಇದನ್ನೂ ಓದಿ: ಪಂಜಾಬ್ಗೆ ನೀರು ಕುಡಿಸಿದ ಸಾಲ್ಟ್.. ಪವರ್ ಪ್ಲೇನಲ್ಲೇ ಪವರ್ ಕಟ್ ಆಗಿದ್ದು ಹೇಗೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ