ಚಾಂಪಿಯನ್ ಕ್ಯಾಪ್ಟನ್​ಗೆ IPL ಫ್ರಾಂಚೈಸಿ ಸ್ಕೆಚ್.. ಹಳೆ ಆಟಗಾರನ ಖರೀದಿ ಮಾಡುತ್ತಾ?

author-image
Bheemappa
Updated On
ಚಾಂಪಿಯನ್ ಕ್ಯಾಪ್ಟನ್​ಗೆ IPL ಫ್ರಾಂಚೈಸಿ ಸ್ಕೆಚ್.. ಹಳೆ ಆಟಗಾರನ ಖರೀದಿ ಮಾಡುತ್ತಾ?
Advertisment
  • ರಿಟೈನ್ ಲಿಸ್ಟ್​​​ನಲ್ಲಿ ತಮ್ಮ ತಂಡದ ನಾಯಕನನ್ನ ಕೈ ಬಿಟ್ಟಿದ್ದ ಫ್ರಾಂಚೈಸಿ
  • IPL ಮೆಗಾ ಆಕ್ಷನ್​ನಲ್ಲಿ ಭಾರೀ ಬೆಲೆ ಕುದುರಿಸಿಕೊಳ್ತಾರಾ ಪ್ಲೇಯರ್ಸ್?
  • ಹಳೆಯ ಆಟಗಾರನ ಮೇಲೆ ಆಸೆ ಇಟ್ಟುಕೊಂಡ ಫ್ರಾಂಚೈಸಿ, ಯಾಕೆ?

10 ತಂಡದ ಫ್ರಾಂಚೈಸಿಗಳು 2025ರ ಐಪಿಎಲ್​ ರಿಟೈನ್ ಪಟ್ಟಿಯನ್ನ ಈಗಾಗಲೇ ಅನೌನ್ಸ್ ಮಾಡಿದ್ದು ಕೆ.ಎಲ್ ರಾಹುಲ್ ಸೇರಿದಂತೆ ಇನ್ನಿಬ್ಬರು ನಾಯಕರು ಹರಾಜಿಗೆ ಹೋಗಲು ಸಿದ್ಧರಾಗಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಫ್ರಾಂಚೈಸಿಯು ತಮ್ಮ ತಂಡದ ಹಳೆ ಪ್ಲೇಯರ್, ಯಂಗ್​ ಕ್ಯಾಪ್ಟನ್​ ಅನ್ನು ತಂಡಕ್ಕೆ ಕರೆದುಕೊಂಡು ಬರಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪ್​ಡೇಟ್​ ಒಂದು ಹೊರ ಬಿದ್ದಿದೆ.

ರಿಟೈನ್​ ಪಟ್ಟಿಯನ್ನು ಬಿಡುಗಡೆ ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್​ ಕೀಪರ್ ಕಮ್ ಬ್ಯಾಟರ್ ರಿಷಬ್ ಪಂತ್​ರನ್ನ ತಂಡದಿಂದ ಕೈ ಬಿಟ್ಟಿದೆ. ಹೀಗಾಗಿ ಯುವ ನಾಯಕನ ಹುಡುಕಾಟದಲ್ಲಿ ಡೆಲ್ಲಿ ಫ್ರಾಂಚೈಸಿ ಇದೆ. ಹೀಗಾಗಿ ಕೋಲ್ಕತ್ತಾ ನೈಟ್​​ ರೈಡರ್ಸ್​ ತಂಡದ ನಾಯಕ ಆಗಿದ್ದ ಶ್ರೇಯಸ್ ಅಯ್ಯರ್​ನ್ನ ತಮ್ಮ ಟೀಮ್​ಗೆ ಕರೆದುಕೊಂಡು ಬರಲು ಡೆಲ್ಲಿ ತಂತ್ರಗಾರಿಕೆ ಮಾಡುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:IND vs AUS; ಕೆಎಲ್ ರಾಹುಲ್ ಔಟ್.. 3ನೇ ಅಂಪೈರ್​ ವಿರುದ್ಧ​ ರಾಬಿನ್ ಉತ್ತಪ್ಪ ಗರಂ

publive-image

ಏಕೆಂದರೆ ಶ್ರೇಯಸ್ ಅಯ್ಯರ್​ ಅವರನ್ನು ಕೋಲ್ಕತ್ತಾ ತಂಡದಿಂದ ಹೊರಗಿಟ್ಟಿದೆ. ಹೀಗಾಗಿ ಪಂತ್ ಸ್ಥಾನಕ್ಕೆ ಬಲಿಷ್ಠ ಯುವ ಪ್ಲೇಯರ್​ ಆದ ಶ್ರೇಯಸ್ ಅಯ್ಯರ್​ ಬಂದರೆ ಸೂಕ್ತ ಎಂದು ಫ್ರಾಂಚೈಸಿಯ ಆಲೋಚನೆ ಆಗಿದೆ. ಇದರ ಜೊತೆಗೆ ಈ ಮೊದಲು ಅಯ್ಯರ್ ಡೆಲ್ಲಿಯಲ್ಲಿ ಆಡಿದ್ದರು. ಹೀಗಾಗಿ ಹಳೆಯ ಆಟಗಾರನಿಗೆ ತಂಡದ ನೇತೃತ್ವ ವಹಿಸುವ ಇರಾದೆಯಲ್ಲಿ ಫ್ರಾಂಚೈಸಿ ಇದೆ .

ಈ ಸಲದ ಐಪಿಎಲ್ ಟೂರ್ನಿಯಲ್ಲಿ ಮೂರು ಫ್ರಾಂಚೈಸಿಗಳು ತಮ್ಮ ತಮ್ಮ ತಂಡದ ಕ್ಯಾಪ್ಟನ್​ ಅನ್ನು ರಿಟೈನ್ ಮಾಡಿಕೊಂಡಿಲ್ಲ. ಲಕ್ನೋದ ತಂಡದಲ್ಲಿದ್ದ ಕೆ.ಎಲ್​ ರಾಹುಲ್, ಡೆಲ್ಲಿಯ ರಿಷಬ್ ಪಂತ್ ಹಾಗೂ ಕೋಲ್ಕತ್ತಾದ ಶ್ರೇಯಸ್ ಅಯ್ಯರ್ ಸದ್ಯ ಮೆಗಾ ಆಕ್ಷನ್​ಗೆ ರೆಡಿಯಾಗಿದ್ದಾರೆ. ಹೀಗಾಗಿ 2024ರ ಐಪಿಎಲ್ ಚಾಂಪಿಯನ್ ತಂಡದ ನಾಯಕ ಆಗಿದ್ದ ಶ್ರೇಯಸ್ ಮೇಲೆ ಡೆಲ್ಲಿ ತುಂಬಾ ಆಸೆಯನ್ನು ಇಟ್ಟುಕೊಂಡಿದೆ. ಆದರೆ ಮೆಗಾ ಆಕ್ಷನ್​​ನಲ್ಲಿ ಯಾವ ತಂಡದ ಪಾಲಾಗುತ್ತಾರೆ ಎಂಬುದುನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment