/newsfirstlive-kannada/media/post_attachments/wp-content/uploads/2025/02/Shreyas-Iyer.jpg)
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಗೆಲುವಿಗೆ ಅದ್ಭುತ ಕೊಡುಗೆ ನೀಡಿದರು. 36 ಬಾಲ್ನಲ್ಲಿ ಎರಡು ಸಿಕ್ಸರ್, 9 ಬೌಂಡರಿ ಬಾರಿಸಿ 59 ರನ್ಗಳನ್ನು ಬಾರಿಸಿದರು. ಆ ಮೂಲಕ ಇಂಗ್ಲೆಂಡ್ ನೀಡಿದ್ದ 249 ರನ್ಗಳ ಗುರಿಯನ್ನ ಭಾರತ ತಂಡ ನಾಲ್ಕು ವಿಕೆಟ್ಗಳೊಂದಿಗೆ ಗೆಲುವು ಸಾಧಿಸಿತು. ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಪ್ರಕಾರ, ಪ್ಲೇಯಿಂಗ್-11ನಲ್ಲಿ ಅಯ್ಯರ್ಗೆ ಸ್ಥಾನ ಇರಲಿಲ್ಲ. ಕೊನೆ ಕ್ಷಣದಲ್ಲಿ ಆಡುವ ಅವಕಾಶ ಹೇಗೆ ಸಿಕ್ಕಿತು ಅಂತಾ ವಿವರಿಸಿದ್ದಾರೆ.
ಅಯ್ಯರ್ ಏನಂದ್ರು..?
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಅಯ್ಯರ್.. ರಾತ್ರಿ ಸಿನಿಮಾ ನೋಡುತ್ತಿದ್ದೆ.. ಸಿನಿಮಾ ನೋಡಿಯೇ ರಾತ್ರಿ ಕಳೆಯಬೇಕು ಅಂದುಕೊಂಡಿದ್ದೆ. ಸಿನಿಮಾ ನೋಡುತ್ತಿರಬೇಕಾದರೆ ನಾಯಕ (ರೋಹಿತ್ ಶರ್ಮಾ)ನಿಂದ ಕರೆ ಬಂತು. ವಿರಾಟ್ ಕೊಹ್ಲಿ ಅವರ ಮೊಣಕಾಲು ಊದಿಕೊಂಡಿದೆ, ನೀವು ಆಡಬಹುದು ಎಂದರು. ನಾನು ರೂಮಿಗೆ ವಾಪಸ್ ಆದೆ. ತಕ್ಷಣ ಮಲಗಲು ನಿರ್ಧರಿಸಿದೆ ಅಂತಾ ತಿಳಿಸಿದರು.
ಮಾತು ಮುಂದುವರಿಸಿ.. ನಾನು ಈ ಕ್ಷಣವನ್ನು ಮತ್ತು ಗೆಲುವನ್ನು ಪ್ರೀತಿಸುತ್ತೇನೆ. ಮೊದಲ ಪಂದ್ಯ ಆಡುವ ಅವಕಾಶ ನನಗೆ ಇರಲಿಲ್ಲ. ದುರಾದೃಷ್ಟವಶಾತ್ ಕೊಹ್ಲಿ ಗಾಯಗೊಂಡರು. ಇದರಿಂದ ನನಗೆ ಅವಕಾಶ ಸಿಕ್ಕಿತು. ರೋಹಿತ್ ಹೇಳುತ್ತಿದ್ದಂತೆಯೇ ನನ್ನನ್ನು ನಾನು ಸಿದ್ಧಪಡಿಸಿಕೊಂಡೆ. ಯಾವುದೇ ಸಂದರ್ಭದಲ್ಲೂ ನನಗೆ ಆಡುವ ಅವಕಾಶ ಸಿಗಬಹುದು ಅಂತಾ ತಿಳಿದಿತ್ತು ಎಂದಿದ್ದಾರೆ.
ಇದನ್ನೂ ಓದಿ: ವಿಶ್ವ ಗೆದ್ದ ಅಲೆಕ್ಸಾಂಡರ್ನ ಕುದುರೆಯ ಹೆಸರೇನು? ತನ್ನ ಕುದುರೆಯ ಹೆಸರಲ್ಲಿ ಒಂದು ನಗರವನ್ನೇ ಸೃಷ್ಟಿಸಿದ್ದ ಸಿಕಂದರ್!
ಕಳೆದ ವರ್ಷ ಏಷ್ಯಾ ಕಪ್‌ನಲ್ಲೂ ನನಗೂ ಇದೇ ರೀತಿ ಆಯಿತು. ನಾನು ಗಾಯಗೊಂಡಿದ್ದೆ ಮತ್ತು ಬೇರೊಬ್ಬರು ಬಂದು ಶತಕ ಗಳಿಸಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ದೇಶೀಯ ಕ್ರಿಕೆಟ್ನಲ್ಲಿ ಆಡಿದೆ. ಅಲ್ಲಿ ನಾನು ಬಹಳಷ್ಟು ಕಲಿತೆ ಎಂದಿದ್ದಾರೆ. ಈ ಹಿಂದೆ ದೇಶಿಯ ಕ್ರಿಕೆಟ್ ಆಡದಿರೋದಕ್ಕೆ ಅಯ್ಯರ್ ಟೀಕೆಗೆ ಒಳಗಾಗಿದ್ದರು. ಅಲ್ಲದೇ, ಬಿಸಿಸಿಐ ಅವರನ್ನು ತಂಡದಿಂದ ಕೈಬಿಟ್ಟಿತ್ತು.
ಇದನ್ನೂ ಓದಿ: ಗಿಲ್, ಅಯ್ಯರ್, ಪಟೇಲ್ ಬ್ಯಾಟಿಂಗ್ ಅಬ್ಬರ.. ರೋಹಿತ್, ರಾಹುಲ್ ಮತ್ತೆ ದುರ್ಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ