newsfirstkannada.com

ಬಿಸಿಸಿಐ ಗುತ್ತಿಗೆಯಿಂದ ಕೈ ಬಿಟ್ಟ ಬೆನ್ನಲ್ಲೇ ಬುದ್ಧಿ ಕಲಿತ ಶ್ರೇಯಸ್​ ಅಯ್ಯರ್​; ರಣಜಿ ಆಡಲು ನಿರ್ಧಾರ!

Share :

Published February 29, 2024 at 5:26pm

  ಟೀಮ್​ ಇಂಡಿಯಾದಿಂದ ಕೈ ಬಿಟ್ಟ ಬೆನ್ನಲ್ಲೇ ಎಚ್ಚೆತ್ತ ಅಯ್ಯರ್​​

  ರಣಜಿ ಕ್ರಿಕೆಟ್​ ಆಡಲು ಸ್ಟಾರ್​ ಕ್ರಿಕೆಟರ್​ ಅಯ್ಯರ್​ ನಿರ್ಧಾರ!

  ಮುಂಬೈ ತಂಡದ ಪರ ರಣಜಿ ಕ್ರಿಕೆಟ್​​ ಆಡಲಿರೋ ಶ್ರೇಯಸ್​​

ಬಿಸಿಸಿಐ ಮಾತಿಗೆ ಕ್ಯಾರೇ ಎನ್ನದೆ ರಣಜಿ ಕ್ರಿಕೆಟ್​ ಆಡಲು ಹಿಂದೇಟು ಹಾಕಿದ್ದ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ಶ್ರೇಯಸ್​ ಅಯ್ಯರ್​ಗೆ ಗುತ್ತಿಗೆ ಪಟ್ಟಿಯಿಂದ ಕೊಕ್​ ನೀಡಲಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಶ್ರೇಯಸ್​ ಅಯ್ಯರ್​ ಕೊನೆಗೂ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ.

ಹೌದು, ಮಾರ್ಚ್​​ 2ನೇ ತಾರೀಕಿನಿಂದ ತಮಿಳುನಾಡು ವಿರುದ್ಧ ನಡೆಯೋ ರಣಜಿ ಸೆಮಿ ಫೈನಲ್‌ನಲ್ಲಿ ಮುಂಬೈ ಪರ ಆಡಲಿದ್ದಾರೆ. ಈ ಪಂದ್ಯಕ್ಕೆ ಈಗಾಗಲೇ ಮುಂಬೈ ತಂಡ ಪ್ರಕಟಗೊಂಡಿದ್ದು, ಶ್ರೇಯಸ್‌ ಅಯರ್​ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇನ್ನು, ಬೆನ್ನು ನೋವಿನಿಂದಾಗಿ ಶ್ರೇಯಸ್‌ ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದರು. ಬಳಿಕ ಎನ್‌ಸಿಎಗೆ ಆಗಮಿಸಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿ ಸುಧಾರಿಸಿಕೊಂಡಿದ್ದರು. ಹೆಡ್​ ಕೋಚ್​​ ರಾಹುಲ್​ ದ್ರಾವಿಡ್​ ರಣಜಿ ಆಡಿ ಎಂದಿದ್ರೂ ಕ್ಯಾರೇ ಎನ್ನದೆ ಶ್ರೇಯಸ್ ಅಯ್ಯರ್​ ರೆಸ್ಟ್​ನಲ್ಲಿ ಇದ್ದರು.

ಅಸಲಿಗೆ ಆಗಿದ್ದೇನು..?

ಬಿಸಿಸಿಐ ತಮ್ಮ ಒಪ್ಪಂದದ ಆಟಗಾರರು ರಣಜಿ ಟ್ರೋಫಿ ಆಡಬೇಕೆಂದು ಖಡಕ್ ಆಗಿ ಹೇಳಿತ್ತು. ಈ ಬಗ್ಗೆ ಪ್ರತಿ ಆಟಗಾರರಿಗೆ ಪತ್ರ ಬರೆದು ಬಿಸಿಸಿಐ ಜನರಲ್​ ಸೆಕ್ರೆಟರಿ ಜಯ್​ ಶಾ ಅವರೇ ಸೂಚನೆ ನೀಡಿದ್ದರು. ಭಾರತ ತಂಡದಿಂದ ಹೊರಗುಳಿದ ಎಲ್ಲರೂ ರಣಜಿ ಆಡಲೇಬೇಕು ಎಂದು ವಾರ್ನಿಂಗ್​ ಕೊಟ್ಟಿದ್ದರು. ಅಷ್ಟೇ ಅಲ್ಲ, ಹೆಡ್​​ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ಅದೇ ಸಲಹೆ ನೀಡಿದ್ದರು. ಆದರೆ, ಇಶಾನ್ ಕಿಶನ್ ಮತ್ತು ಶ್ರೇಯಸ್ ಇದಕ್ಕೆ ಗಮನ ಕೊಡದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಸಿಸಿಐ ಗುತ್ತಿಗೆಯಿಂದ ಕೈ ಬಿಟ್ಟ ಬೆನ್ನಲ್ಲೇ ಬುದ್ಧಿ ಕಲಿತ ಶ್ರೇಯಸ್​ ಅಯ್ಯರ್​; ರಣಜಿ ಆಡಲು ನಿರ್ಧಾರ!

https://newsfirstlive.com/wp-content/uploads/2023/10/Shreyas-Iyer_Short-Ball.jpg

Load More