/newsfirstlive-kannada/media/post_attachments/wp-content/uploads/2024/06/ROHIT_GILL.jpg)
ಟೆಸ್ಟ್, ಏಕದಿನ ಹಾಗೂ ಟಿ-20 ಕ್ರಿಕೆಟ್. ಮೂರು ಮಾದರಿಯ ಕ್ರಿಕೆಟ್ಗೆ ಟೀಂ ಇಂಡಿಯಾ ಬೇರೆ ಬೇರೆ ನಾಯಕರನ್ನ ಹೊಂದಿದೆ. ಏಕದಿನ ಕ್ರಿಕೆಟ್ಗೆ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಿದ್ದರೆ, ಟೆಸ್ಟ್ ಕ್ರಿಕೆಟ್ಗೆ ಶುಬ್ಮನ್ ಗಿಲ್ ನಾಯಕರಾಗಿದ್ದಾರೆ.
ಇನ್ನು, ಟಿ-20 ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ಗೂ ನಿವೃತ್ತಿ ಹೇಳುವ ಅಂಚಿನಲ್ಲಿದ್ದಾರೆ. ಹೀಗಾಗಿ ಬಿಸಿಸಿಐ ಏಕದಿನ ಕ್ರಿಕೆಟ್ಗೆ ಬಲಿಷ್ಠ ನಾಯಕನ ಹುಡುಕಾಟದಲ್ಲಿದೆ. ಮಾಹಿತಿಗಳ ಪ್ರಕಾರ, ಶ್ರೇಯಸ್ ಅಯ್ಯರ್ಗೆ ನಾಯಕತ್ವ ನೀಡುವ ಲೆಕ್ಕಾಚಾರದಲ್ಲಿ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಬಿದ್ದ ಜಾಗದಲ್ಲೇ ಕಪ್ ಗೆಲ್ಲಿಸಿಕೊಟ್ಟ.. ಚಾಂಪಿಯನ್ ಆರ್ಸಿಬಿಯ ಆ ಹೀರೋ ಯಾರು ಗೊತ್ತಾ..?
ಕಳೆದ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ಗೆ ಕಪ್ ಗೆಲ್ಲಿಸಿಕೊಟ್ಟಿದ್ದ ಅಯ್ಯರ್, ಈ ಬಾರಿ ಪಂಜಾಬ್ ಕಿಂಗ್ಸ್ ಪರ ಆಡಿದರು. ನಾಯಕರಾಗಿ ಪಂಜಾಬ್ ತಂಡವನ್ನು ಮುನ್ನಡೆಸಿರುವ ಅಯ್ಯರ್, ಅದ್ಭುತ ಆಟದೊಂದಿಗೆ ತಂಡವನ್ನು ಫೈನಲ್ ತನಕ ಕೊಂಡೊಯ್ದಿರುವ ಹೆಗ್ಗಳಿಕೆ ಇವರದ್ದಾಗಿದೆ. ಹೀಗಾಗಿ ವೈಟ್ಬಾಲ್ ಕ್ರಿಕೆಟ್ಗೆ ಅಯ್ಯರ್ ಅವರನ್ನು ನಾಯಕರಾಗಿ ಘೋಷಣೆ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಇದನ್ನೂ ಓದಿ: ಆಂಗ್ಲರ ಕಾಡಲು ದೋಸ್ತಿಗಳು ರೆಡಿ.. ರೋಹಿತ್ ಸ್ಥಾನಕ್ಕೆ ರಾಹುಲ್, ಕೊಹ್ಲಿ ಸ್ಲಾಟ್ಗೆ ಮತ್ತೊಬ್ಬ ಕನ್ನಡಿಗ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ