/newsfirstlive-kannada/media/post_attachments/wp-content/uploads/2024/10/shreyas_iyer-1.jpg)
ಐಪಿಎಲ್​​ನ ಈ ಸಲದ ಹರಾಜಿನಲ್ಲಿ ಸ್ಟಾರ್ ಪ್ಲೇಯರ್​ಗಳೆಲ್ಲ ಅಖಾಡಕ್ಕೆ ಇಳಿಯುತ್ತಿದ್ದಾರೆ. ಡೆಲ್ಲಿ, ಕೋಲ್ಕತ್ತಾ ಸೇರಿದಂತೆ ಕೆಲ ತಂಡದ ನಾಯಕರು ಬೇರೆ ಟೀಮ್ ಅನ್ನು ಸೇರಿಕೊಳ್ಳಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಆರ್​ಸಿಬಿ ಫ್ರಾಂಚೈಸಿ ಕೂಡ ಹೊಸ ನಾಯಕನ ​ ಹುಡುಕಾಟದಲ್ಲಿದೆ. ಇದೀಗ ಮತ್ತೊಬ್ಬ ಯುವ ಸ್ಟಾರ್​ ಪ್ಲೇಯರ್ ಶ್ರೇಯಸ್ ಅಯ್ಯರ್​ ಆರ್​ಸಿಬಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆರ್​ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಕಳೆದ ಬಾರಿ ಟ್ರೋಫಿ ಗೆಲ್ಲುವಲ್ಲಿ ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಆರ್​ಸಿಬಿ ಹೊಸ ನಾಯಕನನ್ನ ಕರೆದುಕೊಂಡು ಬರಲು ಪ್ರಯತ್ನದಲ್ಲಿ ಇದೆ. ಇದಕ್ಕೆ ಪೂರಕ ಎನ್ನುವಂತೆ ಈ ಸಲದ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹರಾಜಿಗೆ ಬರುತ್ತಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಟೀಮ್ ಇಂಡಿಯಾ ಜರ್ಸಿ ತೊಡಲು ಸಜ್ಜಾದ ಮತ್ತೊಬ್ಬ ಕನ್ನಡಿಗ
ಹೀಗಾಗಿ ಅಯ್ಯರ್​ನ್ನ ತಂಡಕ್ಕೆ ಕರೆತಂದರೆ ಆರ್​ಸಿಬಿಗೆ ಟ್ರೋಫಿ ಗೆಲ್ಲುವ ಆಸೆ ಮತ್ತೊಮ್ಮೆ ಚಿಗುರೊಡೆಯಬಹುದು. ಜೊತೆಗೆ ಯುವ ಸ್ಟಾರ್ ಪ್ಲೇಯರ್ ಆಗಿದ್ದರಿಂದ ತಂಡದಲ್ಲಿ ಕೆಲ ವರ್ಷಗಳ ಕಾಲ ಉಳಿಸಿಕೊಳ್ಳಬಹುದು. ಈಗಾಗಲೇ ಕೆಕೆಆರ್​ಗೆ ಟ್ರೋಫಿ ಗೆದ್ದುಕೊಟ್ಟ ಅಯ್ಯರ್​ ಅದನ್ನೇ ಆರ್​ಸಿಬಿಯಲ್ಲೂ ಮುಂದುವರೆಸಬಹುದು. ಇದರಿಂದ ಆರ್​ಸಿಬಿ ಯುವ ಆಟಗಾರರನ್ನ ಕರೆತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಅಯ್ಯರ್​ರನ್ನ ಕೋಲ್ಕತ್ತಾ ನೈಟ್​ ರೈಡರರ್ಸ್ ಹರಾಜಿಗೆ ಬಿಟ್ಟರೇ ಆಕ್ಷನ್​​ನಲ್ಲಿ ಆರ್​ಸಿಬಿ ಬೇರೆ ಫ್ರಾಂಚೈಸಿಯೊಂದಿಗೆ ಪೈಪೋಟಿ ಮಾಡಿ ಅಯ್ಯರ್​ರನ್ನ ಕರೆತರಬಹುದು. ಅಯ್ಯರ್​ಗೆ ಕಿಂಗ್ಸ್​ ಇಲೆವೆನ್ ಪಂಜಾಬ್ ಕೂಡ ಗಾಳ ಹಾಕಿದೆ ಎನ್ನಲಾಗುತ್ತಿದೆ. ಏಕೆಂದರೆ ಅನುಭವಿ, ಸ್ಟಾರ್ ಪ್ಲೇಯರ್​ನನ್ನ ತಂಡಕ್ಕೆ ಕರೆದುಕೊಂಡು ಬರಲು ಪಂಜಾಬ್ ಫ್ರಾಂಚೈಸಿ ತೆರೆಮರೆಯಲ್ಲಿ ಸಾಕಷ್ಟು ಕೆಲಸಗಳನ್ನ ಮಾಡುತ್ತಿದೆ. ಆದರೆ ಆರ್​ಸಿಬಿ ಕೂಡ ಶ್ರೇಯಸ್ ಅಯ್ಯರ್ ಮೇಲೆ ಕಣ್ಣಿಟ್ಟಿದೆ. ಇದಕ್ಕೆಲ್ಲಾ ಅಂತಿಮವಾಗಿ ಆಕ್ಷನ್​​ನಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ